AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜಾಸ್ತಿ ಹಣ ಕೇಳುವ ಆಟೋ ಚಾಲಕರ ಬಾಯಿಗೆ ಬೀಗ ಹಾಕಲಿದೆ ಡಿಜಿಟಲ್ ಆಟೋ ಮೀಟರ್!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರ ಸವಾರಿ ನಿರಾಕರಣೆ ಮತ್ತು ದುಪ್ಪಟ್ಟು ಬಾಡಿಗೆ ವಸೂಲಿ ದಂದೆಗೆ ಮುಕ್ತಿ ಹಾಡಲು 'ನಗರ ಮೀಟರ್ ಆಟೋ' ಹೊಸ ಡಿಜಿಟಲ್ ತಂತ್ರಜ್ಞಾನ ಪರಿಚಯಿಸಿದೆ. ಇನ್ಮುಂದೆ ರಸ್ತೆಯಲ್ಲಿ ನೇರವಾಗಿ ಆಟೋ ನಿಲ್ಲಿಸಿ ಹತ್ತಿದರೂ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸರ್ಕಾರ ನಿಗದಿಪಡಿಸಿದ ನಿಖರ ಮೀಟರ್ ದರದಲ್ಲೇ ಪಾರದರ್ಶಕವಾಗಿ ಪ್ರಯಾಣಿಸಬಹುದು.

ಆಟೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಜಾಸ್ತಿ ಹಣ ಕೇಳುವ ಆಟೋ ಚಾಲಕರ ಬಾಯಿಗೆ ಬೀಗ ಹಾಕಲಿದೆ ಡಿಜಿಟಲ್ ಆಟೋ ಮೀಟರ್!
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on:Jul 06, 2026 | 12:03 PM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಆಟೋ ಸವಾರಿ ನಿರಾಕರಣೆ ತಡೆಗೆ ಡಿಜಿಟಲ್ ಮೀಟರ್ ವ್ಯವಸ್ಥೆ ಜಾರಿ.
  • ಪ್ರಯಾಣಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಲೈವ್ ಬಾಡಿಗೆ ಪರಿಶೀಲಿಸಬಹುದು.
  • ರಸ್ತೆಯಲ್ಲಿ ನೇರವಾಗಿ ನಿಲ್ಲಿಸುವ ಆಟೋಗಳಿಗೂ ಸರ್ಕಾರಿ ಮೀಟರ್ ದರ ಅನ್ವಯ.

ಬೆಂಗಳೂರು, ಜುಲೈ 06: ಬೆಂಗಳೂರಿನಲ್ಲಿ ಆಟೋ (Auto) ಚಾಲಕರ ಸವಾರಿ ನಿರಾಕರಣೆ (Ride Refusal) ಮತ್ತು ಮೀಟರ್‌ಗಿಂತ ಒಂದೂವರೆ-ಎರಡು ಪಟ್ಟು ಹೆಚ್ಚು ಹಣ ಬೇಡುವ ದಂದೆಗೆ ಮುಕ್ತಿ ಹಾಡಲು ‘ನಗರ ಮೀಟರ್ ಆಟೋ’ (Nagara Meter Auto) ಸಂಸ್ಥೆಯು ಹೊಸದೊಂದು ವಿನೂತನ ಡಿಜಿಟಲ್ ಮೀಟರ್ ತಂತ್ರಜ್ಞಾನವನ್ನು ಪರಿಚಯಿಸಿದೆ.

ಏನಿದು ಹೊಸ ಡಿಜಿಟಲ್ ಮೀಟರ್ ವ್ಯವಸ್ಥೆ?

ಸಾಮಾನ್ಯವಾಗಿ ಓಲಾ, ಉಬರ್ ಅಥವಾ ನಮ್ಮ ಯಾತ್ರಿ ಆಪ್‌ಗಳ ಮೂಲಕ ಬುಕ್ ಮಾಡುವಾಗ ಮಾತ್ರ ಡಿಜಿಟಲ್ ಪಾರದರ್ಶಕತೆ ಇರುತ್ತಿತ್ತು. ಆದರೆ, ಈ ಹೊಸ ವ್ಯವಸ್ಥೆಯಲ್ಲಿ ಪ್ರಯಾಣಿಕರು ರಸ್ತೆಯಲ್ಲಿ ನೇರವಾಗಿ ಹೋಗುತ್ತಿರುವ ಆಟೋವನ್ನು ಕೈ ತೋರಿಸಿ ನಿಲ್ಲಿಸಿ ಸವಾರಿ ಮಾಡಬಹುದು. ಪ್ರಯಾಣ ಆರಂಭವಾಗುತ್ತಿದ್ದಂತೆ, ಚಾಲಕನು ತನ್ನ ‘ನಗರಮೀಟರ್’ (NagaraMeter) ಆಪ್‌ನಲ್ಲಿ ಡಿಜಿಟಲ್ ಮೀಟರ್ ಆನ್ ಮಾಡುತ್ತಾನೆ.

