AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಾದ್ಯಂತ ಅಕ್ರಮ ಫ್ಲೆಕ್ಸ್ , ಬ್ಯಾನರ್ ಸಂಪೂರ್ಣ ಬ್ಯಾನ್; ಪೊಲೀಸ್ ಆಯುಕ್ತ ಬಿ ದಯಾನಂದ್

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅನಧಿಕೃತ​ ಫ್ಲೆಕ್ಸ್​, ಹೋರ್ಡಿಂಗ್ಸ್ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಕ್ರಮಕೈಗೊಳ್ಳದ ಬಿಬಿಎಂಪಿ, ಪೊಲೀಸ್​ ಇಲಾಖೆಯನ್ನು ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತ್ತು. ಅದರಂತೆ ಇಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್(B Dayananda) ನೇತೃತ್ವದಲ್ಲಿ ಸಭೆ ನಡೆಸಿದರು.

ಬೆಂಗಳೂರಿನಾದ್ಯಂತ ಅಕ್ರಮ ಫ್ಲೆಕ್ಸ್ , ಬ್ಯಾನರ್ ಸಂಪೂರ್ಣ ಬ್ಯಾನ್; ಪೊಲೀಸ್ ಆಯುಕ್ತ ಬಿ ದಯಾನಂದ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್
Jagadisha B
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 30, 2024 | 5:07 PM

Share

ಬೆಂಗಳೂರು, ಜು.30: ರಾಜ್ಯ ರಾಜಧಾನಿ ಬೆಂಗಳೂರಿನಾದ್ಯಂತ ಫ್ಲೆಕ್ಸ್ ಮತ್ತು ಬ್ಯಾನರ್ ಬ್ಯಾನ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್(B Dayananda) ಹೇಳಿದರು. ಇಂದು(ಮಂಗಳವಾರ) ಫ್ಲೆಕ್ಸ್​ಗಳನ್ನು ಹಾಕದಂತೆ ಹಾಗೂ ತೆರವಿನ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಜೊತೆ ಪೊಲೀಸ್ ಕಮಿಷನರ್ ಸಭೆ ನಡೆಸಲಾಗಿದ್ದು, ಸಭೆ ಬಳಿಕ ಮಾತನಾಡಿದ ಕಮಿಷನರ್, ‘ಫ್ಲೆಕ್ಸ್, ಬ್ಯಾನರ್​ಗಳ ಅಳವಡಿಕೆ ವಿರುದ್ಧ ಯಾವ ರೀತಿ ಕಾರ್ಯಾಚರಣೆ ಮಾಡಬೇಕೆಂಬ ನಿರ್ಧಾರ ಮಾಡಲಾಗಿದೆ. ಅಕ್ರಮ ಚಟುವಟಿಕೆಗಳ ಮಟ್ಟಹಾಕಲು ಚರ್ಚೆ ಮಾಡಲಾಗಿದೆ ಎಂದರು.

ಜಂಟಿ ಕಾರ್ಯಚರಣೆ ನಡೆಸಲಿರುವ ಬಿಬಿಎಂಪಿ, ಪೊಲೀಸ್​ ಅಧಿಕಾರಿಗಳು

ಇನ್ನು ಅನಧೀಕೃತ ಬ್ಯಾನರ್​ಗಳ ತೆರವಿಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಯಿಂದ ಜಂಟಿ ಕಾರ್ಯಚರಣೆ ನಡೆಸಲಿದ್ದು, ಬ್ಯಾನರ್​, ಫ್ಲೆಕ್ಸ್, ಹೋಲ್ಡಿಂಗ್ಸ್​ಗಳನ್ನು ಪೊಲೀಸರು​ ತೆರೆವುಗೊಳಿಸಲಿದ್ದಾರೆ. ಬಿಬಿಎಂಪಿ ಅಧಿಕಾರಿಗಳು,  ‘ಬ್ಯಾನರ್​, ಫ್ಲೆಕ್ಸ್, ಹೋಲ್ಡಿಂಗ್ಸ್​ ಬಗ್ಗೆ ಸ್ಥಳೀಯ ಠಾಣೆಗೆ ದೂರು ನೀಡಲಿದ್ದು, ದೂರು ಬಂದ ತಕ್ಷಣವೇ ಪೊಲೀಸರು, ಬ್ಯಾನರ್​, ಫ್ಲೆಕ್ಸ್, ಹೋಲ್ಡಿಂಗ್ಸ್​ ತೆರವು ಕಾರ್ಯ ನಡೆಸಲಿದ್ದಾರೆ.

