ಮೊದಲ ಭೇಟಿಯಲ್ಲಿ ವರಿಷ್ಠರಿಗೆ ಧನ್ಯವಾದ ಹೇಳಿ ವಾಪಸ್ ಬಂದಿದ್ದ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai), ಎರಡನೇ ಭೇಟಿಯಲ್ಲಿ ಸಂಪುಟ ಫೈನಲ್ ಮಾಡಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಭಾನುವಾರದಿಂದ ಮೂರು ದಿನಗಳ ಮ್ಯಾರಥಾನ್ ಮೀಟಿಂಗ್ ಬಳಿಕ ಸಿಎಂ ಬೆಂಗಳೂರಿಗೆ ವಾಪಸ್ ಆಗ್ತಿದ್ದಾರೆ. ಕಳೆದ ಮೂರು ದಿನಾನೂ ಬಿಡುವಿಲ್ಲದಂತೆ ಹೈಕಮಾಂಡ್ ನಾಯಕರ ಜೊತೆ ಸಿಎಂ ಸರಣಿ ಮೀಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಸಂಪುಟ ಸರ್ಕಸ್ನ ಕೊನೇ ದಿನವಾದ ನಿನ್ನೆಯೂ ಹಲವು ನಾಯಕರೊಂದಿಗೆ ಮೀಟಿಂಗ್ ನಡೆಸಿ ನೂತನ ಸಂಪುಟ(Karnataka Cabinet) ಲಿಸ್ಟ್ಗೆ ಅಂತಿಮ ಮುದ್ರೆ ಹಾಕಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಬೊಮ್ಮಾಯಿ 3 ದಿನ ಕ್ಯಾಬಿನೆಟ್ ಕದನ ಮೊನ್ನೆ ಭಾನುವಾರದಂದೇ ಕ್ಯಾಬಿನೆಟ್ ರಚನೆಗೆ ಬೇಕಾದ ಎಲ್ಲಾ ಫೈಲ್ಗಳನ್ನು ಹಿಡ್ಕೊಂಡು ದೆಹಲಿಗೆ ತೆರಳಿದ್ದ ಸಿಎಂ ಮೂರು ದಿನಗಳ ಪ್ರಯತ್ನದ ಬಳಿಕ ಸಕ್ಸಸ್ ಆಗಿದ್ದಾರೆ. ನೂರೆಂಟು ಲೆಕ್ಕಾಚಾರ. ಕ್ಯಾಬಿನೆಟ್ನಲ್ಲಿ ಯಾರಿಗೆ ಸ್ಥಾನ ಕೊಡಬೇಕು, ಯಾರಿಗೆ ಬಿಡಬೇಕು ಅನ್ನೋ ಗುಣಗಾಕಾರ ಭಾಗಾಕಾರ. ವರಿಷ್ಠರ ಭೇಟಿ.. ಸಂಪುಟಕ್ಕೆ ಸೇರೋ ಆಕಾಂಕ್ಷಿಗಳ ಲಾಬಿ. ಅಜ್ಞಾತ ಸ್ಥಳದಲ್ಲೇ ಕೂತು ಕ್ಯಾಬಿನೆಟ್ ಕದನ ವಿರಾಮಕ್ಕೆ ಪರಿಹಾರ ಕಂಡುಕೊಂಡ್ರು. ಸಂಪುಟ ವಿಸ್ತರಣೆಗೆ ಸಿಎಂ ಹೆಣೆದಿರೋ ಮೂರು ಸೂತ್ರಗಳ ಬಗ್ಗೆ ಹೈಕಮಾಂಡ್ ನಾಯಕರೆದುರು ಬಿಡಿ ಬಿಡಿಯಾಗಿ ವಿವರಿಸಿದ ಬಳಿಕ ಕ್ಯಾಬಿನೆಟ್‌ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಕ್ಯಾಬಿನೆಟ್ ಲಿಸ್ಟ್ ಫೈನಲ್ಗೆ ಸಿಎಂ ಕೊನೇ ಕ್ಷಣದ ಕಸರತ್ತು ಇನ್ನು ಕ್ಯಾಬಿನೆಟ್ ಲಿಸ್ಟ್ ಫೈನಲ್ ಮಾಡೋಕೆ ಸಿಎಂ ಕೊನೇ ಕ್ಷಣದ ಕಸರತ್ತಿನಲ್ಲಿ ಬ್ಯುಸಿಯಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೊತೆ ಸಿಎಂ ಅಂತಿಮ ಸುತ್ತಿನ ಮಾತುಕತೆ ನಡೆಸಿದ್ರು. ಸಂಸತ್ ಭವನದಲ್ಲಿ ಜೆ.ಪಿ.ನಡ್ಡಾ ಭೇಟಿಯಾಗಿದ್ದ ಸಿಎಂ, ಸಚಿವರ ಪಟ್ಟಿಗೆ ಅಂತಿಮ ಮುದ್ರೆ ಪಡೆದ್ರು. ಈ ವೇಳೆ ಸುಮಾರು 30 ನಿಮಿಷಗಳ ಕಾಲ ಜೆ.ಪಿ.ನಡ್ಡಾ ಜೊತೆ ಸಿಎಂ ಚರ್ಚೆ ಮಾಡಿದ್ರು. ‘ಇದದ ಬಳಿಕ ನೂತನ ಸಚಿವರ ಪಟ್ಟಿ ಹಿಡ್ಕೊಂಡೇ ಗೃಹ ಸಚಿವ ಅಮಿತ್ ಶಾರನ್ನು ಸಿಎಂ ಬೊಮ್ಮಾಯಿ ಭೇಟಿಯಾಗಿ ಚರ್ಚೆ ನಡೆಸಿ, ನೂತನ ಸಂಪುಟಕ್ಕೆ ಒಪ್ಪಿಗೆ ಪಡೆದ್ರು.
ಸಂಪುಟ ಸೇರಲಿರುವ ಶಾಸಕರಿಗೆ ಸಿಎಂ ಬೊಮ್ಮಾಯಿ ಕರೆ ಯಾರಿಗೆ ಮಂತ್ರಿಗಿರಿ ಸಿಗುತ್ತೆ…? ಯಾರಿಗೆ ಸಚಿವರಾಗೋ ಭಾಗ್ಯ ಒಲಿದು ಬರುತ್ತೆ ಅಂತಾ ಕೊನೇ ಕ್ಷಣದ ಲೆಕ್ಕಾಚಾರದ ನಡುವೆ ಸಂಪುಟ ಸೇರಲಿರುವ ಕೆಲ ಶಾಸಕರಿಗೆ ಸಿಎಂ ಬೊಮ್ಮಾಯಿ ಕರೆ ಮಾಡಿದ್ದಾರೆನ್ನಲಾಗಿದೆ. ಶಾಸಕರಾದ ಮುರುಗೇಶ್ ನಿರಾಣಿ, ಕೆ.ಎಸ್. ಈಶ್ವರಪ್ಪ, ಬಿ.ಸಿ. ಪಾಟೀಲ್ಗೆ ಸಿಎಂ ಬೊಮ್ಮಾಯಿ ಅಧಿಕೃತವಾಗಿದೆ ಕರೆ ಮಾಡಿದ್ದಾರೆ ಅಂತಾ ಶಾಸಕರು ಬಹಿರಂಗಪಡಿಸಿದ್ದಾರೆ. ಸಿಎಂ ಕರೆ ಬಂದಿರೋ ಬಗ್ಗೆ ಬಿ.ಸಿ. ಪಾಟೀಲ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಶಾಸಕ ಮುರುಗೇಶ್ ನಿರಾಣಿ ಹಾಗೂ ಈಶ್ವರಪ್ಪ ಟಿವಿ9ಗೆ ನೇರವಾಗಿ ಸ್ಪಷ್ಟಪಡಿಸಿದ್ದಾರೆ.
