ಸೈಬರ್ ಕ್ರೈಂಗಾಗಿ ವಿದೇಶಕ್ಕೆ ಸಿಮ್ಗಳನ್ನು ರವಾನೆ ಮಾಡುತ್ತಿದ್ದ ಆರೋಪಿಯ ಬಂಧನ
ಸೈಬರ್ ಕ್ರೈಂಗಾಗಿ ವಿದೇಶಕ್ಕೆ ಸಿಮ್ಗಳನ್ನು ರವಾನೆ ಮಾಡುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ವಿಶಾಖಪಟ್ಟಣದ ನಾರಾ ಶ್ರೀನಿವಾಸ್ ರಾವ್ ಬಂಧಿತ ಆರೋಪಿ.

ಬೆಂಗಳೂರು, ಮೇ 19: ಸೈಬರ್ ಕ್ರೈಂಗಾಗಿ (Cyber Crime) ವಿದೇಶಕ್ಕೆ ಸಿಮ್ಗಳನ್ನು (Sim) ರವಾನೆ ಮಾಡುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAB) ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ (Andra Pradesh) ವಿಶಾಖಪಟ್ಟಣದ ನಾರಾ ಶ್ರೀನಿವಾಸ್ ರಾವ್ ಬಂಧಿತ ಆರೋಪಿ. ಆರೋಪಿ ಶ್ರೀನಿವಾಸ್ ರಾವ್ ಭಾರತದ ಸಿಮ್ಗಳನ್ನು ಪಾರ್ಸಲ್ ಮುಖಾಂತರ ಅಕ್ರಮವಾಗಿ ವಿದೇಶಕ್ಕೆ ತೆಗೆದುಕೊಂಡು ಹೋಗಲು ಯತ್ನಿಸಿದ್ದರು. ಆದರೆ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಸಿಮ್ಗಳು ಪತ್ತೆಯಾಗಿವೆ. ಒಂದು ಪಾರ್ಸಲ್ನಲ್ಲಿ 24, ಮತ್ತೊಂದರಲ್ಲಿ 111 ಸಿಮ್ಗಳು ಇದ್ದವು. ಚೆನ್ನೈನ ಸೈಯದ್ ಎಂಬಾತನಿಗೆ ಸೇರಿದ ಕೊರಿಯರ್ ಕಂಪನಿ ಮೂಲಕ ಪಾರ್ಸಲ್ ಬುಕ್ ಆಗಿತ್ತು.
ಆರೋಪಿಗಳು ತೈವಾನ್ ಮತ್ತು ಕಾಂಬೋಡಿಯಾ ದೇಶಗಳಲ್ಲಿ ಕೂತು ಈ ಸಿಮ್ಗಳನ್ನು ಬಳಸಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದರು. ಹಾಗೆ ವಾಟ್ಸ್ ಆ್ಯಪ್ ಅಕೌಂಟ್ ಕೂಡ ಕ್ರಿಯೇಟ್ ಮಾಡುತ್ತಾರೆ. ಬಳಿಕ ಭಾರತದಲ್ಲಿನ ಜನರಿಗೆ ಪಾರ್ಟ್ ಟೈಂ, ಷೇರು ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿ ಅಂತ ಆಫರ್ ಕೊಟ್ಟು ವಂಚನೆ ಮಾಡುತ್ತಿದ್ದರು. ಹೈದರಾಬಾದ್ ಮೂಲದ ವ್ಯಕ್ತಿ ಪ್ರಕರಣದ ಕಿಂಗ್ಪಿನ್ ಆಗಿದ್ದು, ಈತ ವಿಯೆಟ್ನಾಂನಲ್ಲಿ ಕೂತೇ ಎಲ್ಲವನ್ನು ನೋಡಿಕೊಳ್ಳುತ್ತಿದ್ದನು. ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಒಂದು ಕೇಸ್ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನ ಜಪ್ತಿ, ನಾಲ್ವರು ವಶಕ್ಕೆ
ಬಟ್ಟೆಗಳಲ್ಲಿ ಅಡಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ 1.96 ಕೋಟಿ ಮೌಲ್ಯದ 2.814 ಕೆಜಿ ಚಿನ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಧಿಕಾರಿಗಳು ಮಹಿಳೆ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರು ಬ್ಯಾಗ್ನಲ್ಲಿನ ಜೀನ್ಸ್ ಪ್ಯಾಂಟ್, ಟೀ ಶರ್ಟ್ಗಳಲ್ಲಿ ಪೌಡರ್ ರೂಪದ ಚಿನ್ನವನ್ನು ಇಟ್ಟುಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದರು. ಆದರೆ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




