AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ಬಾಳ ಫ್ಲೈಓವರ್ ಇಳಿದ್ರೆ ನರಕ ದರ್ಶನ: ಮೇಕ್ರಿ ಸರ್ಕಲ್ ದಾಟುವಷ್ಟರಲ್ಲಿ ಸುಸ್ತಾದ ಕಾರು ಸವಾರರು; ಹೇಗಿದೆ ನೋಡಿ ಟ್ರಾಫಿಕ್‌ ಟೈಮ್‌ಲೈನ್

ಬೆಂಗಳೂರಿನ ಹೆಬ್ಬಾಳ ರಸ್ತೆಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಹೆಬ್ಬಾಳ ಫ್ಲೈಓವರ್‌ನಿಂದ ವಿಂಡ್ಸರ್ ಮ್ಯಾನರ್‌ಗೆ ಕೇವಲ 3 ಕಿ.ಮೀ.ಗಿಂತ ಕಡಿಮೆ ದೂರವನ್ನು ಕ್ರಮಿಸಲು ವಾಹನ ಸವಾರರೊಬ್ಬರಿಗೆ 70 ನಿಮಿಷಗಳಿಗೂ ಹೆಚ್ಚು ಸಮಯ ಬೇಕಾಗಿದೆ. ಈ ಘಟನೆ ನಗರದ ಮೂಲಸೌಕರ್ಯ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಹೆಬ್ಬಾಳ ಫ್ಲೈಓವರ್ ಇಳಿದ್ರೆ ನರಕ ದರ್ಶನ: ಮೇಕ್ರಿ ಸರ್ಕಲ್ ದಾಟುವಷ್ಟರಲ್ಲಿ ಸುಸ್ತಾದ ಕಾರು ಸವಾರರು; ಹೇಗಿದೆ ನೋಡಿ ಟ್ರಾಫಿಕ್‌ ಟೈಮ್‌ಲೈನ್
ಹೆಬ್ಬಾಳ ಸಂಚಾರ ದಟ್ಟಣೆ
ಅಕ್ಷಯ್​ ಪಲ್ಲಮಜಲು​​
|

Updated on:Jun 24, 2026 | 5:34 PM

Share

ಮುಖ್ಯಾಂಶಗಳು

  • ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ
  • 3 ಕಿಲೋಮೀಟರ್ ದಾರಿಯನ್ನು ಕ್ರಮಿಸಲು ಬರೋಬ್ಬರಿ 70 ನಿಮಿಷ
  • ಸಾರಿಗೆ ಇಲಾಖೆ - ಜಿಬಿಎ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ

ಬೆಂಗಳೂರು, ಜೂ.24: ಸಿಲಿಕಾನ್ ಸಿಟಿಯ ಹೆಬ್ಬಾಳ ರಸ್ತೆಯಲ್ಲಿ ಪ್ರತಿದಿನ ವಾಹನ ಸವಾರರು ಎದುರಿಸುತ್ತಿರುವ ನರಕಯಾತನೆ ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಹೆಬ್ಬಾಳ ಫ್ಲೈಓವರ್ ಇಳಿದು ವಿಂಡ್ಸರ್ ಮ್ಯಾನರ್ ಸೇರುವ ಕೇವಲ 3 ಕಿಲೋಮೀಟರ್‌ಗಿಂತಲೂ ಕಡಿಮೆ ಅಂತರದ ರಸ್ತೆಯನ್ನು ದಾಟಲು ವಾಹನ ಸವಾರರೊಬ್ಬರು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ಈ ಟ್ರಾಫಿಕ್ ವ್ಯೂಹದಲ್ಲಿ ಸಿಲುಕಿರುವ ಬೆಂಗಳೂರು ಪೋಸ್ಟ್​​ ಎಂಬ ಎಕ್ಸ್​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಟ್ರಾಫಿಕ್‌ನಲ್ಲಿ ಸಿಲುಕಿದ ಸವಾರ ಹಂಚಿಕೊಂಡ ‘ಟೈಮ್‌ಲೈನ್’ ಇಲ್ಲಿದೆ ನೋಡಿ

