AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cuts: ಜೂ.25ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್‌ ವ್ಯತ್ಯಯ

ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂನ್ 25 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಬಗ್ಗೆ ಬೆಸ್ಕಾಂ ಪ್ರಕಟಣೆ ಮೂಲಕ ತಿಳಿಸಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದೆ. ಹಾಗಾದ್ರೆ, ನಾಳೆ ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

Bengaluru Power Cuts: ಜೂ.25ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್‌ ವ್ಯತ್ಯಯ
Power Cut
ರಮೇಶ್ ಬಿ. ಜವಳಗೇರಾ
|

Updated on:Jun 24, 2025 | 5:36 PM

Share

ಬೆಂಗಳೂರು, (ಜೂನ್ 24): ಕೆಪಿಟಿಸಿಎಲ್  (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಾಳೆ ಅಂದರೆ ಬುಧವಾರ (ಜೂನ್ 25) ಬೆಂಗಳೂರು ನಗರದ ವಿವಿಧೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಬೆಂಗಳೂರು ನಗರದ ಕೆಲ ಏರಿಯಾಗಳಲ್ಲಿ ಜೂನ್‌ 25ರ ಬುಧವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿಕೊಂಡಿದೆ.

66/11 ಕೆವಿ ವುರವಂಕಪುರಂ ಪಾಮ್ ಬೀಚ್‌ ವಿದ್ಯುತ್ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಈ ಕೆಳಗೆ ತಿಳಿಸಿರುವ ವ್ಯಾಪ್ತಿಯ ಪ್ರದೇಶಗಳಲ್ಲಿ ಬುಧವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಆಫೀಸ್​​​​​​ನಿಂದ ಸಂಜೆ 6 ಗಂಟೆ ಬಿಟ್ಟು, ಮನೆಗೆ ತಲುಪಿದ್ದು ರಾತ್ರಿ 9.15ಕ್ಕೆ, ಇದಕ್ಕೆಲ್ಲ ಬೆಂಗಳೂರು ಟ್ರಾಫಿಕ್ ಕಾರಣ

ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ?

ಹಳೇಹಳ್ಳಿ, ಮಾರ್ಗೊಂಡನಹಳ್ಳಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗುಬ್ಬಿ ಅಡ್ಡ ರಸ್ತೆ, ಕ್ಯಾಲಸನಹಳ್ಳಿ, ಪುರವಂಕರ ಅಪಾರ್ಟ್‌ಮೆಂಟ್‌, ಪೂರ್ಣಪ್ರಜ್ಞ, ಮಾರಗೊಂಡನಹಳ್ಳಿ, ಗವಿಗುಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಅಲ್ಲದೆ ಅಂದೇ ಶೋಭಾ ಇಂದ್ರಪ್ರಸ್ಥ ವಿದ್ಯುತ್ ಉಪಕೇಂದ್ರದಲ್ಲೂ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್ ಹಾಗೂ ಗ್ಲೋಬಲ್‌ ಮಾಲ್‌ನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

ಈ ಮೇಲಿನ ಎಲ್ಲಾ ಏರಿಯಾಗಳಲ್ಲಿ ಜೂನ್ 5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟು 7 ಗಂಟೆಗಳ ಕಾಲ ಸಂಪೂರ್ಣವಾಗಿ ವಿದ್ಯುತ್ ಕಡಿತವಾಗಲಿದ್ದು,   ಈ ಸಮಯದಲ್ಲಿ ಏನಾದರೂ ವಿದ್ಯುತ್ ಅನಿವಾರ್ಯತೆ ಇದ್ದರೆ ಸಾರ್ವಜನಿಕರು ಬೇರೆ ಮಾರ್ಗ ಕಂಡುಕೊಳ್ಳಬೇಕೆಂದು ಮುಂಚಿತವಾಗಿಯೇ ಬೆಸ್ಕಾಂ ಸ್ಪಷ್ಟವಾಗಿ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ  ಇಲ್ಲಿ ಕ್ಲಿಕ್​ ಮಾಡಿ

Published On - 5:23 pm, Tue, 24 June 25