AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯಾನಕ ರೋಡ್​ರೇಜ್​ಗೆ ಬೆಚ್ಚಿಬಿದ್ದ ಬೆಂಗಳೂರು: ಕಾರಿನ ಬಾನೆಟ್​​ನಲ್ಲೇ ವ್ಯಕ್ತಿಯ ಒಂದು ಕಿಮೀ ಹೊತ್ತೊಯ್ದ ಚಾಲಕ!

ಇಲ್ಲಿರುವ ವಿಡಿಯೋ ನೋಡಿದರೆ ಎದೆ ಝಲ್ ಎನ್ನದೇ ಇರದು. ಕಾರು ಚಾಲಕ ಗೂಡ್ಸ್ ಚಾಲಕನನ್ನು ಕಾರಿನ ಬಾನೆಟ್ ಮೇಲೆ ಹೊತ್ತೊಯ್ದಿರುವ ದೃಶ್ಯ ಕಂಡು ಬೆಂಗಳೂರಿಗರು ಬೆಚ್ಚಿಬಿದ್ದಿದ್ದಾರೆ. ಬುಧವಾರ ಮಧ್ಯಾಹ್ನ ಸುಮಾರು 12.45ರ ಸುಮಾರಿಗೆ HAL ರಸ್ತೆ ಬಳಿ ನಡೆದ ಘಟನೆ ಸಂಬಂಧ ಇದೀಗ ಕಾರು ಚಾಲಕನ ಬಂಧನವಾಗಿದೆ. ನಡೆದಿದ್ದೇನು ಎಂಬ ಮಾಹಿತಿ ವಿಡಿಯೋ ಸಹಿತ ಇಲ್ಲಿದೆ ನೋಡಿ.

ಭಯಾನಕ ರೋಡ್​ರೇಜ್​ಗೆ ಬೆಚ್ಚಿಬಿದ್ದ ಬೆಂಗಳೂರು: ಕಾರಿನ ಬಾನೆಟ್​​ನಲ್ಲೇ ವ್ಯಕ್ತಿಯ ಒಂದು ಕಿಮೀ ಹೊತ್ತೊಯ್ದ ಚಾಲಕ!
ಬೆಂಗಳೂರು ರೋಡ್​ರೇಜ್​Image Credit source: tv9
ಗಣಪತಿ ಶರ್ಮಾ
|

Updated on:Feb 12, 2026 | 2:43 PM

Share

ಬೆಂಗಳೂರು, ಫೆಬ್ರವರಿ 12: ಬೆಂಗಳೂರಿನ (Bangalore) ಹೆಚ್​ಎಎಲ್ (HAL) ರಸ್ತೆಯಲ್ಲಿ ನಡೆದ ಭಯಾನಕ ಘಟನೆಯೊಂದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕಾರು ಮತ್ತು ಗೂಡ್ಸ್ ವಾಹನ ಚಾಲಕರ ನಡುವೆ ಸಣ್ಣ ಗಲಾಟೆ ನಡೆದು, ಬಳಿಕ ಕಾರು ಚಾಲಕ ಗೂಡ್ಸ್ ವಾಹನದ ಚಾಲಕನನ್ನು ತನ್ನ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಬುಧವಾರ ಮಧ್ಯಾಹ್ನ ಸುಮಾರು 12.45ರ ಸುಮಾರಿಗೆ ನಡೆದಿದೆ. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಗೂಡ್ಸ್ ವಾಹನ ಮತ್ತು ಕಾರು ಟಚ್ ಆಗಿದ್ದ ಹಿನ್ನೆಲೆಯಲ್ಲಿ ಇಬ್ಬರು ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಹನಕ್ಕೆ ಉಂಟಾದ ನಷ್ಟದ ಪರಿಹಾರ ನೀಡುವಂತೆ ಗೂಡ್ಸ್ ವಾಹನದ ಚಾಲಕ ನಂಜುಂಡ ಕೇಳಿದ್ದಾನೆ. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ಹೆಚ್ಚಾಗಿ, ನಂಜುಂಡ ಕಾರಿನ ಮುಂದೆ ನಿಂತಿದ್ದ ವೇಳೆ ಕಾರು ಚಾಲಕ ಸುರೇಶ್ ಏಕಾಏಕಿ ಕಾರು ಚಾಲನೆ ಮಾಡಿದ್ದಾನೆ. ಪರಿಣಾಮ, ನಂಜುಂಡ ಕಾರಿನ ಬಾನೆಟ್ ಮೇಲೆ ಬಿದ್ದು ಸುಮಾರು ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಒಯ್ಯಲ್ಪಟ್ಟಿದ್ದಾನೆ.

ನಂಜುಂಡ ಜೋರಾಗಿ ಕಿರುಚುತ್ತಿದ್ದರೂ ಚಾಲಕ ಕಾರನ್ನು ನಿಲ್ಲಿಸದೆ ಸಾಗಿದ ದೃಶ್ಯ ರಸ್ತೆಬದಿ ಸಾಗುತ್ತಿದ್ದ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ. ಕೆಂಪು ಬಣ್ಣದ ಕಾರಿನ ಚಲನವಲನ ಗಮನಿಸಿದ ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ.

ವಿಡಿಯೋ ಇಲ್ಲಿ ನೋಡಿ

ಟ್ರಿನಿಟಿ ಜಂಕ್ಷನ್ ಬಳಿ ಆರಂಭವಾದ ಗಲಾಟೆ ಬಳಿಕ ಸಿಬಿ ಜಂಕ್ಷನ್ ಹಾಗೂ ASC ಸೆಂಟರ್ ಕಾಲೇಜು ವರೆಗೆ ಮುಂದುವರಿದಿದ್ದು, ಇತರೆ ಕ್ಯಾಬ್ ಚಾಲಕರು ಅಡ್ಡಹಾಕಿದ ಬಳಿಕ ಚಾಲಕ ಕಾರು ನಿಲ್ಲಿಸಿದ್ದಾನೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡಬಲ್ ಮರ್ಡರ್: ಹೆತ್ತ ತಂದೆ-ತಾಯಿಯನ್ನೇ ಕೊಂದ ಮಗ

ಘಟನೆಗೆ ಸಂಬಂಧಿಸಿ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇವಲ ಒಂದು ಗಂಟೆಯಲ್ಲೇ ಆರೋಪಿಯಾಗಿದ್ದ ಕಾರು ಚಾಲಕ ಸುರೇಶ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಕಾರನ್ನು ಸೀಜ್ ಮಾಡಲಾಗಿದ್ದು, ಆರೋಪಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:27 am, Thu, 12 February 26

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More