ರಿಂಗ್ ರೋಡ್ ಅಂಡರ್ ಪಾಸ್ ಸರ್ವಿಸ್ ರೋಡ್ನಲ್ಲಿ ಸಂಚಾರ ಮಾಡುವ ಮುನ್ನ ಎಚ್ಚರ! ಯಾಕೆ, ಈ ಸುದ್ದಿ ಓದಿ
ನಾಗರಬಾವಿ ರಿಂಗ್ ರೋಡ್ ನಲ್ಲಿ ಬರುವ ಮಾಳಗಾಳ ಅಂಡರ್ ಪಾಸ್ ಬಳಿ ತಡಗೋಡೆ ಸ್ಲ್ಯಾಬ್ ಕಳಚಿಕೊಂಡು ವಾಲಿಕೊಂಡಿದೆ. ಮಾಳಗಾಳ ಅಂಡರ್ ಪಾಸ್ ದಾಟುವಾಗ ತಲೆ ಎತ್ತಿ ನೋಡಿದರೆ ಕಾಣಿಸುತ್ತೆ ಬಲಿಗಾಗಿ ಕಾಯುತ್ತಿರುವ ಸ್ಲ್ಯಾಬ್. ಜಾಯಿಂಟ್ ಕಳಚಿಕೊಂಡಿರುವುದನ್ನು ಬದಲಿಸೋ ಬದಲು ತಂತಿಯಲ್ಲಿ ಕಟ್ಟಲಾಗಿದೆ.
ಬೆಂಗಳೂರು, ಡಿ.26: ಮೈಸೂರು ರೋಡ್ ನಿಂದ ತುಮಕೂರು ಹೈವೇಗೆ ಸಂಪರ್ಕ ಕಲ್ಪಿಸುವ ಟ್ರಾಫಿಕ್ ಲೆಸ್ ರಿಂಗ್ ರೋಡ್ ನಲ್ಲಿ ಬರುವ ಅಂಡರ್ ಪಾಸ್ ಮತ್ತು ಸರ್ವಿಸ್ ರೋಡ್ಗಳ ಮೂಲಕ ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಆದರೆ ಇಲ್ಲಿ ಅಮಾಯಕರ ಪ್ರಾಣ ತೆಗೆಯಲು ಸಿಮೆಂಟ್ ಸ್ಲ್ಯಾಬ್ಗಳು ಕಾದು ಕುಳಿತಿವೆ. ಬಿಬಿಎಂಪಿ (BBMP) ಮತ್ತು ಬಿಡಿಎ (BDA) ಅಧಿಕಾರಿಗಳು ಏನಾದರೂ ಅನಾಹುತ ಸಂಭವಿಸುವವರೆಗೆ ಎಚ್ಚೆತ್ತುಕೊಳ್ಳೊದಿಲ್ಲ ಎಂಬ ಮಾತಿದೆ. ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಂಡ ಮೇಲೆ ಒಂದೆರಡು ಲಕ್ಷ ರುಪಾಯಿ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತವೆ. ಈ ಅಂಡರ್ ಪಾಸ್ ಮೇಲಿರುವ ಸಿಮೆಂಟ್ ಸ್ಲ್ಯಾಬ್ ಗಳು ಯಾವ ಸಮಯದಲ್ಲಿ ಬೇಕಾದ್ರೂ ಕಳಚಿ ಕೆಳಗೆ ಬೀಳುವಂತಿವೆ.
