AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ಜಸ್ಟ್ 20 ನಿಮಿಷದಲ್ಲಿದ್ದ ಜರ್ನಿ ಇಂದು 3.5 ಗಂಟೆ!: ಬೆಂಗಳೂರಿನ ಈ ದಯನೀಯ ಸ್ಥಿತಿಗೆ ಅಸಲಿ ಕಾರಣವೇನು?

ಬೆಂಗಳೂರು ಟ್ರಾಫಿಕ್ ಸಮಸ್ಯೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಹಿಂದೆ 20 ನಿಮಿಷಗಳಾಗಿದ್ದ ವಿದ್ಯಾರಣ್ಯಪುರದಿಂದ ವೈಟ್‌ಫೀಲ್ಡ್‌ಗೆ ಪ್ರಯಾಣ ಈಗ 3.5 ಗಂಟೆಗಳಾಗಿ ಪರಿವರ್ತನೆಯಾಗಿದೆ. ಐಟಿ ಉದ್ಯೋಗಿಗಳು ಹಾಗೂ ನಿವಾಸಿಗಳಲ್ಲಿ ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ವಾಹನಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಅಭಿವೃದ್ಧಿಯೇ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.

ಅಂದು ಜಸ್ಟ್ 20 ನಿಮಿಷದಲ್ಲಿದ್ದ ಜರ್ನಿ ಇಂದು 3.5 ಗಂಟೆ!: ಬೆಂಗಳೂರಿನ ಈ ದಯನೀಯ ಸ್ಥಿತಿಗೆ ಅಸಲಿ ಕಾರಣವೇನು?
ಬೆಂಗಳೂರು ಟ್ರಾಫಿಕ್, ಸಂಚಾರ ದಟ್ಟಣೆImage Credit source: Google
ಅಕ್ಷಯ್​ ಪಲ್ಲಮಜಲು​​
|

Updated on: May 27, 2026 | 10:15 AM

Share

ಬೆಂಗಳೂರು, ಮೇ27: “ಐಟಿ ಸಿಟಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಲ್ಲಿನ ಟ್ರಾಫಿಕ್ ನರಕ ಮಾತ್ರ ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇದೆ.” ಈ ಮಾತುಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಸತ್ಯವಾಗಿಸಿದೆ. ಸ್ಥಳೀಯ ನಿವಾಸಿಯೊಬ್ಬರ ರೆಡ್ಡಿಟ್ (Reddit)ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ವಿದ್ಯಾರಣ್ಯಪುರದಿಂದ ವೈಟ್‌ಫೀಲ್ಡ್‌ಗೆ ದಿನನಿತ್ಯ ಸಂಚರಿಸುವ ಬೆಂಗಳೂರಿನ ಉದ್ಯೋಗಿಯೊಬ್ಬರು, ಕೇವಲ 20 ನಿಮಿಷಗಳಿದ್ದ ತಮ್ಮ ಜರ್ನಿ ಇಂದು 3.5 ಗಂಟೆಗಳ ದೈಹಿಕ ಮತ್ತು ಮಾನಸಿಕ ಯುದ್ಧವಾಗಿ ಹೇಗೆ ಬದಲಾಗಿದೆ ಎಂಬುದನ್ನು ಬಿಚ್ಚಿಟ್ಟಿದ್ದು, ಇದು ಲಕ್ಷಾಂತರ ಸ್ಥಳೀಯ ಪ್ರಯಾಣಿಕರ ತೀವ್ರ ಆಕ್ರೋಶ ಮತ್ತು ಭಾವುಕತೆಗೆ ಕಾರಣವಾಗಿದೆ.

