AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನ ಮಾಲೀಕರೇ ಎಚ್ಚರ! ಟ್ರಾಫಿಕ್ ದಂಡ ಪಾವತಿಸುವಂತೆ ಸೈಬರ್ ವಂಚಕರಿಂದ ವಾಟ್ಸಾಪ್​ಗೆ ನಕಲಿ ಸಂದೇಶ

ಸಂಚಾರಿ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಕಟ್ಟ ಬೇಕಾಗುತ್ತದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಟ್ರಾಫಿಕ್​ ನಿಯಮಗಳನ್ನು ಗಾಳಿ ತೂರಿ ಸಂಚರಿಸುವವರೆ ಹೆಚ್ಚಾಗಿದ್ದಾರೆ. ಹೀಗೆ ನಿಮಯ ಉಲ್ಲಂಘಿಸಿದವರ ವಾಟ್ಸಪ್​ ನಂಬರ್​ಗೆ ಸೈಬರ್ ವಂಚಕರು ದಂಡ ಪಾವತಿಸುವಂತೆ ಸಂದೇಶ ಕಳುಹಿಸುತ್ತಿದ್ದಾರೆ.

ವಾಹನ ಮಾಲೀಕರೇ ಎಚ್ಚರ! ಟ್ರಾಫಿಕ್ ದಂಡ ಪಾವತಿಸುವಂತೆ ಸೈಬರ್ ವಂಚಕರಿಂದ ವಾಟ್ಸಾಪ್​ಗೆ ನಕಲಿ ಸಂದೇಶ
ವಾಟ್ಸಪ್​​
ವಿವೇಕ ಬಿರಾದಾರ
|

Updated on:Feb 26, 2024 | 8:26 AM

Share

ಬೆಂಗಳೂರು ಫೆಬ್ರವರಿ 26: ನೀವು ಸಂಚಾರ ನಿಯಮವನ್ನು (Traffic Rules) ಉಲ್ಲಂಘಿಸಿದ್ದೀರಿ ದಂಡ ಪಾವತಿಸಿ ಎಂದು ನಿಮ್ಮ ವಾಟ್ಸಪ್ (Whats Up)​​ ನಂಬರ್​ಗೆ ಸಂದೇಶ ಬಂದರೇ, ಹಣ ಪಾವತಿಸುವುಕ್ಕಿಂತ ಮುಂಚೆ ಒಂದು ಬಾರಿ ಮರು ಪರಿಶೀಲಿಸಿಕೊಳ್ಳಿ. ಏಕೆಂದರೆ ಅದು ಸೈಬರ್​ ವಂಚಕರ ಸಂದೇಶವೂ ಆಗಿರಬಹುದು. ಹೌದು ಸಂಚಾರ ನಿಯಮ ಉಲ್ಲಂಘನೆಯ ದಂಡ ವಸೂಲಿ ಹೆಸರಿನಲ್ಲಿ ಬೆಂಗಳೂರಿನ ವಾಹನ ಮಾಲೀಕರನ್ನು ಸೈಬರ್ ವಂಚಕರು ವಂಚಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ದಂಡ ಪಾವತಿಸಿದ ನಂತರವೂ, ಮತ್ತೆ ದಂಡ ಪಾವತಿಸುವಂತೆ ವಾಹನ ಮಾಲೀಕರಿಗೆ ಬೆಂಗಳೂರು ಸಂಚಾರ ಪೊಲೀಸರ (Bengaluru Traffic Police) ಹೆಸರಿನಲ್ಲಿ ಸೈಬರ್​ ವಂಚಕರು ವಾಟ್ಸಪ್​​ಗೆ ಸಂದೇಶ ಕಳುಹಿಸುತ್ತಿದ್ದಾರೆ. ಈ ಮೂಲಕ ಸೈಬರ್ ವಂಚಕರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿರುವುದು ಗಮನಾರ್ಹ.

ಸೈಬರ್​ ವಂಚಕರು ವಾಹನ ಮಾಲೀಕರಿಗೆ “ವಾಟ್ಸಾಪ್​ನಲ್ಲಿ, ಸಂಚಾರಿ ನಿಯಮ ಉಲ್ಲಂಘನೆಯ ದಂಡ ಬಾಕಿ ಇದೆ. ನಾವು ಕಳುಹಿಸಿದ ಕ್ಯೂಆರ್ ಕೋಡ್‌ ಮೂಲಕ ದಂಡವನ್ನು ಪಾವತಿಸಿ” ಸಂಚಾರ ಪೊಲೀಸ್​ ಇಲಾಖೆ ಹೆಸರಿನಲ್ಲಿ ಸಂದೇಶ ಕಳುಹಿಸುತ್ತಿದ್ದಾರೆ.