ಪ್ರಯಾಣಿಕರು ಆಟೋದ ಒಳಗಡೆ ಇರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ಮೂಲಕ ಅಥವಾ ತಮಗೆ ಬರುವ ಎಸ್‌ಎಂಎಸ್/ವಾಟ್ಸಾಪ್ ಲಿಂಕ್ ಮೂಲಕ ಎಷ್ಟು ಬಾಡಿಗೆ ಆಗುತ್ತಿದೆ ಎಂಬುದನ್ನು ರಿಯಲ್ ಟೈಮ್‌ನಲ್ಲಿ ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ವಿಶೇಷವೆಂದರೆ, ಈ ಬಾಡಿಗೆಯನ್ನು ಸರ್ಕಾರ ನಿಗದಿಪಡಿಸಿರುವ ಅಧಿಕೃತ ಮೀಟರ್ ದರಗಳ ಆಧಾರದ ಮೇಲೆಯೇ ಲೆಕ್ಕ ಹಾಕಲಾಗುತ್ತದೆ.

ಬಾರ್ಗೇನಿಂಗ್ ಕಿರಿಕಿರಿ ಇರುವುದಿಲ್ಲ

ಈ ಕುರಿತು ಮಾಹಿತಿ ನೀಡಿರುವ ‘ನಗರ’ ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ನಿರಂಜನಾರಾಧ್ಯ, ಶೇ 90ರಷ್ಟು ಪ್ರಯಾಣಿಕರು ಆಟೋ ಚಾಲಕರು ಬರಲು ನಿರಾಕರಿಸುತ್ತಾರೆ ಅಥವಾ ದುಪ್ಪಟ್ಟು ಹಣ ಕೇಳುತ್ತಾರೆ ಎಂದು ದೂರುತ್ತಾರೆ. ಈ ಚೌಕಾಸಿ (Bargaining) ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಡೆದುಹಾಕಿ, ಜನರಿಗೆ ನ್ಯಾಯಯುತ ದರದಲ್ಲಿ ಸವಾರಿ ಒದಗಿಸುವುದು ನಮ್ಮ ಉದ್ದೇಶ ಎಂದಿದ್ದಾರೆ.

ಈ ಸೌಲಭ್ಯದಿಂದಾಗಿ ಚಾಲಕರು ಕೇವಲ ಆನ್‌ಲೈನ್ ಬುಕಿಂಗ್‌ಗೆ ಕಾಯಬೇಕಾಗಿಲ್ಲ. ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಟೆಕ್ ಪಾರ್ಕ್‌ಗಳಲ್ಲಿ ನಿಂತು ನೇರವಾಗಿ ಬರುವ ಗ್ರಾಹಕರನ್ನು ಸರ್ಕಾರಿ ದರದಲ್ಲೇ ಕರೆದೊಯ್ಯಬಹುದು. ಸದ್ಯ ಈ ವೇದಿಕೆಯಲ್ಲಿ ಆಟೋಗಳ ಸಂಖ್ಯೆ 150 ರಿಂದ 500 ಕ್ಕೆ ಏರಿಕೆಯಾಗಿದ್ದು, ದಿನನಿತ್ಯದ ಸವಾರಿಗಳ ಸಂಖ್ಯೆಯೂ 400 ರ ಗಡಿ ತಲುಪುತ್ತಿದೆ. ಒಟ್ಟಿನಲ್ಲಿ ಈ ತಂತ್ರಜ್ಞಾನ ಬೆಂಗಳೂರಿನ ಆಟೋ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:03 pm, Mon, 6 July 26

Follow Us
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಮೇಷ ರಾಶಿಯ ಅಶ್ವಿನಿ ನಕ್ಷತ್ರದಲ್ಲಿ ಚಂದ್ರನ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಯಾರಿಗೂ ಅನುಮಾನ ಬಾರದಂತೆ ಐಫೋನ್ ಕದ್ದ ಯುವತಿ! ಕಳ್ಳತನದ ವಿಡಿಯೋ ವೈರಲ್
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಮಳೆಯಾರ್ಭಟಕ್ಕೆ ಕುಸಿದ ಖಾಸಗಿ ಶಾಲೆಯ ಗೋಡೆ: ತಪ್ಪಿದ ಭಾರೀ ಅನಾಹುತ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಸಚಿವ ಸಂಪುಟದಲ್ಲಿ 2-3 ಮಹಿಳಾ ಶಾಸಕರಿಗೆ ಸ್ಥಾನ ನೀಡಬೇಕಿತ್ತು: ರಮ್ಯಾ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