“ನನಗೆ ನೆನಪಿದೆ, ಸುಮಾರು 2005-2006 ರ ಅವಧಿಯಲ್ಲಿ ನಾನು ನನ್ನ ಸ್ನೇಹಿತನೊಂದಿಗೆ ಸಿಬಿಝಡ್ (CBZ) ಬೈಕ್‌ನಲ್ಲಿ ರಿಂಗ್ ರೋಡ್ ಮೂಲಕ ಮೊದಲ ಬಾರಿಗೆ ವೈಟ್‌ಫೀಲ್ಡ್‌ಗೆ ಹೋಗಿದ್ದೆ. ಆಗ ರಿಂಗ್ ರೋಡ್ ಆಗಿದ್ದರೂ ರಸ್ತೆಯ ಇಕ್ಕೆಲಗಳಲ್ಲಿ ತುಂಬಾ ಮರಗಳಿದ್ದವು, ತಂಪಾದ ವಾತಾವರಣವಿತ್ತು. ಟೆಸ್ಕೋ (TESCO) ಕಚೇರಿಯಲ್ಲಿ ಇಂಟರ್ವ್ಯೂ ಇದ್ದಿದ್ದರಿಂದ ಕೇವಲ 20 ರಿಂದ 25 ನಿಮಿಷಗಳಲ್ಲಿ ನಾವು ತಲುಪಿದ್ದೆವು. ಆದರೆ ಕಳೆದ 20 ವರ್ಷಗಳಲ್ಲಿ ರಿಂಗ್ ರೋಡ್‌ನಲ್ಲಿ ರಸ್ತೆ ಕಾಮಗಾರಿ ಇಂದಿಗೂ ನಡೆಯುತ್ತ ಇದೆ. ಫ್ಲೈಓವರ್, ಅಂಡರ್‌ಪಾಸ್ ಬರುವ ಮುನ್ನವೇ ರಿಂಗ್ ರೋಡ್ ಚೆನ್ನಾಗಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಹೆಸರಾಂತ ಆಸ್ಪತ್ರೆಯಲ್ಲಿ ಗರ್ಭಿಣಿ ಶೌಚಾಲಯದಲ್ಲಿದ್ದಾಗ ವಿಡಿಯೋ ಮಾಡಿದ ಸಿಬ್ಬಂದಿ

ಇದೇ ವೇಳೆ ನೆಟ್ಟಿಗರು ಕೂಡ ತಮ್ಮ ಕಷ್ಟವನ್ನು ತೋಡಿಕೊಳ್ಳುತ್ತಾ, “ಇತ್ತೀಚೆಗೆ ನಾನು ಆಫೀಸ್‌ಗೆ ಕಾರಿನಲ್ಲಿ ಹೋಗುವುದನ್ನು ಬಿಟ್ಟು ಬೈಕ್‌ನಲ್ಲಿ ಸಂಚರಿಸಲು ಆರಂಭಿಸಿದೆ. ನಾನು ವಿದ್ಯಾರಣ್ಯಪುರದಿಂದ ವೈಟ್‌ಫೀಲ್ಡ್‌ಗೆ ಕಾರಿನಲ್ಲಿ ಹೋಗುತ್ತಿದ್ದಾಗ ಹೋಗಿ ಬರಲು ಒಟ್ಟು 3.5 ಗಂಟೆ ಬೇಕಾಗುತ್ತಿತ್ತು. ಕಾರಿನ ಒಳಗಿದ್ದಾಗ ಮ್ಯೂಸಿಕ್, ಪಾಡ್‌ಕಾಸ್ಟ್‌ಗಳು ಅಥವಾ ಕಾಲ್‌ಗಳಲ್ಲಿ ಬ್ಯುಸಿಯಾಗಿರುತ್ತಿದ್ದರಿಂದ ನನಗೆ ಇದರ ತೀವ್ರತೆ ಆರಂಭದಲ್ಲಿ ಕಾಡಿರಲಿಲ್ಲ. ಏಕೆಂದರೆ ವರ್ಷಗಳು ಉರುಳಿದಂತೆ ಟ್ರಾಫಿಕ್ ನಿಧಾನವಾಗಿ ಹೆಚ್ಚುತ್ತಾ ಹೋಯಿತು. ಆದರೆ, ಕಳೆದ ಮೇ 22ರಂದು ಬೈಕ್‌ನಲ್ಲಿ ಮನೆಗೆ ಹಿಂದಿರುಗುವಾಗ ನನಗೆ ಸತ್ಯದ ದರ್ಶನವಾಯಿತು” ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​:

