ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್​​ಗೆ ರೆಡ್ ಸಿಗ್ನಲ್: ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟ ಬಿಎಂಆರ್ಸಿಎಲ್

ಕಳೆದ ವರ್ಷವಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ,3ನೇ ಹಂತದ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ಮಾಡಿದ್ರು.ಆ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು.ಆದರೆ ಕೇಂದ್ರ ಸರ್ಕಾರ ಎಂಡ್ ಟು ಎಂಡ್ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣಕ್ಕೆ ಅನುಮತಿ ನೀಡದ ಹಿನ್ನೆಲೆ ಇದೀಗ ಬಿಎಂಆರ್ಸಿಎಲ್ ಕರೆದಿದ್ದ ತನ್ನ ಎಲ್ಲಾ ಸಿವಿಲ್ ಟೆಂಡರ್ ಗಳನ್ನು ರದ್ದುಗೊಳಿಸಿದೆ.

ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್​​ಗೆ ರೆಡ್ ಸಿಗ್ನಲ್: ಯೋಜನೆಯನ್ನು ಶಾಶ್ವತವಾಗಿ ಕೈಬಿಟ್ಟ ಬಿಎಂಆರ್ಸಿಎಲ್
Bmrcl
Edited By:

Updated on: Oct 26, 2026 | 10:33 PM

ಬೆಂಗಳೂರು, (ಅಕ್ಟೋಬರ್ 26): ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32ಕಿ.ಮೀ ಹಾಗೂ ಕಡಬಗೆರೆ-ಹೊಸಹಳ್ಳಿವರೆಗೆ 12 8. ಒಟ್ಟು 44.65 ಕಿಮೀ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರ ರೆಡ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆ ಬಿಎಂಆರ್ಸಿಎಲ್, ಇದಕ್ಕೆ ಸಂಬಂಧಿಸಿದಂತೆ ಮೂರು ಸಿವಿಲ್ ಟೆಂಡರ್ ಗಳನ್ನು ಕ್ಯಾನ್ಸಲ್ ಮಾಡಿದೆ. ಆದ್ರೆ, ಡಬಲ್ ಡೆಕ್ಕರ್ ಬದಲಿಗೆ ಆರೆಂಜ್ ಲೈನ್ ಮೆಟ್ರೋ ಮಾರ್ಗದಲ್ಲಿ 4 ಫ್ಲೈ ಓವರ್ 1 ಟನಲ್ ಮಾಡಲು ಮುಂದಾಗಿದೆ.

ಸಾರಕ್ಕಿ ಸಿಗ್ನಲ್ ಬಳಿ 1.36 ಕಿ.ಮೀ. ಉದ್ದದ ಒಂದು ಫ್ಲೈ ಓವರ್, ಕಾಮಾಕ್ಯ, ಇಟ್ಟಮಡು ಮತ್ತು ಹೊಸಕೆರೆಹಳ್ಳಿ ಜಂಕ್ಷನ್‌ ಗಳನ್ನು ಸಂಪರ್ಕಿಸುವಂತೆ, 1.56 ಕಿ.ಮೀ. ಉದ್ದದ ಮತ್ತೊಂದು ಫ್ಲೈ ಓವರ್, ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿ ಸುಮಾರು 600 ಮೀಟರ್ ಉದ್ದದ ಮಿನಿ ಫ್ಲೈ ಓವರ್ ಹಾಗೂ ಕಡಬಗೆರೆಯಿಂದ ಹೇರೋಹಳ್ಳಿವರೆಗೆ 4 ಕಿ.ಮೀ. ಉದ್ದದ ಫ್ಲೈ ಓವರ್, ಇದರ ಜೊತೆಗೆ ಗೊರಗುಂಟೆಪಾಳ್ಯದಲ್ಲಿ ಸುಮಾರು 2 ಕಿ.ಮೀ. ಉದ್ದದ ಟನಲ್ ರೋಡ್ ಮಾಡಲಿದೆ.