ಬೆಳಗಿನ ಪೀಕ್ ಅವರ್‌ನಲ್ಲಿ ಹೆಬ್ಬಾಳ ಮಾರ್ಗವಾಗಿ ನಗರ ಪ್ರವೇಶಿಸುವಾಗ ವಾಹನಗಳು ಹೇಗೆ ಇಂಚಿಂಚೂ ಕದಲುವುದಿಲ್ಲ ಎಂಬುದಕ್ಕೆ ವಾಹನ ಸವಾರರೊಬ್ಬರು ಹಂಚಿಕೊಂಡಿರುವ ಈ ಸಮಯದ ವಿವರಣೆಯೇ ಸಾಕ್ಷಿ.

ಬೆಳಗ್ಗೆ 9:00 AM: ಹೆಬ್ಬಾಳ ಫ್ಲೈಓವರ್ ಪ್ರವೇಶ.

ಬೆಳಗ್ಗೆ 9:05 AM: ಬ್ಯಾಪ್ಟಿಸ್ಟ್ ಆಸ್ಪತ್ರೆ ಜಂಕ್ಷನ್ .

ಬೆಳಗ್ಗೆ 9:20 AM: ಗಂಗಾನಗರ ತಲುಪಲು 15 ನಿಮಿಷ ವ್ಯಯ!

ಬೆಳಗ್ಗೆ 9:25 AM: ಫೋರ್ ಸೀಸನ್ಸ್ ಹೋಟೆಲ್ ಮಗ್ಗುಲು.

ಬೆಳಗ್ಗೆ 9:35 AM: ಮೇಕ್ರಿ ಸರ್ಕಲ್ ತಲುಪುವಷ್ಟರಲ್ಲಿ ಅರ್ಧ ಗಂಟೆ.

ಬೆಳಗ್ಗೆ 9:45 AM: ಪ್ಯಾಲೇಸ್ ಗ್ರೌಂಡ್ಸ್

ಬೆಳಗ್ಗೆ 9:58 AM: ಪ್ಯಾಲೇಸ್ ಕುತ್ತಹಳ್ಳಿ .

ಬೆಳಗ್ಗೆ 10:10 AM: ಕೊನೆಗೂ ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ತಲುಪಿದ ವಾಹನ

ಇದನ್ನೂ ಓದಿ: ‘ಓನ್ಲಿ ಇನ್ ನಮ್ಮ ಬೆಂಗಳೂರು’: ಚಾಟ್‌ಜಿಪಿಟಿ ಬಳಸಿ ಬುಕ್ ಬರೆಯಲು ರೆಡಿಯಾದ ಆಟೋ ಡ್ರೈವರ್

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್:

ಹೆಬ್ಬಾಳ ಫ್ಲೈಓವರ್‌ನಿಂದ ಕೆಳಗೆ ಜೂಮ್ ಮಾಡಿಕೊಂಡು ಬರುವ ವಾಹನಗಳು ನೇರವಾಗಿ ಟ್ರಾಫಿಕ್ ಎಂಬ ಮಾಯಾಲೋಕದೊಳಗೆ ಧುಮುಕುತ್ತವೆ. ಕೇವಲ 3 ಕಿಲೋಮೀಟರ್ ದಾರಿಯನ್ನು ಕ್ರಮಿಸಲು ಬರೋಬ್ಬರಿ 70 ನಿಮಿಷಗಳು ಬೇಕಾಗಿರುವುದು ಬೆಂಗಳೂರಿನ ಮೂಲಸೌಕರ್ಯದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಸಾಮಾನ್ಯ ನಾಗರಿಕರಿಂದ ಹಿಡಿದು ದೇಶದ ಸಂಸದರವರೆಗೂ ಯಾರೂ ಈ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. “ಇದು ನಮ್ಮ ನಿತ್ಯದ ದಿನಚರಿಯಾಗಿದೆ, ಇದನ್ನು ಒಮ್ಮೆ ಯೋಚಿಸಿ ನೋಡಿ” ಎಂದು ಸಾರ್ವಜನಿಕರು ಸಾರಿಗೆ ಇಲಾಖೆ ಹಾಗೂ ಜಿಬಿಎ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Wed, 24 June 26

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