ಬೆಂಗಳೂರಿನ ಅಪಾರ್ಟ್‌ಮೆಂಟ್‌ಗೆ 50,000 ರೂ. ಬಾಡಿಗೆ, ಆದರೆ ಅಲ್ಲಿನ ಸೌಲಭ್ಯಗಳನ್ನು ಬಳಸಲು ಸಮಯವಿಲ್ಲ
ಬೆಂಗಳೂರಿನಲ್ಲಿ 50,000 ರೂ. ಬಾಡಿಗೆ ಕಟ್ಟುವ ಟೆಕ್ಕಿಯೊಬ್ಬರು ಐಷಾರಾಮಿ ಅಪಾರ್ಟ್‌ಮೆಂಟ್ ಸೌಲಭ್ಯಗಳನ್ನು ಬಳಸಲು ಸಮಯವಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲಸದ ಒತ್ತಡದಿಂದಾಗಿ ಜಿಮ್, ಪೂಲ್ ಬಳಸಲಾಗದೆ, "ಬಾಡಿಗೆ ಕಟ್ಟಲು ಹಣವಿದೆ, ಆದರೆ ಸೌಲಭ್ಯ ಅನುಭವಿಸಲು ಸಮಯವಿಲ್ಲ" ಎಂದು ಹೇಳಿದ್ದಾರೆ. ಇದು ಬೆಂಗಳೂರಿನ ಬಹುತೇಕ ಐಟಿ ವೃತ್ತಿಪರರ ಸಾಮಾನ್ಯ ಸಮಸ್ಯೆಯಾಗಿದ್ದು, ಇಲಿ ಓಟದಂತಹ ಜೀವನದ ಕುರಿತು ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು, ಫೆ.6: ಬೆಂಗಳೂರಿನಲ್ಲಿ ಮನೆಗಳು ದುಬಾರಿ. ಐಟಿ, ಬಿಟಿ ಕಂಪನಿಗಳಲ್ಲಿ ವರ್ಕ್ ಮಾಡುವವರಿಗೆ ಇಲ್ಲಿ ಈ ದುಬಾರಿ ಮನೆಗಳು ವಾಸಿಸಲು ಸೂಕ್ತ. ಅದಕ್ಕಾಗಿ ಇವರು ಲಕ್ಷ ಲಕ್ಷ ಹಣವನ್ನು ಇದಕ್ಕಾಗಿ ವ್ಯಯ ಮಾಡುತ್ತಾರೆ. ಆದರೆ ಈ ದುಬಾರಿ ಮನೆಗಳಲ್ಲಿರುವ ಎಲ್ಲ ಸೌಕರ್ಯಗಳನ್ನು (Bangalore techie rent) ಸರಿಯಾಗಿ ಉಪಯೋಗ ಮಾಡುವುದಿಲ್ಲ. ಇದೀಗ ಇಂತಹದೇ ವಿಚಾರದ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ 50,000 ರೂಪಾಯಿ ಬಾಡಿಗೆ ಪಾವತಿಸುತ್ತಿರುವ ವ್ಯಕ್ತಿಯೊಬ್ಬರು, ತಮಗೆ ಅಪಾರ್ಟ್‌ಮೆಂಟ್‌ನಲ್ಲಿರುವ ಯಾವುದೇ ಸೌಲಭ್ಯಗಳನ್ನು ಬಳಸಲು ಸಮಯವೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಶುಭಂ ಲೋಂಧೆ ಎಂಬ ಐಟಿ ಉದ್ಯೋಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ಚರ್ಚೆಗೆ ಗ್ರಾಸವಾಗಿದೆ. ಅವರು ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ಸ್ನೂಕರ್ ಏರಿಯಾದಂತಹ ಐಷಾರಾಮಿ ಸೌಲಭ್ಯಗಳಿವೆ. ಆದರೆ, ದಿನವಿಡೀ ಕೆಲಸದ ಒತ್ತಡ ಮತ್ತು ಆಯಾಸದ ಕಾರಣ ಈ ಯಾವುದೇ ಸೌಲಭ್ಯಗಳನ್ನು ಬಳಸಲು ಅವರಿಗೆ ಸಮಯ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. “ಬಾಡಿಗೆ ಕಟ್ಟಲು ಹಣವಿದೆ, ಆದರೆ ಸೌಲಭ್ಯ ಅನುಭವಿಸಲು ಸಮಯವಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆಲಸ ಕಳೆದುಕೊಳ್ಳುತ್ತಿರುವ ಬೆಂಗಳೂರಿನ ಯುವಕರು: 100 ಕೆಲಸಕ್ಕೆ ಅರ್ಜಿ, ಎಲ್ಲವೂ ತಿರಸ್ಕಾರ, ಟೆಕ್ಕಿ ಪೋಸ್ಟ್ ವೈರಲ್
ವೈರಲ್ ವಿಡಿಯೋ ಇಲ್ಲಿದೆ
View this post on Instagram
ವಾರದ ದಿನಗಳಲ್ಲಿ ಕೆಲಸದ ಜಂಜಾಟ, ವಾರಾಂತ್ಯದಲ್ಲಿ ಕೇವಲ ವಿಶ್ರಾಂತಿ ಪಡೆಯುವುದರಲ್ಲೇ ಸಮಯ ಕಳೆದುಹೋಗುತ್ತಿದೆ. ಇದು ಕೇವಲ ಅವರೊಬ್ಬರ ಸಮಸ್ಯೆಯಲ್ಲ, ಬೆಂಗಳೂರಿನ ಬಹುತೇಕ ಐಟಿ ವೃತ್ತಿಪರರ ಕತೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಸಮಯ ಮತ್ತು ನೆಮ್ಮದಿಯನ್ನು ತಲುಪಲು ಸಾಧ್ಯವಾಗದೆ ನಮ್ಮ ಜೀವನ “ಇಲಿ ಓಟ”ದಂತಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಸಮಯ ಎನ್ನುವುದು ಆದ್ಯತೆಯ ಮೇಲೆ ನಿರ್ಧರಿತವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ಹೇಳಿದ್ದು ಸರಿಯಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.ಪ್ರತಿಯೊಬ್ಬರಿಗೂ ಸಮಯವಿದೆ. ಆದರೆ ಅದನ್ನು ನಿಮಯಕ್ಕೆ ಅನುಗುಣವಾಗಿ ಮಾಡಿಕೊಳ್ಳಬೇಕು ಎಂದು ಒಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