ಈ ಬಗ್ಗೆ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಅವರು ಮಾತನಾಡಿ, ಬೆಂಗಳೂರು ವಾಹನ ಮಾಲೀಕರು ಇಂತಹ ವಂಚನೆ ಜಾಲಗಳಲ್ಲಿ ಸಿಲುಕಬೇಡಿ. ಬೆಂಗಳೂರು ಸಂಚಾರ ಪೊಲೀಸರು ನೋಟೀಸ್ ಅನ್ನು ಪೋಸ್ಟ್ ಮೂಲಕ ಮಾತ್ರ ಕಳುಹಿಸುತ್ತದೆ. ನಾವು WhatsApp ಸಂದೇಶಗಳನ್ನು ಕಳುಹಿಸುವುದಿಲ್ಲ ಮತ್ತು QR ಕೋಡ್ ಮೂಲಕ ದಂಡವನ್ನು ಪಾವತಿಸಲು ಯಾವುದೇ ಆಯ್ಕೆಗಳಿಲ್ಲ ಎಂದು ಹೇಳಿದರು.

ಯಾವುದೆ ತರಹದ ಸಂದೇಶ, ಸೂಚನೆಗಳಿದ್ದರೆ ನಮ್ಮ ವೆಬ್‌ಸೈಟ್ https://btp.gov.in ನಲ್ಲಿ ತಿಳಿಸುತ್ತೇವೆ. ಬೇರೆ ಯಾವುದೇ ಅಪ್ಲಿಕೇಶನ್ ಅಥವಾ ವೆಬ್‌ಸೈಟ್​​ನಲ್ಲಿ ಬರುವ ಸಂದೇಶ ಅಥವಾ ಸೂಚನೆಗಳನ್ನು ನಂಬಿ ಮೋಸ ಹೋಗಬೇಡಿ. ಇನ್ನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಂಚಾರ ಪೊಲೀಸ್​ ಇಲಾಖೆ ಐದು ಪ್ರತ್ಯೇಕ ದೂರು ದಾಖಲಿಸಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​​ ನಿವಾರಣೆಗೆ ಕೃತಕ ಬುದ್ಧಿಮತ್ತೆ ಮೊರೆ ಹೋಗಲಿದ್ದಾರೆ ಪೊಲೀಸರು: ಏನಿದರ ಪ್ರಯೋಜನ? ಇಲ್ಲಿದೆ ವಿವರ

ಇನ್ನು ಜನರಿಗೆ ವಂಚನೆ ಎಸಗವ ಐದು ಅನಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬೆಂಗಳೂರು ಸಂಚಾರಿ ಪೊಲೀಸ್​ ಇಲಾಖೆ Google Play Storeನಿಂದ ತೆಗೆದಿದೆ. ಈ ಆ್ಯಪ್‌ಗಳ ಮುಖಾಂತರ ವಂಚಕರು ವಾಹನ ಮಾಲೀಕರಿಗೆ ವಂಚಿಸುತ್ತಿದ್ದರು. ಅನೇಕರು ಈ ಆ್ಯಪ್​ಗಳನ್ನು ಡೌನ್‌ಲೋಡ್ ಮಾಡಿದ್ದಾರೆ ಮತ್ತು ಬಳಸುತ್ತಿದ್ದಾರೆ.

ಬೆಂಗಳೂರು ಟ್ರಾಫಿಕ್, ಬೆಂಗಳೂರು ಟ್ರಾಫಿಕ್ ಚೆಕ್ ಎಫ್, ಟ್ರಾಫಿಕ್ ಬೆಂಗಳೂರು, ಬೆಂಗಳೂರು ಟ್ರಾಫಿಕ್ ಫೈನ್ ಚೆಕರ್ ಮತ್ತು ಟ್ರಾಫಿಕ್ ಫೈನ್ಸ್ ಬೆಂಗಳೂರು ಎಂಬ ಐದು ಮೊಬೈಲ್ ಅಪ್ಲಿಕೇಶನ್‌ಗಳ ಡೆವಲಪರ್‌ಗಳ ವಿರುದ್ಧ ಈಗಾಗಲೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:17 am, Mon, 26 February 24

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್