ಇನ್ನು ಶಾಸಕರಾದ ಆರ್ ಅಶೋಕ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಡಾ.ಕೆ. ಸುಧಾಕರ್, ಪೂರ್ಣಿಮಾ ಶ್ರೀನಿವಾಸ್, ಅಶ್ವತ್ಥ್ ನಾರಾಯಣ, ಬಿ.ಶ್ರೀರಾಮುಲು ಸೇರಿದಂತೆ ಹಲವರು ಸಿಎಂ ಕರೆಗಾಗಿ ಇನ್ನೂ ಕಾಯುತ್ತಾ ಕೂತಿದ್ದಾರೆ.
ನೂತನ ಸಚಿವರ ಪ್ರಮಾಣಕ್ಕೆ ಮಧ್ಯಾಹ್ನ 2.15ರ ಮುಹೂರ್ತ ನೂತನ ಸಚಿವ ಸಂಪುಟ ರಚನೆ ಕಂಪ್ಲೀಟ್ ಆಗಿ ಫೈನಲ್ ಆಗಿದ್ದು, ಇನ್ನೇನು ಸಚಿವರು ಪ್ರಮಾಣವಚನ ಸ್ವೀಕರಿಸೋದಷ್ಟೇ ಬಾಕಿ ಇದೆ. ಈಗಾಗಲೇ ಕೆಲ ಶಾಸಕರಿಗೆ ಪ್ರಮಾಣವಚನ ಸ್ವೀಕಾರಕ್ಕೆ ರೆಡಿಯಾಗುವಂತೆ ಸಿಎಂ ಸಂದೇಶ ರವಾನಿಸಿದ್ದಾರೆನ್ನಲಾಗಿದೆ. ನೂತನ ಸಚಿವ ಪ್ರಮಾಣವಚನಕ್ಕೆ ಮಧ್ಯಾಹ್ನ 2.15ರ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಇವತ್ತು ಮಧ್ಯಾಹ್ನ ಆಗುವಷ್ಟರಲ್ಲಿ ಬೊಮ್ಮಾಯಿ ಸಂಪುಟ ರೆಡಿಯಾಗಿರಲಿದೆ.
ಬಿಎಸ್ವೈ ಪುತ್ರ ವಿಜಯೇಂದ್ರ ಹೊಸ ರಾಜಕೀಯ ಇನ್ನಿಂಗ್ಸ್? ಇತ್ತ ಮಾಜಿ ಸಿಎಂ ಬಿಎಸ್ವೈ ಪುತ್ರ ಬಿ ವೈ ವಿಜಯೇಂದ್ರ ಬಗ್ಗೆ ಹೈಕಮಾಂಡ್ ಜೊತೆಗಿನ ಮೀಟಿಂಗ್ ವೇಳೆ ಪ್ರಸ್ತಾಪವಾಗಿದ್ಯಂತೆ. ವಿಜಯೇಂದ್ರರನ್ನು ಸಂಪುಟಕ್ಕೆ ಸೇರಿಸೋ ಬಗ್ಗೆ ಅಥವಾ ಡಿಸಿಎಂ ಹುದ್ದೆ ಬಗ್ಗೆ ವರಿಷ್ಠರ ಜೊತೆ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ವಿಜಯೇಂದ್ರ ಬಗ್ಗೆ ಹೈಕಮಾಂಡ್ ನಾಯಕರೇ ನಿರ್ಧಾರ ಕೈಗೊಳ್ತಾರೆ ಅಂತಾ ಸಿಎಂ ಬೊಮ್ಮಾಯಿ ಬಾಯಿಬಿಟ್ಟು ಹೇಳಿದ್ದಾರೆ.
