AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pulse Polio 2026: ಬೆಂಗಳೂರಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನದ ಮೊದಲ ದಿನವೇ 11 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ!

ಬೆಂಗಳೂರಿನಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಮೊದಲ ದಿನವೇ ಐದು ವರ್ಷದೊಳಗಿನ 11 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪೋಲಿಯೋ ಹನಿ ಹಾಕಲಾಗಿದ್ದು, ಶೇ 96.4 ರಷ್ಟು ಪ್ರಗತಿ ಸಾಧಿಸಲಾಗಿದೆ. ನಮ್ಮ ಕ್ಲಿನಿಕ್, ಅಂಗನವಾಡಿ ಹಾಗೂ ಸಾರಿಗೆ ಕೇಂದ್ರಗಳಲ್ಲಿ ಜೂನ್ 28 ರಂದು ನಡೆದ ಈ ಬೃಹತ್ ಲಸಿಕಾ ಕಾರ್ಯಕ್ರಮದ ವಲಯವಾರು ಸಂಪೂರ್ಣ ಮಾಹಿತಿ ಇಲ್ಲಿದೆ.

Pulse Polio 2026: ಬೆಂಗಳೂರಿನಲ್ಲಿ ಪಲ್ಸ್ ಪೋಲಿಯೋ ಅಭಿಯಾನದ ಮೊದಲ ದಿನವೇ 11 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ!
ಪಲ್ಸ್ ಪೋಲಿಯೋ
ಭಾವನಾ ಹೆಗಡೆ
|

Updated on: Jun 29, 2026 | 8:54 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ 11 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಯಶಸ್ವಿಯಾಗಿ ಪೋಲಿಯೋ ಹನಿ ನೀಡಿಕೆ.
  • ಮನೆ ಮನೆಗೆ ಹೋಗದೆ ಕೇವಲ ಬೂತ್‌ಗಳ ಮೂಲಕವೇ ದಾಖಲೆಯ ಲಸಿಕೆ.
  • ಜುಲೈ 1 ರವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ಬಾಕಿ ಮಕ್ಕಳಿಗೂ ಮುಂದುವರಿಕೆ.

ಬೆಂಗಳೂರು, ಜೂನ್ 29: ರಾಷ್ಟ್ರೀಯ ಪಲ್ಸ್ ಪೋಲಿಯೋ ಇಮ್ಯುನೈಸೇಶನ್ ಕಾರ್ಯಕ್ರಮದ ಮೊದಲ ದಿನವಾದ ಭಾನುವಾರ ಬೃಹತ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಐದು ವರ್ಷದೊಳಗಿನ ಒಟ್ಟು 11,06,535 ಮಕ್ಕಳಿಗೆ ಯಶಸ್ವಿಯಾಗಿ ಪೋಲಿಯೋ ಹನಿಗಳನ್ನು ಹಾಕಲಾಗಿದ್ದು, ಮೊದಲ ದಿನವೇ ಶೇ 96.4 ರಷ್ಟು ಗುರಿ ತಲುಪಲಾಗಿದೆ.

ಜೂನ್ 28 ರಿಂದ ಜುಲೈ 1 ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಈ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದ್ದು, ಈ ಅವಧಿಯಲ್ಲಿ ಒಟ್ಟು 11,47,872 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ವಿಶೇಷವೆಂದರೆ, ಮೊದಲ ದಿನ ಯಾವುದೇ ಮನೆ-ಮನೆ ಭೇಟಿ ನಡೆಸದೆಯೇ ಕೇವಲ ಲಸಿಕಾ ಕೇಂದ್ರಗಳ ಮೂಲಕವೇ ಈ ಅತ್ಯಧಿಕ ಪ್ರಮಾಣದ ಸಾಧನೆ ಮಾಡಲಾಗಿದೆ.

ವಿವಿಧ ವಲಯಗಳ ಲಸಿಕಾ ವಿವರ

  • ಕೇಂದ್ರ ವಲಯ: 1,59,106 ಮಕ್ಕಳು
  • ಪೂರ್ವ ವಲಯ: 1,73,781 ಮಕ್ಕಳು
  • ಪಶ್ಚಿಮ ವಲಯ: 2,81,369 ಮಕ್ಕಳು
  • ಉತ್ತರ ವಲಯ: 2,78,880 ಮಕ್ಕಳು
  • ದಕ್ಷಿಣ ವಲಯ: 2,13,399 ಮಕ್ಕಳು

ಇದನ್ನೂ ಓದಿ ಭವಿಷ್ಯದಲ್ಲಿ ಮಕ್ಕಳಿಗೆ ತೊಂದರೆ ಆಗಬಾರದು, ಪೋಲಿಯೋ ಲಸಿಕೆ ಹಾಕಿಸಲೇಬೇಕು: ಡಿ.ಕೆ ಶಿವಕುಮಾರ್

ಲಸಿಕಾ ಕೇಂದ್ರಗಳ ವಿವರ

ಒಟ್ಟು ಲಸಿಕೆ ಪಡೆದ ಮಕ್ಕಳಲ್ಲಿ 10,27,347 ಮಕ್ಕಳು ವಿವಿಧ ವಾರ್ಡ್‌ಗಳಲ್ಲಿ ಸ್ಥಾಪಿಸಲಾಗಿದ್ದ ಪೋಲಿಯೋ ಬೂತ್‌ಗಳು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (UPHCs), ನಮ್ಮ ಕ್ಲಿನಿಕ್‌ಗಳು, ಹೆರಿಗೆ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಪೋಲಿಯೋ ಹನಿಗಳನ್ನು ಪಡೆದಿದ್ದಾರೆ. ಉಳಿದಂತೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಂತಹ ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು ಹಾಗೂ ಮೇಳಗಳು ನಡೆದ ಸ್ಥಳಗಳಲ್ಲಿ ಇನ್ನೂ 73,987 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ. ಮುಂದಿನ ಮೂರು ದಿನಗಳ ಕಾಲ ಲಸಿಕೆಯಿಂದ ವಂಚಿತರಾದ ಮಕ್ಕಳನ್ನು ಪತ್ತೆ ಹಚ್ಚಿ ಪೋಲಿಯೋ ಹನಿ ಹಾಕುವ ಪ್ರಕ್ರಿಯೆ ಮುಂದುವರಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