Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವಿಜಯನಗರ, ಗೋವಿಂದರಾಜನಗರ ಕ್ಷೇತ್ರ ಮಹಿಳೆಯರಿಗೆ ಎಷ್ಟು ಸೇಫ್? ಇಲ್ಲಿದೆ ಸಮೀಕ್ಷಾ ವರದಿಯಲ್ಲಿನ ಮುಖ್ಯ ಅಂಶ

ಬಿ.ಪ್ಯಾಕ್ ಮತ್ತು ಸಿಜಿಐ ಸಂಸ್ಥೆಗಳು ಬೆಂಗಳೂರಿನ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಸುರಕ್ಷತೆ ಕುರಿತು ನಡೆಸಿದ "ಬಿ.ಸೇಫ್" ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಬಸ್ ನಿಲ್ದಾಣಗಳು, ಉದ್ಯಾನವನಗಳು, ಅಂಗನವಾಡಿ ಕೇಂದ್ರಗಳು ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿನ ಸುರಕ್ಷತಾ ಮೂಲಸೌಕರ್ಯಗಳ ಕೊರತೆಯನ್ನು ವರದಿ ಎತ್ತಿ ತೋರಿಸಿದೆ. ಸುಧಾರಣೆಗೆ ಸಲಹೆಗಳನ್ನು ನೀಡಲಾಗಿದೆ.

ಬೆಂಗಳೂರು: ವಿಜಯನಗರ,  ಗೋವಿಂದರಾಜನಗರ ಕ್ಷೇತ್ರ ಮಹಿಳೆಯರಿಗೆ ಎಷ್ಟು ಸೇಫ್? ಇಲ್ಲಿದೆ ಸಮೀಕ್ಷಾ ವರದಿಯಲ್ಲಿನ ಮುಖ್ಯ ಅಂಶ
“ಬಿ.ಸೇಫ್‌” ಸಮೀಕ್ಷಾ ವರದಿ ಬಿಡುಗಡೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Mar 29, 2025 | 5:48 PM

ಬೆಂಗಳೂರು, ಮಾರ್ಚ್​ 29: ವಿಜಯನಗರ (Vijayanagar) ಹಾಗೂ ಗೋವಿಂದರಾಜನಗರ (Govindarajnagar) ವಿಧಾನಸಭಾ ಕ್ಷೇತ್ರಗಳಲ್ಲಿ ಮಹಿಳಾ ಸುರಕ್ಷತೆ ಕುರಿತು ಬಿ.ಪ್ಯಾಕ್‌ ಮತ್ತು ಸಿಜಿಐ ಸಂಸ್ಥೆ ನಡೆಸಿದ “ಬಿ.ಸೇಫ್‌” ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ ನಟಿ ಆಶಾಭಟ್‌, ಮುಖ್ಯಮಂತ್ರಿಗಳ ಕಾರ್ಯದರ್ಶಿ ವೈಷ್ಣವಿ ಹಾಗೂ ಸಿಜಿಐ ಉಪಾಧ್ಯಕ್ಷೆ ಶ್ರೀವಿದ್ಯಾ ನಟರಾಜ್ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದರು.

ಸಮೀಕ್ಷಾ ವರದಿಯ ಪ್ರಮುಖಾಂಶಗಳು:

ವಿಜಯನಗರ ವಿಧಾನಸಭಾ ಕ್ಷೇತ್ರದ 9 ಬಿಬಿಎಂಪಿ ವಾರ್ಡ್ ಮತ್ತು ಗೋವಿಂದರಾಜನಗರದ 10 ಬಿಬಿಎಂಪಿ ವಾರ್ಡ್‌ಗಳಲ್ಲಿ ಬಿ.ಸೇಫ್‌ ಸಮೀಕ್ಷಾ ಅಧ್ಯಯನ ನಡೆಸಲಾಗಿದ್ದು, ಮಹಿಳೆಯರು ಹೆಚ್ಚಾಗಿ ಭೇಟಿ ನೀಡುವ ಆರು ಪ್ರಮುಖ ವಿಭಾಗಗಳ, 265 ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಆಡಿಟ್‌ ಮಾಡಲಾಗಿದೆ. ಇಲ್ಲಿನ 46 ಅಂಗನವಾಡಿ ಕೇಂದ್ರಗಳು, 131 ಬಸ್ ನಿಲ್ದಾಣಗಳು, 58 ಉದ್ಯಾನವನಗಳು, 10 ಸಾರ್ವಜನಿಕ ಆರೋಗ್ಯ ಕೇಂದ್ರ, 4 ಪೊಲೀಸ್ ಠಾಣೆ ಮತ್ತು 16 ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಎಷ್ಟು ಸುರಕ್ಷತೆ ಇದೆ ಎಂಬುದರ ಬಗ್ಗೆ ಸಮಗ್ರವಾಗಿ ಅಭಿಪ್ರಾಯ ಸಂಗ್ರಹಿಸಿ ಅಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.