ನೂತನ ಸಂಪುಟದಲ್ಲಿ 12 ಜನ ‘ಬಾಂಬೆ ಫ್ರೆಂಡ್ಸ್’ ಪಟ್ಟಕ್ಕಿಲ್ವಾ ಪೆಟ್ಟು? ಮತ್ತೊಂದೆಡೆ ಬಾಂಬೆ ಫ್ರೆಂಡ್ಸ್ ಪೈಕಿ ಹಲವರಿಗೆ ಸಚಿವ ಸ್ಥಾನ ಕೈ ತಪ್ಪುತ್ತೆ ಅಂತಾ ನಿನ್ನೆ-ಮೊನ್ನೆವರೆಗೂ ಚರ್ಚೆ ನಡೀತಿತ್ತು. ಆದ್ರೆ ನಿನ್ನೆ ರಾತ್ರಿ ವೇಳೆಗೆ ಬಂದಿರೋ ಮಾಹಿತಿ ಪ್ರಕಾರ ಮಿತ್ರಮಂಡಳಿ ಪೈಕಿ ಹಿಂದೆ ಸಚಿವರಾಗಿದ್ದ 12 ಜನರ ಸಚಿವ ಸ್ಥಾನಕ್ಕೆ ಯಾವುದೇ ಆತಂಕವಿಲ್ಲ ಎನ್ನಲಾಗಿದೆ.
ಸಚಿವ ಸ್ಥಾನ ಸಿಗದಿದ್ರೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಇನ್ನು ಸಚಿವ ಸ್ಥಾನ ಸಿಗದಿದ್ರೆ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾಳೆ ಸಚಿವರ ಪ್ರಮಾಣವಚನಕ್ಕೂ ಮುನ್ನ ರಾಜೀನಾಮೆ ಸಲ್ಲಿಕೆ ಮಾಡುತ್ತೇನೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ ಆಕ್ರೋಶ ಹೊರ ಹಾಕಿದ್ದಾರೆ. ರಾಜೀನಾಮೆ ಸಲ್ಲಿಕೆ ಬಗ್ಗೆ ಟಿವಿ9ಗೆ ಆನಂದ್ ಮಾಮನಿ ಮಾಹಿತಿ ನೀಡಿದ್ದಾರೆ. ಆನಂದ್ ಮಾಮನಿ 12 ದಿನದಿಂದ ಸರ್ಕಾರಿ ಕಾರು ಬಳಸಿಲ್ಲ.
ಒಟ್ನಲ್ಲಿ ಅಳೆದು ತೂಗಿ ನೂತನ ಕ್ಯಾಬಿನೆಟ್ಗೆ ಹೈಕಮಾಂಡ್ ಅಸ್ತು ಎಂದಿದೆ. ಈಗಾಗಲೇ ಲಿಸ್ಟ್ ಫೈನಲ್ ಆಗಿದ್ದು, ಇನ್ನು ಕೆಲವೇ ಹೊತ್ತಲ್ಲಿ ಯಾಱರಿಗೆ ಸಚಿವ ಸ್ಥಾನ ಸಿಗುತ್ತೆ ಅನ್ನೋದು ಕ್ಲಿಯರ್ ಆಗಲಿದೆ. ಈ ನಡುವೆ ಕೆಲವ್ರಿಗೆ ಸಿಎಂ ಖುದ್ದು ಕರೆ ಮಾಡಿದ್ದಾರೆ. ಆದ್ರೆ ಇನ್ನು ಕೆಲ ಶಾಸಕರು ಪರೀಕ್ಷೆ ಬರೆದಿರೋ ಮಕ್ಕಳಂತೆ ರಿಸಲ್ಟ್ಗಾಗಿ ಉಗುರು ಕಚ್ಚುತ್ತಾ ಕಾಯುತ್ತಿದ್ದಾರೆ.
ಇದನ್ನೂ ಓದಿ: Tokyo Olympic: ಜಾವೆಲಿನ್ ಥ್ರೋನಲ್ಲಿ ಫೈನಲ್ಗೆ ಲಗ್ಗೆಯಿಟ್ಟ ಭಾರತದ ನೀರಜ್ ಚೋಪ್ರಾ