Bangalore Traffic Nightmare

ಈ ಪೋಸ್ಟ್‌ಗೆ ಬೆಂಗಳೂರಿನ ಸಾವಿರಾರು ಐಟಿ ಉದ್ಯೋಗಿಗಳು ಹಾಗೂ ನಿವಾಸಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ವ್ಯಕ್ತಿ “ನಾನು ಗಲ್ಫ್ ದೇಶಗಳಲ್ಲಿ ಬೆಳೆದವನು. ಅಲ್ಲಿ ಕೇವಲ ಒಂದು ತಿಂಗಳೊಳಗೆ ಬೃಹತ್ ಫ್ಲೈಓವರ್‌ಗಳನ್ನು ಕಟ್ಟಿ ಮುಗಿಸುತ್ತಾರೆ. ಇಡೀ ನಗರದ ಜನಸಂಖ್ಯೆ ನಮ್ಮ ಕೋರಮಂಗಲದ ಒಂದು ಬ್ಲಾಕ್‌ಗಿಂತ ಕಡಿಮೆ ಇರುತ್ತಿತ್ತು. ಆದರೆ ಇಲ್ಲಿ ಕೇವಲ 20 ಕಿಲೋಮೀಟರ್ ರಸ್ತೆ ಮತ್ತು ಮೆಟ್ರೋ ಅಭಿವೃದ್ಧಿಪಡಿಸಲು 20 ವರ್ಷಗಳನ್ನು ತೆಗೆದುಕೊಳ್ಳುತ್ತಿರುವುದು ನಿಜಕ್ಕೂ ಅಸಹನೀಯ. ಇಷ್ಟಕ್ಕೂ ಇವರು ಮಾಡುತ್ತಿರುವುದಾದರೂ ಏನು?” ಎಂದು ಪ್ರಶ್ನಿಸಿದ್ದಾರೆ. “ಇಲ್ಲಿ ಎಷ್ಟು ಫ್ಲೈಓವರ್ ಅಥವಾ ಅಂಡರ್‌ಪಾಸ್‌ಗಳನ್ನು ಕಟ್ಟಿದರೂ ಟ್ರಾಫಿಕ್ ಕಂಟ್ರೋಲ್ ಆಗುವುದಿಲ್ಲ. ಜಗತ್ತಿನ ಯಾವುದೇ ಉತ್ತಮ ನಗರದಲ್ಲೂ ಖಾಸಗಿ ವಾಹನಗಳನ್ನೇ ಅವಲಂಬಿಸಿಲ್ಲ. ನಾವು ಯುರೋಪಿಯನ್ ಅಥವಾ ಜಪಾನ್ ಮಾದರಿಯ ಸಾರ್ವಜನಿಕ ಸಾರಿಗೆ (Public Transport) ಹಾಗೂ ವಾಕಿಂಗ್‌ಗೆ ಹೆಚ್ಚಿನ ಒತ್ತು ನೀಡಬೇಕು. ನಮ್ಮ ಬಿಆರ್‌ಟಿಎಸ್ ಮೆಟ್ರೋ ಬ್ಲೂ ಲೈನ್ (Blue Line) ಬೇಗ ಆರಂಭವಾದರೆ ವಿದ್ಯಾರಣ್ಯಪುರದಿಂದ ವೈಟ್‌ಫೀಲ್ಡ್‌ಗೆ ಮೆಟ್ರೋ ಮೂಲಕ ಸುಲಭವಾಗಿ ಕನೆಕ್ಟ್ ಆಗಬಹುದು” ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More