AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಾಂಡ್​ ಸೆಂಟರ್​​ ಕಟ್ಟಡ ಶುಕ್ರವಾರ ಉದ್ಘಾಟನೆ: ಡಿ ರೂಪಾ ಸರ್ಕಾರಕ್ಕೆ 450 ಕೋಟಿ ರೂ ಉಳಿಸಿದ್ದು ಹೀಗೆ

ನಿರ್ಭಯ ನಿಧಿ ಅಡಿಯಲ್ಲಿ ನಗರದಲ್ಲಿ ನಿರ್ಮಾಣವಾಗಿರುವ ಬೆಂಗಳೂರು ನಗರ ಸೇಫ್​ ಸಿಟಿ ಕಮಾಂಡ್​ ಸೆಂಟರ್​​ ಕಟ್ಟಡವನ್ನು ನಾಳೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಈ ಯೋಜನೆಯ ಟೆಂಡರ್​ ವಿಚಾರದಲ್ಲಿ ಗೋಲ್​ಮಾಲ್​​ ಕೂಡ ನಡೆದಿತ್ತು. ಐಪಿಎಸ್​​ ಅಧಿಕಾರಿ ಡಿ. ರೂಪಾ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಆ ಮೂಲ ಅವರು ಸರ್ಕಾರಕ್ಕೆ 450 ಕೋಟಿ ರೂ. ಉಳಿತಾಯ ಮಾಡಿದ್ದರು.

ಕಮಾಂಡ್​ ಸೆಂಟರ್​​ ಕಟ್ಟಡ ಶುಕ್ರವಾರ ಉದ್ಘಾಟನೆ: ಡಿ ರೂಪಾ ಸರ್ಕಾರಕ್ಕೆ 450 ಕೋಟಿ ರೂ ಉಳಿಸಿದ್ದು ಹೀಗೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Nov 24, 2023 | 12:59 PM

Share

ಬೆಂಗಳೂರು, ನವೆಂಬರ್​​ 23: ನಿರ್ಭಯ ನಿಧಿ ಅಡಿಯಲ್ಲಿ ನಗರದ ಪೊಲೀಸ್​​ ಆಯುಕ್ತರ ಕಛೇರಿ ಬಳಿಯ ಅಲಿ ಆಸ್ಕರ್​ ರಸ್ತೆಯಲ್ಲಿ ನಿರ್ಮಾಣವಾಗಿರುವ ಬೆಂಗಳೂರು ನಗರ ಸೇಫ್​ ಸಿಟಿ ಕಮಾಂಡ್​ ಸೆಂಟರ್​​ (Safe City Command Center) ಕಟ್ಟಡವನ್ನು ನಾಳೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಈ ಯೋಜನೆಗೆ ಈ ಹಿಂದೆ ಸುಮಾರು 900 ಕೋಟಿ ರೂ. ಟೆಂಡರ್​ ಆಗಿತ್ತು. ಆದರೆ ಆಗ ಐಪಿಎಸ್​​ ಅಧಿಕಾರಿ ಡಿ. ರೂಪಾ ಟೆಂಡರ್​ ಪ್ರಕ್ರಿಯೆ ಬಗ್ಗೆ ಪ್ರಶ್ನೆ  ಮಾಡಿದ್ದರು. ಅದಕ್ಕೆ ಪ್ರತಿಫಲವಾಗಿ ಅವರು ತಮ್ಮ ಹುದ್ದೆ ಕಳೆದುಕೊಳ್ಳಬೇಕಾಯಿತು. ಆದರೆ ಈಗ ಅದೇ ಯೋಜನೆಯ ಸುಮಾರು 495 ಕೋಟಿ ರೂ. ಜಾರಿಗೆ ಬರುತ್ತಿದೆ. ಆ ಮೂಲಕ ಸರ್ಕಾರಕ್ಕೆ 450 ಕೋಟಿ ರೂ. ಉಳಿತಾಯ ಮಾಡಿದ್ದಾರೆ.

ನಿರ್ಭಯ ನಿಧಿ ಅಡಿಯ ಬೆಂಗಳೂರು ನಗರ ಸೇಫ್​ ಸಿಟಿ ಯೋಜನೆಯ ಟೆಂಡರ್​ ಪ್ರಕ್ರಿಯೆಯಲ್ಲಿ ಗೋಲ್​ಮಾಲ್​ ನಡೆದಿದೆ ಎಂದು ಐಪಿಎಸ್​​ ಅಧಿಕಾರಿ ಡಿ. ರೂಪಾ ಈ ಹಿಂದೆಯೇ ಆರೋಪಿಸಿದ್ದರು. ಈ ಕುರಿತಾಗಿ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಕೂಡ ಬರೆದಿದ್ದರು. ಸೇಫ್​ ಸಿಟಿ ಯೋಜನೆಯ ಟೆಂಡರ್ ವಿಚಾರವಾಗಿಯೇ ಡಿ. ರೂಪಾ ಮತ್ತು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್​​ ಕಮಿಷನರ್​​ ಆಗಿದ್ದ ಹೇಮಂತ್ ನಿಂಬಾಳ್ಕರ್​ ಮಧ್ಯೆ ಜಟಾಪಟಿಗೆ ಕೂಡ ಕಾರಣವಾಗಿತ್ತು.

