AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತರಾಜ್ಯ ಪ್ರಯಾಣಿಕರಿಗೆ ಗುಡ್ ನ್ಯೂಸ್; 8 ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ಮಾಹಿತಿ

ಇಂಡಿಗೋ ವಿಮಾನ ರದ್ದತಿಯಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲು ರೈಲ್ವೆ ಇಲಾಖೆ ವಿಶೇಷ ರೈಲು ಸೇವೆಗಳನ್ನು ಆರಂಭಿಸಿದೆ. ಬೆಂಗಳೂರಿನಿಂದ ದೇಶದ ಪ್ರಮುಖ ನಗರಗಳಿಗೆ 8 ಹೆಚ್ಚುವರಿ ರೈಲುಗಳನ್ನು ಘೋಷಿಸಲಾಗಿದ್ದು, ಮುಂದಿನ ಮೂರು ದಿನಗಳವರೆಗೆ ದೇಶದಾದ್ಯಂತ 100ಕ್ಕೂ ಹೆಚ್ಚು ವಿಶೇಷ ರೈಲುಗಳು ಸಂಚರಿಸಲಿವೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ.

ಅಂತರಾಜ್ಯ ಪ್ರಯಾಣಿಕರಿಗೆ ಗುಡ್ ನ್ಯೂಸ್; 8 ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ಮಾಹಿತಿ
ನೈರುತ್ಯ ರೈಲ್ವೇಸ್​ನಿಂದ ವಿಶೇಷ ರೈಲು ಸೇವೆ ಆರಂಭ
Kiran Surya
| Edited By: |

Updated on:Dec 07, 2025 | 12:55 PM

Share

ಬೆಂಗಳೂರು, ಡಿಸೆಂಬರ್ 07: ಇಂಡಿಗೋ ಫ್ಲೈಟ್ಸ್ ಕ್ಯಾನ್ಸಲ್ (IndiGo Flight) ಹಿನ್ನೆಲೆ ಪ್ರಯಾಣಿಕರು ಅಂತರಾಜ್ಯ ಪ್ರಯಾಣದಲ್ಲಿ ಅನಾನುಕೂಲ ಅನುಭವಿಸುತ್ತಿದ್ದು, ರೈಲುಗಳಲ್ಲಿ ಸೀಟುಗಳು ಸಿಗದೆ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಖಾಸಗೀ ಬಸ್​ಗಳ ದರವೂ ಗಗನಕ್ಕೇರಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆ ಈಗಾಗಲೇ ರೈಲ್ವೇ ಇಲಾಖೆ ಹೆಚ್ಚುವರಿ ಎಸಿ ಬೋಗಿಗಳ ಸೇವೆ ಆರಂಭಿಸಿದ್ದು, ಜೊತೆಗೆ ಇಂದಿನಿಂದ ದೆಹಲಿ, ಪುಣೆ ಮತ್ತು ಚೆನ್ನೈಗೆ ವಿಶೇಷ 8 ರೈಲುಗಳ ವ್ಯವಸ್ಥೆ ಮಾಡಿದೆ.

ಇಂದಿನಿಂದ ಮೂರು ದಿನಗಳ ವರೆಗೆ ವಿಶೇಷ ರೈಲು ಸೌಲಭ್ಯ

ಕೆಎಸ್ಆರ್ ಬೆಂಗಳೂರು ಟು ಪುಣೆ, ಕೆಎಸ್ಆರ್ ಬೆಂಗಳೂರು ಟು ಚೆನ್ನೈ, ಯಶವಂತಪುರ ಟು ದೆಹಲಿ, ಹೀಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್, ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್, ಯಶವಂತಪುರ ರೈಲ್ವೆ ಸ್ಟೇಷನ್​ನಿಂದ ಈ ವಿಶೇಷ ರೈಲುಗಳು ಸಂಚರಿಸಲಿದೆ. ಇಂದು ಬೆಳಗ್ಗೆ 7 ಗಂಟೆಗೆ ಮೊದಲ ವಿಶೇಷ ರೈಲು ಯಶವಂತಪುರ ರೈಲ್ವೆ ಸ್ಟೇಷನ್​ನಿಂದ ದೆಹಲಿಯ ಹಜರತ್ ನಿಜಾಮುದ್ದೀನ್​ಗೆ ಸಂಚಾರ ಆರಂಭಿಸಿದೆ. ಚೆನೈಗೆ  ರೈಲು ಬೆಳಗ್ಗೆ 8 ಗಂಟೆ 5 ನಿಮಿಷಕ್ಕೆ ಹೊರಟಿದೆ. ಇನ್ನು ಮೂರನೇ ರೈಲು ಕೆಎಸ್ಆರ್ ಬೆಂಗಳೂರಿನಿಂದ ರಾತ್ರಿ 7.30 ಕ್ಕೆ ಪುಣೆಗೆ ಸಂಚಾರ ಮಾಡಲಿದೆ. ನಾಳೆಯೂ ಕೂಡ ಚೆನೈಗೆ ವಿಶೇಷ ರೈಲಿನ ಸೇವೆ ಇರಲಿದೆ.

