AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯೆಲ್ಲೋ ಲೈನ್ ಮೆಟ್ರೋ ಓಪನ್ ಬೆನ್ನಲ್ಲೇ ಬಿಎಂಆರ್​​​ಸಿಎಲ್​​ ಅಧಿಕಾರಿಗಳ ಎಡವಟ್ಟು: ಜನರು, ರೋಗಿಗಳ ಪರದಾಟ

ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಬರುವ ರೋಗಿಗಳು ಸೇರಿದಂತೆ ಜನಸಾಮಾನ್ಯರು ರಸ್ತೆ ದಾಟಲು ಹೆಣಗಾಡುವಂತಾಗಿದೆ. ಹಳದಿ ಮಾರ್ಗ ಮೆಟ್ರೋ ನಿರ್ಮಾಣದಿಂದಾಗಿ ಬಿಎಂಆರ್ಸಿಎಲ್ ಅಧಿಕಾರಿಗಳು ಹಲವು ರಸ್ತೆಗಳನ್ನು ಬಂದ್​ ಮಾಡಿದ್ದಾರೆ ಎನ್ನಲಾಗುತ್ತಿದೆ. ಪರಿಣಾಮ ಬ್ಯಾರಿಕೇಡ್‌ ಹಾರಿ ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

ಯೆಲ್ಲೋ ಲೈನ್ ಮೆಟ್ರೋ ಓಪನ್ ಬೆನ್ನಲ್ಲೇ ಬಿಎಂಆರ್​​​ಸಿಎಲ್​​ ಅಧಿಕಾರಿಗಳ ಎಡವಟ್ಟು: ಜನರು, ರೋಗಿಗಳ ಪರದಾಟ
ಬ್ಯಾರಿಕೇಡ್ ದಾಟುತ್ತಿರುವ ಜನರು
Kiran Surya
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 21, 2025 | 8:53 AM

Share

ಬೆಂಗಳೂರು, ಆಗಸ್ಟ್​ 21: ನಮ್ಮ ಮೆಟ್ರೋ (namma metro) ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯಡವಟ್ಟಿನಿಂದಾಗಿ ಪ್ರತಿದಿನ ಆಸ್ಪತ್ರೆಗೆ ಬರುವ ಸಾವಿರಾರು ರೋಗಿಗಳು ಮತ್ತು ಜನರು ಪ್ರಾಣ ಕೈಯಲ್ಲಿ ಹಿಡಿದು ರಸ್ತೆ ಕ್ರಾಸ್ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ರಸ್ತೆ ಬಂದ್ (Road close)​​​ ಮಾಡಿದ ಹಿನ್ನಲೆ ಆಸ್ಪತ್ರೆಗೆ ಬರುವ ರೋಗಿಗಳು ಬ್ಯಾರಿಕೇಡ್ ಜಂಪ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಆರ್.ವಿ ರೋಡ್ ಟು ಬೊಮ್ಮಸಂದ್ರ ಮಾರ್ಗಕ್ಕೆ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಹಳದಿ ಮಾರ್ಗದಲ್ಲಿ ರಾಗಿಗುಡ್ಡ- ಸಿಲ್ಕ್ ಬೋರ್ಡ್ ವರೆಗೆ ಡಬಲ್ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆ ಕೆಳಭಾಗದಲ್ಲಿ ಆ ಭಾಗದಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ರಸ್ತೆ ಕ್ರಾಸ್ ಮಾಡಲು ಇದ್ದ ಸಾಕಷ್ಟು ಜಾಗಗಳನ್ನು ಬಿಎಂಆರ್​ಸಿಎಲ್​ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ ಬಂದ್​ ಮಾಡಿದ್ದಾರೆ.

ಇದನ್ನೂ ಓದಿ: ಜೆಪಿ ನಗರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ರ್ಯಾಂಪ್​ಗೆ ವಿರೋಧ! ಕಾರಣ ಇಲ್ಲಿದೆ

ಇತ್ತ ಜಯದೇವ ಹೃದ್ರೋಗ ಆಸ್ಪತ್ರೆ ಬಳಿ ರಸ್ತೆ ಕ್ರಾಸ್ ಮಾಡಲು ಈ ಹಿಂದೆ ಜಾಗ ನೀಡಲಾಗಿತ್ತು. ನಮ್ಮ ಮೆಟ್ರೋ ಅಧಿಕಾರಿಗಳು ಇದೀಗ ಆ ಜಾಗದಲ್ಲಿ ಬ್ಯಾರಿಕೇಡ್ ಹಾಕಿ, ರಸ್ತೆ ಬಂದ್​ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಬ್ಯಾರಿಕೇಡ್ ಜಂಪ್ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್​ವರೆಗೆ ಜನರು ರಸ್ತೆ ಕ್ರಾಸ್ ಮಾಡಲು ಇದ್ದ ಎಲ್ಲಾ ಮಾರ್ಗವನ್ನು ಅಧಿಕಾರಿಗಳು ಬಂದ್​ ಮಾಡಿದ್ದಾರೆ. ಇದರಿಂದ ರಸ್ತೆ ಕ್ರಾಸ್ ಮಾಡಲು ವ್ಯವಸ್ಥೆ ಇಲ್ಲದೆ ಆ ಭಾಗದ ಜನರು ಕಂಗಾಲಾಗಿದ್ದಾರೆ‌.