ಮೊದಲ ಬಾರಿಗೆ ಗುತ್ತಿಗೆ ನೀಡಲು ಟೆಂಡರ್​ ಕರೆದಾಗ, ಮೆಟ್ರಿಕ್​ ಸರ್ವೆಲೆನ್ಸ್​ ಮತ್ತು ಇನ್ನೊಂದು ಕಂಪೆನಿ ಅತೀ ಕಡಿಮೆ ಹಣದಲ್ಲಿ ಅಂದರೆ ರೂ 950 ಕೋಟಿ ಅಂದಾಜು ಮೊತ್ತಕ್ಕೆ ಕೆಲಸ ಮಾಡಲು ಮುಂದೆ ಬಂದವು. ಆಗ ಈ ವಿಚಾರ ಪ್ರಧಾನಿ ಕಾಯಾರ್ಲಯದ ತನಕ ಹೋಗಿತ್ತು. ಯಾಕೆಂದರೆ, ಈ ಎರಡು ಕಂಪೆನಿಗಳ ನಿರ್ದೇಶಕರು ಒಂದೇ ಎಂಬುದು ವಾದವಾಗಿತ್ತು. ರೂಪಾ ಅವರು ಈ ವಿಚಾರ ಎತ್ತಿದ ಮೇಲೆ, ಟೆಂಡ್​ರ್​ ರದ್ದು ಪಡಿಸಿದ ಸರ್ಕಾರ, ಹೊಸದಾಗಿ ಹರಾಜು ಮಾಹಿತಿ ನೀಡಿತು. ಆಗ ಹನಿವೆಲ್​ ಟೆಕ್ನಾಲಜಿಸ್​ ಅವರು ರೂ 495 ಕೋಟಿಗೆ ಕೆಲಸ ಮಾಡಲು ಮುಂದೆ ಬಂದಿತು. ಅದು ಈಗ ಸಾಕಾರಗೊಳ್ಳುತ್ತಿದೆ.

ಇದನ್ನೂ ಓದಿ: Bengaluru Safe City project: ಏನಿದು ಸೇಫ್​ ಸಿಟಿ ಪ್ರಾಜೆಕ್ಟ್, ಬೆಂಗಳೂರಿಗೇಕೆ ಮುಖ್ಯ?

ಸದ್ಯ ಇಡೀ ಯೋಜನೆಯ ಒಂದು ಭಾಗವಾಗಿ ಈ ಬೆಂಗಳೂರು ನಗರ ಸೇಫ್​ ಸಿಟಿ ಕಮಾಂಡ್​ ಸೆಂಟರ್​​ ಕಟ್ಟಡ ಉದ್ಘಾಟನೆ ಮಾಡಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್​​, ಗೃಹ ಸಚಿವ ಜಿ. ಪರಮೇಶ್ವರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​, ಕೇಂದ್ರ ಸಚಿವ ಎಂ. ರಾಜೀವ್​ ಚಂದ್ರಶೇಖರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  ​​

ಸೇಫ್ ಸಿಟಿ ಯೋಜನೆಯ ಹೈಲೈಟ್ಸ್

  • 5500 ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ
  • ಮಹಿಳೆಯರು, ವಿದ್ಯಾರ್ಥಿನಿಯರು ಹೆಚ್ಚು ಸಂಚರಿಸುವ ಕಡೆ ಹೆಚ್ಚಿನ ಭದ್ರತೆ
  • ಮಹಿಳಾ ಕಾಲೇಜು, ಗಾರ್ಮೆಂಟ್ಸ್ ಭಾಗಗಳಲ್ಲಿ ಮಹಿಳಾ ಪೊಲೀಸ್ ಔಟ್​ ಪೋಸ್ಟ್​ ಗಳ ಸ್ಥಾಪನೆ
  • ಜಿಪಿಎಸ್ ಟ್ರ್ಯಾಕರ್ ಹೊಂದಿರುವ ಸೇಫ್ಟಿ ಬ್ಯಾಂಡ್​ಗಳ ಬಿಡುಗಡೆ ಮತ್ತು ಬಳಕೆ
  • ಬಸ್ ನಿಲ್ದಾಣ, ಮಾರ್ಕೇಟ್ ಮತ್ತು ಬಸ್ಸುಗಳಲ್ಲಿ ಎಮರ್ಜೆನ್ಸಿ ಸೇಫ್ಟಿ ಅಲಾರಾಂ ಅಳವಡಿಕೆ
  • ಮಹಿಳಾ ಸುರಕ್ಷತೆಗೆ ಮಹಿಳಾ ಪೊಲೀಸ್ ಸ್ಟೇಷನ್ ಗಳ ಸ್ಥಾಪನೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:23 pm, Thu, 23 November 23

Follow Us
Web contact
Web contact

TV9 Kannada

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