 100 ಕ್ಕೂ ಅಧಿಕ ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ

  • ರೈಲು ಸಂಖ್ಯೆ 06259 ಯಶವಂತಪುರ- ಹಜರತ್ ನಿಜಾಮುದ್ದೀನ್ ವಿಶೇಷ ರೈಲು 07.12.2025 ರಂದು ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಹೊರಟು ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಹಜರತ್ ನಿಜಾಮುದ್ದೀನ್ ತಲುಪುತ್ತದೆ.
  • ರೈಲು ಸಂಖ್ಯೆ 06260 ಹಜರತ್ ನಿಜಾಮುದ್ದೀನ್- ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು 09.12.2025 ಮಂಗಳವಾರದಂದು ರಾತ್ರಿ 11.50ಕ್ಕೆ ಹಜರತ್ ನಿಜಾಮುದ್ದೀನ್ ನಿಂದ ಹೊರಟು ಗುರುವಾರ ರಾತ್ರಿ 7.45ಕ್ಕೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪುತ್ತದೆ.
  • ರೈಲು ಸಂಖ್ಯೆ 06263 ಕೆ.ಎಸ್.ಆರ್. ಬೆಂಗಳೂರು- ಪುಣೆ ವಿಶೇಷ ರೈಲು 07.12.2025ರಂದು ರಾತ್ರಿ 7.30 ಗಂಟೆಗೆ ಕೆ.ಎಸ್.ಆರ್.ಬೆಂಗಳೂರು ನಿಲ್ದಾಣದಿಂದ ಹೊರಟು ಮರುದಿನ ಮಧ್ಯಾಹ್ನ 2.30 ಗಂಟೆಗೆ ಪುಣೆ ಯನ್ನು ತಲುಪುತ್ತದೆ.
  • ರೈಲು ಸಂಖ್ಯೆ 06264 ಪುಣೆ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು 08.12.2025 ಸೋಮವಾರದಂದು ಮಧ್ಯಾಹ್ನ 3.30ಕ್ಕೆ ಪುಣೆಯಿಂದ ಹೊರಟು ಮರುದಿನ ಬೆಳಗ್ಗೆ 09.30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪುತ್ತದೆ.
  • ರೈಲು ಸಂಖ್ಯೆ 06255 ಕೆ.ಎಸ್.ಆರ್. ಬೆಂಗಳೂರು- ಚೆನ್ನೈ ಎಗ್ಮೋರ್ ವಿಶೇಷ ರೈಲು 07.12.2025ರಂದು ಬೆಳಗ್ಗೆ 08.05ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಚೆನ್ನೈ ಎಗ್ಮೋರ್ ತಲುಪುತ್ತದೆ.
  • ರೈಲು ಸಂಖ್ಯೆ 06256 ಚೆನ್ನೈ ಎಗ್ಮೋರ್- ಕೆ.ಎಸ್.ಆರ್. ಬೆಂಗಳೂರು ವಿಶೇಷ ರೈಲು 07.12.2025ರಂದು ಮಧ್ಯಾಹ್ನ 3.45ಕ್ಕೆ ಚೆನ್ನೈ ಎಗ್ಮೋರ್ ನಿಂದ ಹೊರಟು ರಾತ್ರಿ 10.45ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.
  • ರೈಲು ಸಂಖ್ಯೆ 06255 ಕೆ.ಎಸ್.ಆರ್. ಬೆಂಗಳೂರು- ಚೆನ್ನೈ ಸೆಂಟ್ರಲ್ ವಿಶೇಷ ರೈಲು 08.12.2025ರಂದು ಬೆಳಗ್ಗೆ 08.05ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.45 ಗಂಟೆಗೆ ಚೆನ್ನೈ ಸೆಂಟ್ರಲ್ ತಲುಪುತ್ತದೆ.
  • ರೈಲು ಸಂಖ್ಯೆ 06256 ಚೆನ್ನೈ ಸೆಂಟ್ರಲ್- ಕೆ.ಎಸ್.ಆರ್. ಬೆಂಗಳೂರು ವಿಶೇಷ ರೈಲು 08.12.2025ರಂದು ಸಂಜೆ 4.10 ಕ್ಕೆ ಚೆನ್ನೈ ಸೆಂಟ್ರಲ್ ನಿಂದ ಹೊರಟು ರಾತ್ರಿ 10.45ಕ್ಕೆ ಕೆ.ಎಸ್.ಆರ್. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ಇದನ್ನೂ ಓದಿ ಯಶವಂತಪುರ – ಕಾರವಾರ ನಡುವೆ ವಿಶೇಷ ಎಕ್ಸ್​ಪ್ರೆಸ್ ರೈಲು: ಇಲ್ಲಿದೆ ವೇಳಾಪಟ್ಟಿ, ನಿಲುಗಡೆ ಇತ್ಯಾದಿ ವಿವರ

ಇಂಡಿಗೋದ ವಿಮಾನ ರದ್ದತಿ ಹಿನ್ನೆಲೆ ಖಾಸಗಿ ಬಸ್ ದರ ಗಗನಕ್ಕೆ

ಇಂಡಿಗೋ ವಿಮಾನ ರದ್ದತಿ ಹಿನ್ನೆಲೆ ಖಾಸಗಿ ಬಸ್ ಕಂಪನಿಗಳು ಬೇಕಾ ಬಿಟ್ಟಿ  ದರ ಏರಿಕೆ ಮಾಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.  ಬೆಂಗಳೂರಿನಿಂದ ಮುಂಬೈ 3,000 ರೂ. –  9,000 ರೂ. ದರ ಏರಿಸಿದ್ದರೆ,  ಬೆಂಗಳೂರಿನಿಂದ ಪುಣೆಗೆ  2,800 ರೂ. –  8,700 ರೂ. ಏರಿಕೆ ಮಾಡಲಾಗಿದೆ. ಬೆಂಗಳೂರಿನಿಂದ ಅಹಮದಾಬಾದ್​ಗೆ  3,000 ರೂ. –  7,000ರೂ. ಏರಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:39 pm, Sun, 7 December 25

ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