ಯೆಲ್ಲೋ ಲೈನ್ ಮೆಟ್ರೋ ಮಾರ್ಗ ಓಪನ್ ಆಗುತ್ತಿದ್ದಂತೆ ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೋಸ್ ಮಾಡಿದ್ದಾರಂತೆ. ಬಸ್ ಹತ್ತಲು, ರಸ್ತೆ ಕ್ರಾಸ್ ಮಾಡಲು ಅವಕಾಶ ನೀಡದೆ ರಸ್ತೆ ಬಂದ್​ ಮಾಡಲಾಗಿದೆ. ಬ್ಯಾರಿಕೇಡ್ ಹಾಕಿರುವುದರಿಂದ ಕಿಮೀ ಗಟ್ಟಲೇ ಸುತ್ತಿಕೊಂಡು ರಾಗಿಗುಡ್ಡ ಹೋಗಿ ರೋಗಿಗಳು ಮತ್ತು ಜನರು ಬಸ್ ಹತ್ತುತ್ತಿದ್ದಾರೆ.

ಆಸ್ಪತ್ರೆ ಎದುರಿಗೆ ಬಿಎಂಟಿಸಿ ಬಸ್ ನಿಲ್ದಾಣವಿದೆ. ಈ ನಿಲ್ದಾಣಕ್ಕೆ ರಾಗಿಗುಡ್ಡ, ಬನಶಂಕರಿ, ಕೆಂಗೇರಿ, ಜಯನಗರ, ಕೆ.ಆರ್ ಮಾರ್ಕೆಟ್, ಮೆಜಸ್ಟಿಕ್ ಭಾಗಕ್ಕೆ ಹೋಗುವವರಿಗೆ ಬಸ್ ಬರುತ್ತದೆ. ಆದರೆ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯನ್ನು ಮೆಟ್ರೋ ಆಗುತ್ತಿದ್ದಂತೆ ಅಧಿಕಾರಿಗಳು ಬಂದ್​ ಮಾಡಿದ್ದಾರೆ. ಪ್ರತಿದಿನ ಜಯದೇವ ಆಸ್ಪತ್ರೆಗೆ ಸಾವಿರಾರು ರೋಗಿಗಳು ಮತ್ತು ಅವರ ಸಂಬಂಧಿಕರು ಬರುತ್ತಾರೆ, ಆದರೆ ರೋಡ್ ಕ್ರಾಸ್ ಮಾಡಲು ವ್ಯವಸ್ಥೆ ಇಲ್ಲದಂತೆ ಆಗಿದೆ. ಇದರಿಂದ ಮೂರು ಅಡಿಯಿರುವ ದೊಡ್ಡದಾದ ಬ್ಯಾರಿಕೇಡ್ ಜಂಪ್ ಮಾಡಿಕೊಂಡು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾರೆ.

ಬಿಎಲ್ ಯಶ್ವಂತ್ ಚೌವ್ಹಾಣ್ ಹೇಳಿದ್ದಿಷ್ಟು 

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್​ಸಿಎಲ್​ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶ್ವಂತ್ ಚೌವ್ಹಾಣ್, ಎಲ್ಲೆಲ್ಲಿ ಜನರು ಓಡಾಡಲು ಅವಕಾಶ ನೀಡಬೇಕೆಂದು ಟ್ರಾಫಿಕ್ ಪೋಲಿಸರು ಸೂಚನೆ ನೀಡಿದರೋ ಅಲ್ಲಿ ನಾವು ರಸ್ತೆ ಬಂದ್​ ಮಾಡಿಲ್ಲ. ಎಲ್ಲಿ ಬಂದ್​ ಮಾಡಲು ಹೇಳಿದ್ದಾರೋ ಅಲ್ಲಿ ರಸ್ತೆ ಬಂದ್​ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೊಸೂರು ರಸ್ತೆ ಟ್ರಾಫಿಕ್​ಗೆ ಬಿಗ್ ರಿಲೀಫ್ ನೀಡಿದ ಮೆಟ್ರೋ ಯೆಲ್ಲೋ ಲೈನ್!

ಒಟ್ಟನಲ್ಲಿ ಪ್ರತಿದಿನ ಜಯದೇವ ಆಸ್ಪತ್ರೆಗೆ ಸಾವಿರಾರು ಜನರು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಇದ್ದ ರಸ್ತೆಯನ್ನೂ ಬಂದ್​ ಮಾಡಿದ್ದು ಮಾತ್ರ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:50 am, Thu, 21 August 25