ವಿಜಯನಗರ ಸಮೀಕ್ಷಾ ವರದಿ ಪ್ರಮುಖಾಂಶ

  1. ಬಸ್ ನಿಲ್ದಾಣಗಳಲ್ಲಿನ ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಮಾರ್ಗ ನಕ್ಷೆ, ಬಸ್‌ಗಳ ವಿವರ ವಿಲ್ಲದೇ ಇರುವುದು ಮಹಿಳೆಯರು ಖಾಲಿ ಬಸ್‌ ನಿಲ್ದಾಣದತ್ತ ನಿಲ್ಲಲು ಹಿಂಜರಿಯಬಹುದು.
  2. ನಿಲ್ದಾಣದ ಸುತ್ತಮುತ್ತಲ ಪಾದಚಾರಿ ಮಾರ್ಗಗಳ ಸುಧಾರಣೆ ಅಗತ್ಯ.
  3. ಅಂಗನವಾಡಿ ಕೇಂದ್ರಗಳನ್ನು ಪೂರ್ಣ ದಿನದ ಆರೈಕೆ ಕೇಂದ್ರಗಳಾಗಿ ವಿಸ್ತರಿಸುವುದು, ಏಕೆಂದರೆ ಅವುಗಳಲ್ಲಿ ಶೇ.47 ಪ್ರತಿಶತ ಅಂಗನವಾಡಿ ಕೇಂದ್ರಗಳಲ್ಲಿ 10ಕ್ಕೂ ಹೆಚ್ಚು ಕೆಲಸ ಮಾಡುವ ತಾಯಂದೀರನ್ನು ಹೊಂದಿದೆ.
  4. ಕೆಲ ಉದ್ಯಾನವನಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದು ಗಮನಕ್ಕೆ ಬಂದಿದ್ದು, ಮಹಿಳಾ ಸುರಕ್ಷತೆ ದೃಷ್ಟಿಯಿಂದ ಭದ್ರತಾ ಸಿಬ್ಬಂದಿಯ ನಿಯೋಜನೆ ಮತ್ತು ಉದ್ಯಾನವನದ ಒಳಗೆ ಮತ್ತು ಸುತ್ತಮುತ್ತಲಿನ ಬೀದಿಯಲ್ಲಿ ಸಿಸಿಟಿವಿ ಅಳವಡಿಸುವ ಅಗತ್ಯವಿದೆ.
  5. ದಿನವಿಡೀ ಸಾರ್ವಜನಿಕ ಶೌಚಾಲಯಗಳನ್ನು ತೆರೆಯುವುದು ಮತ್ತು ಸ್ಯಾನಿಟರಿ ಪ್ಯಾಡ್‌ಗಳಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು.

ಗೋವಿಂದರಾಜ ನಗರದಲ್ಲಿ ನಡೆಸಿದ ಸುರಕ್ಷತಾ ಸಮೀಕ್ಷೆಯ ಪ್ರಮುಖ ಅಂಶಗಳು

  1. ಬಸ್ ನಿಲ್ದಾಣಗಳಲ್ಲಿನ ಮೂಲಭೂತ ಸೌಕರ್ಯಗಳಾದ ಆಸನ ವ್ಯವಸ್ಥೆ, ಮಾರ್ಗ ನಕ್ಷೆಗಳು, ಮತ್ತು ವಿವರಗಳನ್ನು ನೀಡುವ ಮೂಲಕ ಅವುಗಳನ್ನು ಬಳಸಲು ಸುಲಭವಾಗುತ್ತದೆ. ಅಲ್ಲದೆ, ನಿಲ್ದಾಣದ ಸುತ್ತಮುತ್ತಲ ಪಾದಚಾರಿ ಮಾರ್ಗಗಳ ಸುಧಾರಣೆ ಮುಖ್ಯವಾಗಿದೆ.
  2. ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಗ ಪೈಕಿ ಶೇ.62 ರಷ್ಟು ಆಸನ ವ್ಯವಸ್ಥೆ ಅಗತ್ಯವಿದೆ.
  3. ಉದ್ಯಾನದ ಶೇ.39 ರಷ್ಟು ಜಾಗದಲ್ಲಿ ಮಕ್ಕಳಿಗೆ ಆಟದ ಸಲಕರಣೆಗಳ ಅಳವಡಿಕೆ ಅಗತ್ಯವಿದೆ. ಅದರ ಜೊತೆಗೆ, ಕ್ಷೇತ್ರದಲ್ಲಿ ಸಮೀಕ್ಷೆ ಮಾಡಲಾದ ಎಲ್ಲಾ ಉದ್ಯಾನವನಗಳು ವಾಕಿಂಗ್ ಟ್ರ್ಯಾಕ್‌ಗಳನ್ನು ಹೊಂದಿದ್ದು, ಅವು ಸ್ವಚ್ಛ ಮತ್ತು ಬಳಸಲು ಯೋಗ್ಯವಾದ ಸ್ಥಿತಿಯಲ್ಲಿವೆ.
  4. ಪೊಲೀಸ್ ಠಾಣೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯವಿದ್ದು, ಅವೆಲ್ಲವನ್ನೂ ಸ್ವಚ್ಛ ಸ್ಥಿತಿಯಲ್ಲಿ ನಿರ್ವಹಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಕಾಯುವ ಕೊಠಡಿ ವ್ಯವಸ್ಥೆಯು ಇದೆ.