ಇದನ್ನೂ ಓದಿ; ಬೆಂಗಳೂರು ಮೆಟ್ರೋ ಪಿಂಕ್ ಲೈನ್ ವೆಚ್ಚ ದುಪ್ಪಟ್ಟು! ₹8,730 ಕೋಟಿಯಿಂದ ₹17,346 ಕೋಟಿಗೆ ಏರಿಕೆ, ಅಂಡರ್ ಗ್ರೌಂಡ್ ಮಾರ್ಗವೇ ದುಬಾರಿ

ಇನ್ನೂ ಈಗಾಗಲೇ ಐಎಸ್ಎಸ್‌ಸಿ ನಡೆಸಿರುವ ಅಧ್ಯಯನವೂ ಮೆಟ್ರೋ ಮಾರ್ಗದ ಜೊತೆಯಲ್ಲೇ ಫೈ ಓವರ್ ನಿರ್ಮಿಸುವುದರಿಂದ ಜನರು ಖಾಸಗಿ ವಾಹನಗಳನ್ನೇ ಬಳಸಲು ಮುಂದಾಗುತ್ತಾರೆ. ಇದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತದೆ, ವಾಯುಮಾಲಿನ್ಯ ಮತ್ತು ಕಾರ್ಬನ್ ಹೊರಸೂಸುವಿಕೆ ಹೆಚ್ಚಾಗಲಿದೆ ಎಂದು ಎಚ್ಚರಿಸಿತ್ತು. ಡಬಲ್ ಡೆಕ್ಕರ್ ಗೆ ತಗಲುವ 9700 ಕೋಟಿ ರೂಪಾಯಿ ವೆಚ್ಚವನ್ನು ರಾಜ್ಯ ಸರ್ಕಾರವು ಭರಿಸುವುದಾಗಿಯೂ ಹೇಳಿದೆ. ಆದರೆ, ಈವರೆಗೆ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಡಬಲ್ ಡೆಕ್ಟರ್‌ಗೆ ಅನುಮೋದನೆ ದೊರೆತಿಲ್ಲ.

ಕೇಂದ್ರ ಸರ್ಕಾರ ಡಬಲ್ ಡೆಕ್ಕರ್ ನಿಂದ ವಾಹನ ದಟ್ಟಣೆ ಹೆಚ್ಚಾಗಲಿದೆ ಇದರಿಂದ ಮೆಟ್ರೋದಲ್ಲಿ ಸಂಚಾರ ಮಾಡುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಲಿದೆ ಎನ್ನುತ್ತಿರುವ ಕೇಂದ್ರ ಸರ್ಕಾರ. ಆದರೆ ರಾಜ್ಯ ಸರ್ಕಾರ ಮಾತ್ರ ಡಬಲ್ ಫ್ಲೈ ಓವರ್ ನಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿಮೆ ಆಗಲಿದೆ ಎಂದು ಮತ್ತೊಮ್ಮೆ ವರದಿ ಸಲ್ಲಿಸಿತ್ತು.

ಒಟ್ನಲ್ಲಿ ರಾಜ್ಯ ಸರ್ಕಾರ ಟ್ರಾಫಿಕ್ ಕಡಿಮೆ ಆಗಲಿ ಎಂದು ಡಬಲ್ ಡೆಕ್ಕರ್ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರ ಸಂಪೂರ್ಣ ಮಾರ್ಗದ ಡಬಲ್ ಡೆಕ್ಕರ್ ಗೆ ಅನುಮತಿ ನೀಡ್ತಿಲ್ಲ. ಇದರಿಂದ ಬಿಎಂಆರ್ಸಿಎಲ್ ಎಲ್ಲಾ ಸಿವಿಲ್ ಟೆಂಡರ್ ಗಳನ್ನು ಕ್ಯಾನ್ಸಲ್ ಮಾಡಿದ್ದು, ಇದೀಗ ಮಿನಿ ಫ್ಲೈ ಓವರ್, ಟನಲ್ ರೋಡ್ ಮಾಡಲು ಮುಂದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us