ಸಭೆಯಲ್ಲಿ ಎರಡು ಅಂಶಗಳ ಮಹತ್ವದ ಚರ್ಚೆ

ಇನ್ನು ಸಭೆಯಲ್ಲಿ ಎರಡು ಅಂಶಗಳ ಮಹತ್ವದ ಚರ್ಚೆಯಾಗಿದೆ. ಮೊದಲನೆದಾಗಿ ಎಲ್ಲೆಲ್ಲಿ ಅನಧಿಕೃತ ಫ್ಲೆಕ್ಸ್ ಹಾಕಲಾಗಿದೆ, ಅವುಗಳ ತೆರವು ಹಾಗೂ ಕ್ರಮಕೈಗೊಳ್ಳುವುದು. ಹಾಗೂ ಪ್ರಮುಖವಾಗಿ ಯಾವ ಯಾವ ಕಾನೂನು ಕ್ರಮ ಕೈಗೊಳ್ಳಬಹುದು. ಅವೆಲ್ಲವನ್ನೂ ಬಳಸಿ ಕ್ರಮ ಕೈಗೊಳ್ಳಲಾಗುತ್ತದೆ. ಎರಡನೇದಾಗಿ ಈ ರೀತಿ ಫ್ಲೆಕ್ಸ್ ಗಳ ಹಾಕದಂತೆ ನಿಗಾ ವಹಿಸುವುದು. ರಾತ್ರಿ ಗಸ್ತಿನಲ್ಲಿರುವ ಸಿಬ್ಬಂದಿಗಳಿಗೂ ಸಹ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಅಕ್ರಮ ಬ್ಯಾನರ್​​, ಹೋರ್ಡಿಂಗ್ಸ್​, ಫ್ಲೆಕ್ಸ್​ ಕಂಡರೆ ಬಿಬಿಎಂಪಿಯ ಈ ನಂಬರ್​ಗೆ ವಾಟ್ಸಪ್​ ಮಾಡಿ

ಫ್ಲೆಕ್ಸ್ ಹಾಕುವ ವೇಳೆ ಅದನ್ನು ಪೂರ್ವ ನಿರ್ಧರಿತ ನಂಬರ್​ಗೆ ಮಾಹಿತಿ ನೀಡುವುದು. ಅವುಗಳ ಮೇಲೆ ಎಫೆಕ್ಟಿವ್ ಆಕ್ಷನ್ ಬಗ್ಗೆ ಚರ್ಚೆ ಮಾಡಲಾಗಿದೆ. ಇನ್ನು ಪೊಲೀಸರಿಗೆ ಬಿಬಿಎಂಪಿಯವರು ನೀಡಿರುವ ನಂಬರ್​ಗೆ ಮಾಹಿತಿ ನೀಡಲಾಗುವುದು. ಈ ವೇಳೆ ಬಿಬಿಎಂಪಿಯಿಂದ ಅವುಗಳು ಅಧಿಕೃತವೋ ಅಥವಾ ಅನಧಿಕೃತವೋ ಎಂದು ಪರಿಶೀಲಿಸಲಾಗುತ್ತದೆ. ನಂತರ ಬಿಬಿಎಂಪಿಯಿಂದ ಈ ಬಗ್ಗೆ ದೂರು ನೀಡಲಾಗುತ್ತೆ. ನಂತರ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಭೆಯಲ್ಲಿ ಪೊಲೀಸ್ ಇಲಾಖೆಯ ಎಸಿಪಿ, ಡಿಸಿಪಿ ಮಟ್ಟದ ಅಧಿಕಾರಿಗಳು ಸಹ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:04 pm, Tue, 30 July 24