ಬೆಂಗಳೂರಿನ ಅಂಡರ್ ಪಾಸ್ ಫೈ ಓವರ್ ಕೆಳಗೆ ಮೇಲೆ ಸಂಚಾರ ಮಾಡುವ ವಾಹನ ಸವಾರರೇ ಎಚ್ಚರ ಎಚ್ಚರ. ಯಾವಾಗ ಯಾವ ಸಮಯದಲ್ಲಿ ಬೇಕಾದರೂ ಫೈಓವರ್ ಸ್ಲ್ಯಾಬ್ಗಳು ಕಳಚಿ ತಲೆ ಮೇಲೆ ಬೀಳಬಹುದು ಹುಷಾರ್. ನಾಗರಬಾವಿ ರಿಂಗ್ ರೋಡ್ ನಲ್ಲಿ ಬರುವ ಮಾಳಗಾಳ ಅಂಡರ್ ಪಾಸ್ ಬಳಿ ತಡಗೋಡೆ ಸ್ಲ್ಯಾಬ್ ಕಳಚಿಕೊಂಡು ವಾಲಿಕೊಂಡಿದೆ. ಮಾಳಗಾಳ ಅಂಡರ್ ಪಾಸ್ ದಾಟುವಾಗ ತಲೆ ಎತ್ತಿ ನೋಡಿದರೆ ಕಾಣಿಸುತ್ತೆ ಬಲಿಗಾಗಿ ಕಾಯುತ್ತಿರುವ ಸ್ಲ್ಯಾಬ್. ಜಾಯಿಂಟ್ ಕಳಚಿಕೊಂಡಿರುವುದನ್ನು ಬದಲಿಸೋ ಬದಲು ತಂತಿಯಲ್ಲಿ ಕಟ್ಟಲಾಗಿದೆ. ತಂತಿ ಯಾವಾಗ ಬೇಕಾದರೂ ಬಿಚ್ಚಿಕೊಂಡು ಕೆಳಗೆ ಬೀಳುವ ಸಾಧ್ಯತೆ ಇದೆ. ಮುಟ್ಟಿದ್ರೆ ಸಾಕು ಈ ತಡೆಗೋಡೆಯ ದಪ್ಪ ದಪ್ಪ ಸಿಮೆಂಟ್ ಕಲ್ಲುಗಳು ಕೈಗೆ ಬರುತ್ತಿವೆ. ಜೋರು ಗಾಳಿ, ಮಳೆ ಬಂದಾಗ ತಡೆ ಗೋಡೆಯ ಸಿಮೆಂಟ್ ಕಲ್ಲುಗಳು ಬೀಳುvಂತಿವೆ. ಯಾವುದಾದರು ಬಲಿ ಆಗುವ ತನಕ ಬಿಬಿಎಂಪಿ ಎಚ್ಚೆತ್ತುಕೊಳ್ಳೋ ಲಕ್ಷಣವಿಲ್ಲ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ವೇಳೆ ಯಡಿಯೂರಪ್ಪ ಸರ್ಕಾರದಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರ: ಯತ್ನಾಳ್ ಆರೋಪ
ಸಾರ್ವಜನಿಕರ ದೂರಿಗೂ ಕ್ಯಾರೆ ಅನ್ನದೇ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಜೀವ ಭಯದಲ್ಲೇ ವಾಹನ ಸವಾರರು ಓಡಾಡುತ್ತಿದ್ದಾರೆ. ಇನ್ನು ಇದೊಂದೆ ಸ್ಥಳದಲ್ಲಿ ಈ ದುಸ್ಥಿತಿ ಇಲ್ಲ ಲಗ್ಗೆರೆ, ಸುಮ್ಮನಹಳ್ಳಿ, ನಾಗರಭಾವಿ ಸರ್ವಿಸ್ ರೋಡ್ ನಲ್ಲೂ ಇದೇ ರೀತಿ ಸಿಮೆಂಟ್ ಸ್ಲ್ಯಾಬ್ ಗಳು ತುಂಡಾಗಿ ವಾಲಿಕೊಂಡಿದೆ. ಇನ್ನೂ ನಗರದ ಬೇರೆ ಬೇರೆ ಭಾಗದಲ್ಲೂ ಇಂತಹ ಭಯಾನಕ ಪರಿಸ್ಥಿತಿ ಇದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ಅರುಣ್ ಪ್ರಸಾದ್, ಅಮಾಯಕರು ಪ್ರಾಣ ಕಳೆದುಕೊಳ್ಳುವ ಮುನ್ನ ಸಮಸ್ಯೆ ಬಗಹರಿಸಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಒಟ್ನಲ್ಲಿ ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕಿದೆ ಇಲ್ಲಾಂದ್ರೆ ಅನಾಹುತ ಕಟ್ಟಿಟ್ಟಬುತ್ತಿ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