ವರದಿ ಬಿಡುಗಡೆ ಬಳಿಕ ಮಾತನಾಡಿದ ನಟಿ ಆಶಾಭಟ್‌, ಇಂದು ಮಹಿಳೆ ಸಬಲೀಕರಣಕ್ಕೆ ಆದ್ಯತೆ ಹೆಚ್ಚಾಗಿದ್ದು, ಮಹಿಳಾ ಸುರಕ್ಷತೆಯೂ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಬಿಪ್ಯಾಕ್‌ ಸಮೀಕ್ಷೆ ನಡೆಸಿ, ಮಹಿಳಾ ಸುರಕ್ಷತೆಯ ಕುರಿತು ಸರ್ಕಾರದ ಗಮನ ಸೆಳೆಯುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಡಾ.ಕೆ. ವೈಷ್ಣವಿ ಮಾತನಾಡಿ, ಬಿ.ಪ್ಯಾಕ್‌ ಅವರ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸುವೆ, ಸರ್ಕಾರವನ್ನು ಬೆಂಬಲಿಸುವ ಮತ್ತು ನಮ್ಮ ಕೆಲಸವನ್ನು ಸರಳಗೊಳಿಸುವ ಬಿ.ಪ್ಯಾಕ್‌ ನಂತಹ ಹೆಚ್ಚಿನ ಸಂಸ್ಥೆಗಳು ನಮಗೆ ಅಗತ್ಯವಿದೆ. ಅಂತಹ ಸಂಸ್ಥೆಗಳೊಂದಿಗೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮತ್ತು ಸುರಕ್ಷಿತ ನಗರವನ್ನು ರೂಪಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಸಿಎಸ್ಆರ್ ಮತ್ತು ಇಎಸ್‌ಜಿ ಯ ಮುಖ್ಯಸ್ಥರಾದ ಸುಧಾಕರ್ ಪೈ ಮಾತನಾಡಿ, ಬಿ.ಸೇಫ್‌ ಉಪಕ್ರಮವನ್ನು 2020ರಲ್ಲಿ ಮಹದೇವಪುರ ಮತ್ತು ಮಲ್ಲೇಶ್ವರಂನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಯಿತು, ನಂತರ 2022ರಲ್ಲಿ ಹೆಬ್ಬಾಳ ಮತ್ತು ದಾಸರಹಳ್ಳಿಗೆ ವಿಸ್ತರಿಸಲಾಯಿತು ಇದೀಗ 2024–2025ರಲ್ಲಿ ಗೋವಿಂದರಾಜನಗರ ಮತ್ತು ವಿಜಯನಗರದಲ್ಲಿ ಸಮೀಕ್ಷೆ ನಡೆಸಿದ್ದು, ಇದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಬಿ.ಪ್ಯಾಕ್‌ ಟ್ರಸ್ಟೀ ಹಾಗೂ ಮುಖ್ಯಸ್ಥರಾದ ರೇವತಿ ಅಶೋಕ್ ಮಾತನಾಡಿ, ಬಿ.ಪ್ಯಾಕ್ ನ ಬಿ.ಸೇಫ್ ಕ್ಷೇತ್ರ ಕಾರ್ಯಕ್ರಮವು, ಮಹಿಳೆಯರು ನಗರದಲ್ಲಿ ಎದುರಿಸುತ್ತಿರುವ ಪ್ರಮುಖ ಸುರಕ್ಷತಾ ಸವಾಲುಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸಹಾಯ ಮಾಡುವಂತೆ ಬೆಂಗಳೂರಿನಾದ್ಯಂತ 6 ವಿಧಾನಸಭಾ ಕ್ಷೇತ್ರಗಳಲ್ಲಿ ಸುರಕ್ಷತಾ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಮುಂದಿನ ದಿನಗಳಲ್ಲಿ ಈ ಉಪಕ್ರಮವನ್ನು ನಗರದಾದ್ಯಂತ ವಿಸ್ತರಿಸಿ, ಎಲ್ಲರಿಗೂ ಸುರಕ್ಷಿತ ಸಾರ್ವಜನಿಕ ಸ್ಥಳಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ಸಮೀಕ್ಷೆಯ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ಗೆ ಭೇಟಿ ನೀಡಿ

– ವಿಜಯನಗರದ ಬಿ.ಸೇಫ್ ಕ್ಷೇತ್ರದ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ಸಾರಾಂಶ ಪಡೆಯಿರಿ. – ಗೋವಿಂದರಾಜ ನಗರ ಬಿ.ಸೇಫ್ ಕ್ಷೇತ್ರದ ಸಾರ್ವಜನಿಕ ಸ್ಥಳಗಳ ಸುರಕ್ಷತ ಸಮೀಕ್ಷಾ ಸಾರಾಂಶ ಪಡೆಯಿರಿ. ಬಿ.ಸೇಫ್ ಕ್ಷೇತ್ರದ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ  https://bpac.in/b-safe-constituency/

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Sat, 29 March 25

ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು