ಬಿಬಿಎಂಪಿ ಚುನಾವಣೆಗೆ ಬಿಜೆಪಿಯಿಂದ ಸಿದ್ಧತೆ; ಜನವರಿ 25 ರಿಂದ 3 ದಿನಗಳ ಕಾಲ ಸಿಎಂ ಬಸವರಾಜ ಬೊಮ್ಮಾಯಿ ಸಭೆ
ಇದೇ ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಬೆಂಗಳೂರಿನ ಮೂರು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಉಸ್ತುವಾರಿಗಳು ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ನಿವಾಸದಲ್ಲಿ ಭಾನುವಾರ ಸಭೆ ನಡೆಯಲಿದೆ.
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ (BBMP Election) ಬಿಜೆಪಿ ಸಿದ್ಧತೆ ಮುಂದುವರಿಸಿದ್ದು, ಈ ಕುರಿತು ಇನ್ನಷ್ಟು ಮಾಹಿತಿ ಪಡೆಯುವ ಸಲುವಾಗಿ ಜನವರಿ 25 ರಿಂದ 3 ದಿನಗಳ ಕಾಲ ಅಂದರೆ ಜನವರಿ 25, 26, 27 ರಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸಭೆ ನಡೆಸಲಿದ್ದಾರೆ. ಸಿಎಂ ಜತೆಗಿನ ಈ ಸಭೆಯ ಚರ್ಚೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ರಾಜ್ಯ ಬಿಜೆಪಿ (BJP) ಕಚೇರಿ ಜಗನ್ನಾಥ ಭವನದಲ್ಲಿ ಈ ಸಭೆ ನಡೆಯಲಿದೆ. ಬೆಂಗಳೂರಿನ ಮೂರು ಜಿಲ್ಲೆಗಳ ಪದಾಧಿಕಾರಿಗಳ ಜೊತೆ ಮೂರು ದಿನಗಳ ಕಾಲ ಸಿಎಂ ಸಭೆ ನಡೆಸಲಿದ್ದಾರೆ. ಜನವರಿ 25 ರಂದು ಬೆಂಗಳೂರು ಉತ್ತರ, 26 ರಂದು ಬೆಂಗಳೂರು ಕೇಂದ್ರ ಮತ್ತು 27 ರಂದು ಬೆಂಗಳೂರು ದಕ್ಷಿಣ ಜಿಲ್ಲೆಗಳ ಸಭೆ ನಡೆಯಲಿದೆ.
ಇದೇ ಭಾನುವಾರ ಸಿಎಂ ಜೊತೆ ಬೆಂಗಳೂರಿನ ಮೂರು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಉಸ್ತುವಾರಿಗಳು ಮತ್ತು ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ನಿವಾಸದಲ್ಲಿ ಭಾನುವಾರ ಸಭೆ ನಡೆಯಲಿದೆ.
ವೀಕೆಂಡ್ ಕರ್ಫ್ಯೂನಿಂದ ಸೊಂಕು ನಿಯಂತ್ರಣಕ್ಕೆ ಸಹಾಯ ಆಗಿದೆ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್
ಜನವರಿ ಕೊನೆವಾರ ಅಥವಾ ಫ್ರೆಬ್ರವರಿ ಮೊದಲ ವಾರದಲ್ಲಿ ಕೊರೊನಾ ಪೀಕ್ಗೆ ಹೋಗುತ್ತದೆ ಎಂದು ಹೇಳಲಾಗುತ್ತಿದೆ ಎಂದು ಹೇಳಿದ್ದೇವು. ವೀಕೆಂಡ್ ಕರ್ಫ್ಯೂನಿಂದ ಸೊಂಕು ನಿಯಂತ್ರಣಕ್ಕೆ ಸಹಾಯ ಆಗಿದೆ. ಈಗ ಅದರ ಕಾಲ ಬದಲಾಗಿದೆ. ಈಗ ಇನ್ನೂ 45 ಸಾವಿರದಲ್ಲೇ ಕೇಸ್ ಇದೆ. ಇನ್ನೂ ಪೀಕ್ಗೆ ಹೋಗಿಲ್ಲ. ಐಐಎಸ್ಸಿ ಮಾಡೆಲಿಂಗ್ ಅವರನ್ನು ಕೇಳುತ್ತಾ ಇದ್ದೇವೆ. ವೀಕೆಂಡ್ ಕರ್ಫ್ಯೂನಿಂದ ಕೇಸ್ ಹತೋಟಿಗೆ ಬಂತಾ ಎಂದು ಕೇಳಿದ್ದೇವೆ. ಐಐಎಸ್ಸಿ ಅವರು ಕೂಡ ಅಧ್ಯಯನ ಮಾಡಿದ್ದಾರೆ. ನಾಳೆ ಸಿಎಂ ಸಭೆಯಲ್ಲಿ ಈ ವರದಿ ಕೂಡ ಚರ್ಚೆ ಮಾಡುತ್ತೇವೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದ್ದಾರೆ.
ಕೊರೊನಾ ಪ್ರಕರಣ ಏರಿಕೆ ಬಗ್ಗೆ ಸಿಎಂ ಬೊಮ್ಮಾಯಿಗೆ ಮಾಹಿತಿ ನೀಡಲಾಗಿದೆ. ನಾಳಿನ ಸಭೆಯಲ್ಲಿ ಸಿಎಂ ಬೊಮ್ಮಾಯಿಗೆ ಮಾಹಿತಿ ನೀಡುತ್ತೇವೆ. ರಾಜ್ಯದಲ್ಲಿ ಈಗ ಹೆಚ್ಚು ಕೊವಿಡ್ ಪಾಸಿಟಿವ್ ಪ್ರಕರಣ ಬರುತ್ತಿವೆ. ರೋಗ ಲಕ್ಷಣಗಳು ಇಲ್ಲದಿದ್ದರೂ ಕೇಸ್ ಹೆಚ್ಚು ಬರುತ್ತಿವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಇದನ್ನೂ ಓದಿ: ಕುಶಾಲನಗರ ಖಾಸಗಿ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ದೃಢ; ಒಮಿಕ್ರಾನ್ ಆತಂಕ ಹಿನ್ನೆಲೆ ಭಾನುವಾರ ಸಿಎಂ ಸಭೆ
Published On - 3:39 pm, Thu, 20 January 22