AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಸ್ಯಾಂಕಿ ಕೆರೆ ದಡದ ಮೇಲೆ ಸಾರ್ವಜನಿಕರ ವಾಕಿಂಗ್ ಬಂದ್: ಕಾರಣ?

ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ನಾಳೆ ನಡೆಯುವ ಕಾವೇರಿ ಆರತಿಯ ಕಾರಣದಿಂದ ವಾಯುವಿಹಾರ ಮತ್ತು ಜಾಗಿಂಗ್‌ಗೆ ನಿರ್ಬಂಧ ವಿಧಿಸಲಾಗಿದೆ. ಶುಕ್ರವಾರ ಮುಂಜಾನೆಯಿಂದ ಶನಿವಾರ ಬೆಳಗ್ಗೆವರೆಗೂ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಆದರೆ ಕಾರ್ಯಕ್ರಮಕ್ಕೆ ಹಾಜರಾಗಬಹುದಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಎಲ್ಲರೂ ಬರುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಸ್ಯಾಂಕಿ ಕೆರೆ ದಡದ ಮೇಲೆ ಸಾರ್ವಜನಿಕರ ವಾಕಿಂಗ್ ಬಂದ್: ಕಾರಣ?
ಬೆಂಗಳೂರಿನ ಸ್ಯಾಂಕಿ ಕೆರೆ ದಡದ ಮೇಲೆ ಸಾರ್ವಜನಿಕರ ವಾಕಿಂಗ್ ಬಂದ್: ಕಾರಣ?
TV9 Web
| Edited By: |

Updated on:Mar 20, 2025 | 7:41 PM

Share

ಬೆಂಗಳೂರು, ಮಾರ್ಚ್​ 20: ಕಾವೇರಿ ಆರತಿ (Kaveri Aarti) ಹಿನ್ನೆಲೆ ನಗರದ ಸ್ಯಾಂಕಿ ಕೆರೆ (Sankey Tank) ಬಳಿ ವಾಯುವಿಹಾರ ನಿಷೇಧಿಸಲಾಗಿದೆ. ನಾಳೆ ಮುಂಜಾನೆಯಿಂದ ಶನಿವಾರ ಬೆಳಗ್ಗೆವರೆಗೂ ಪ್ರವೇಶ ಇಲ್ಲ. ವಾಕಿಂಗ್, ಜಾಗಿಂಗ್​​ಗೆ ನಿಷೇಧಿಸಲಾಗಿದೆ. ಆದರೆ ಕಾರ್ಯಕ್ರಮಕ್ಕೆ ಬರಲು ಮಾತ್ರ ಅವಕಾಶ ನೀಡಲಾಗಿದೆ. ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ನಿಯಮಗಳನ್ನು ಉಲ್ಲಂಘಿಸದಂತೆ ಸ್ಯಾಂಕಿ ಟ್ಯಾಂಕ್​​ನ ಬಫರ್ ಝೋನ್​ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಲು ಹೈಕೋರ್ಟ್ ಅನುಮತಿ ನೀಡಿದೆ.

ಕಾವೇರಿ ಆರತಿಗೆ ಎಲ್ಲರೂ ಬನ್ನಿ: ಡಿಕೆ ಶಿವಕುಮಾರ್​ ಮನವಿ

ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಡಿಸಿಎಂ ಡಿಕೆ ಶಿವಕುಮಾರ್​, ಆರತಿ ಆರಂಭ 7 ಗಂಟೆಗೆ. ನಾಗರಿಕರಿಗೆ ಮನವಿ ಮಾಡುತ್ತೇನೆ, ನೀವೆಲ್ಲ ಬನ್ನಿ ಬಂದು ನೋಡಿ, ಎಲ್ಲರೂ ಕೇಳಿಕೊಳ್ಳೋಣ. ಒಳ್ಳೆ ಮಳೆ ಬೆಳೆ ಆಗಲಿ ಅಂತ ಪ್ರಾರ್ಥನೆ ಮಾಡೋಣ. ಪ್ರಯತ್ನ ಇದೆ ಪ್ರಾರ್ಥನೆ ಫಲ ಕೊಡುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್​ ಕೇಸ್: ಡಿಕೆ ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ

ಇದನ್ನೂ ಓದಿ
Image
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ 3 ಸ್ಥಳ ಫೈನಲ್​!
Image
ಕರ್ನಾಟಕ ಬಂದ್, ಈ ಅಗತ್ಯ ಕೆಲಸಗಳನ್ನು ಇಂದು, ನಾಳೆಯೊಳಗೆ ಮುಗಿಸಿ
Image
ಬೆಂಗಳೂರು: ಜೀವಜಲವಿಲ್ಲದೇ ಇಂಗಿ ಹೋದ 125ಕ್ಕೂ ಹೆಚ್ಚು ಕೆರೆಗಳು
Image
Bengaluru Lakes: ಬೆಂಗಳೂರಿನ ಈ ಪ್ರಸಿದ್ಧ ಕೆರೆಗಳಿಗೆ ಭೇಟಿ ನೀಡಿ, ನಿಮ್ಮ ಸಂಜೆಯನ್ನು ಮುದವಾಗಿಸಿ

ಸಂಜೆ 5.30 ಗಂಟೆಗೆ ಕಲಾವಿದರಾದ ಅನನ್ಯ ಭಟ್, ರಘು ದೀಕ್ಷಿತ್ ಕೂಡ ಬರುತ್ತಾರೆ. ಮೊದಲ ಬಾರಿ ಫ್ಲೋಟಿಂಗ್ ಸ್ಟೇಜ್ ತರಿಸಿದ್ದೇವೆ. ಒಳ್ಳೆಯ ಲೈಟಿಂಗ್ಸ್ ಕೂಡ ಮಾಡಲಾಗಿದೆ. ಕಾವೇರಿ ತಾಯಿಗೆ ಪೂಜೆ ಮಾಡುವ ಭಾಗ್ಯ ಸಿಕ್ಕಿದೆ. 2 ತಂಡಗಳಿಂದ ಕಾವೇರಿ ಆರತಿ ನಡೆಯಲಿದ್ದು, 45 ನಿಮಿಷ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru Second Airport: ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣಕ್ಕೆ 3 ಸ್ಥಳ ಗುರುತು, ಎಲ್ಲೆಲ್ಲಿ? 

ನಾಳೆ ಶುಭ ಶುಕ್ರವಾರ, ಕೆಲವರು ತೊಂದರೆ ಮಾಡಬೇಕು ಅಂತ ಕೋರ್ಟ್​ಗೆ ಹೋಗಿದ್ದರು. ಆದರೆ ಕೋರ್ಟ್ ಅದನ್ನು ವಜಾ ಮಾಡಿದೆ. ಸರ್ಕಾರ ಕಾರ್ಯಕ್ರಮ ಮಾಡಲಿದೆ ಅಂತ ಹೇಳಿದೆ. ಕಾರ್ಯಕ್ರಮಕ್ಕೆ ಬರುವ ನಾಗರೀಕರಿಗೆ ಪಾಸ್ ಅವಶ್ಯಕತೆ ಇಲ್ಲ. ಎಲ್ಲರಿಗೂ ಮುಕ್ತ ಪ್ರವೇಶ ನೀಡಲಾಗಿದೆ. ಕುರ್ಚಿ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಕೆಆರ್​ಎಸ್​​ನಲ್ಲಿ ಕಾವೇರಿ ಆರತಿ

ಇನ್ನು ಮಾರ್ಚ್​ 22 ರಂದು ವಿಶ್ವ ಜಲದಿನ. ಈ ಬಾರಿ ವಿಶೇಷವಾಗಿ ವಿಶ್ವಜಲದಿನ ಆಚರಣೆ ಮಾಡುತ್ತಿದ್ದೇವೆ. ಜಲಮಂಡಳಿ, ನೀರಾವರಿ ಇಲಾಖೆ ವತಿಯಿಂದ ಪ್ರತಿಜ್ಞೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. BWSSB ಅಧಿಕಾರಿಗಳ ಜೊತೆ ನಾಳೆ ನಾನು ಭಾಗಮಂಡಲಕ್ಕೆ ಹೋಗಿ ಕಾವೇರಿ ನೀರನ್ನು ತರುತ್ತೇನೆ. 5 ರಿಂದ 6 ಜಾಗಗಳಿಗೆ ಭೇಟಿ ನೀಡಿ ವರದಿ ತರಿಸಿಕೊಂಡು ಈ ಜಾಗದಲ್ಲಿ‌ ಕಾರ್ಯಕ್ರಮ ಮಾಡಲು ಡಿಸೈಡ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕೆಆರ್​ಎಸ್​​ನಲ್ಲಿ ಕಾವೇರಿ ಆರತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:39 pm, Thu, 20 March 25