ಬೆಂಗಳೂರು: ಟ್ರಾಫಿಕ್ ಫೈನ್ನಿಂದ ತಪ್ಪಿಸಿಕೊಳ್ಳಲು ಬೈಕ್ ಸವಾರನ ಖತರ್ನಾಕ್ ಐಡಿಯಾ
ಯಲಹಂಕದ ಕೋಗಿಲು ಕ್ರಾಸ್ ಬಳಿ ಓರ್ವ ಸವಾರ ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಖತರ್ನಾಕ್ ಐಡಿಯಾ ಮಾಡಿದ್ದಾನೆ. ಬೈಕ್ನ ಹಿಂಬದಿ ನಂಬರ್ ಫ್ಲೇಟ್ಗೆ ಮಾಸ್ಕ್ ಹಾಕಿದ್ದಾನೆ. ಸದ್ಯ ಈ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು, ಡಿಸೆಂಬರ್ 27: ಸಂಚಾರಿ ನಿಯಮ (Traffic Rules) ಉಲ್ಲಂಘನೆ ಮಾಡಿ, ಟ್ರಾಫಿಕ್ ಫೈನ್ನಿಂದ ತಪ್ಪಿಸಿಕೊಳ್ಳಲು ಓರ್ವ ಸವಾರ ಬೈಕ್ನ (Bike) ಹಿಂಬದಿ ನಂಬರ್ ಫ್ಲೇಟ್ಗೆ ಮಾಸ್ಕ್ ಹಾಕಿದ್ದಾನೆ. ಹೌದು ಯಲಹಂಕದ (yelahanka) ಕೋಗಿಲು ಕ್ರಾಸ್ ಬಳಿ ಓರ್ವ ಸವಾರ ಬೈಕ್ನ ಹಿಂಬದಿ ನಂಬರ್ ಫ್ಲೇಟ್ಗೆ ಮಾಸ್ಕ್ ಹಾಕಿದ್ದಾನೆ. ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿದರೇ ಸಂಚಾರಿ ಪೊಲೀಸರು ಗಾಡಿಯ ನಂಬರ್ ಫ್ಲೇಟ್ ಪೋಟೋ ತೆಗೆದು ದಂಡ ಹಾಕುತ್ತಾರೆ. ಅಲ್ಲದೆ ಸಿಸಿಟಿವಿಯಲ್ಲೂ ಬೈಕ್ನ ನಂಬರ್ ಕ್ಯಾಪ್ಚರ್ ಆಗಿ, ದಂಡ ಬೀಳುತ್ತದೆ.
ಅದೇ ನಂಬರ್ ಫ್ಲೇಟ್ಗೆ ಮಾಸ್ಕ್ ಹಾಕಿ, ನಿಯಮ ಉಲ್ಲಂಘಿಸಿದರೇ ಪೊಲೀಸರಿಗೆ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗುದಿಲ್ಲ. ಈ ಮೂಲಕ ದಂಡದಿಂದ ತಪ್ಪಿಸಿಕೊಳ್ಳಬಹುದು ಎಂದು ಸವಾರ ಈ ಐಡಿಯಾ ಮಾಡಿದ್ದಾನೆ.
ಇದನ್ನೂ ಓದಿ: ಹೆಚ್ಚಾದ ಟ್ರಾಫಿಕ್ ಕಿರಿಕಿರಿ; ಮಾಲ್ ಆಫ್ ಏಷ್ಯಾ ವಿರುದ್ಧ ಬ್ಯಾಟರಾಯನಪುರ ನಿವಾಸಿಗಳ ಆಕ್ರೋಶ
ಆರ್ಎಕ್ಸ್ ಬೈಕ್ ಕಳ್ಳತನ; ಸಿಸಿಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸೆರೆ
ರಾಜಧಾನಿ ಬೆಂಗಳೂರಿನಲ್ಲಿ ಆರ್ಎಕ್ಸ್ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಹೌದು ವೈಟ್ ಫೀಲ್ಡ್ನ ಚೆನ್ನಸಂದ್ರ ನಿವಾಸಿಯಾಗಿರುವ ಶ್ರೀನಿವಾಸ್ ಎಂಬುವರಿಗೆ ಸೇರಿದ ಆರ್ಎಕ್ಸ್ ಬೈಕ್ನ ಲಾಕ್ ಮುರಿದು ಕಳ್ಳತನ ಮಾಡಲಾಗಿದೆ. ಕಳೆದ ಭಾನುವಾರ ಮಧ್ಯರಾತ್ರಿ 1.20 ಸುಮಾರಿಗೆ ಘಟನೆ ನಡೆದಿದೆ. ಘಟನೆ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Wed, 27 December 23