ಪರಸ್ತ್ರೀಗಾಗಿ ಪತ್ನಿ ಹತ್ಯೆಗೆ ಸ್ಕೆಚ್ ಹಾಕಿದ್ರಾ ಬೆಂಗಳೂರಿನ ಪೊಲೀಸ್ ಅಧಿಕಾರಿ? ವಾಟ್ಸಪ್ ಗುಟ್ಟು ರಟ್ಟು
ಪರಸ್ತ್ರೀಗಾಗಿ ಪತ್ನಿಯನ್ನೇ ಹತ್ಯೆಗೆ ಸಂಚು ರೂಪಿಸಿರುವ ಆರೋಪ ಬೆಂಗಳೂರಿನ ಆಗ್ನೇಯ ವಿಭಾಗದ ಸೆನ್ ಎಸಿಪಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಆಗ್ನೇಯ ವಿಭಾಗದ ಸೆನ್ ಎಸಿಪಿ ಗೋವರ್ಧನ್ ಅವರು ಮಹಿಳಾ ಪ್ರೊಬೇಷನರಿ ಡಿವೈಎಸ್ಪಿ ಜೊತೆ ಸಂಪರ್ಕ ಹೊಂದಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಎಸಿಪಿ ಗೋವರ್ಧನ್ ವಿರುದ್ಧ ವೇ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬೆಂಗಳೂರು, (ಫೆಬ್ರವರಿ 13): ಆಗ್ನೇಯ ವಿಭಾಗದ ಸೆನ್ ಎಸಿಪಿ ಗೋವರ್ಧನ್ ಹಾಗೂ ಮಹಿಳಾ ಪ್ರೊಬೇಷನರಿ ಡಿವೈಎಸ್ಪಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಎಸಿಪಿ ಗೋವರ್ಧನ್ ಪತ್ನಿ ಅಮೃತ ಅವರು ತಮ್ಮ ಗಂಡ ಹಾಗೂ ಮತ್ತೊಬ್ಬ ಮಹಿಳಾ ಅಧಿಕಾರಿಯ ವಿರುದ್ಧ ದೂರು ನೀಡಿದ್ದಾರೆ. ಮಹಿಳಾ ಅಧಿಕಾರಿ ಹಾಗೂ ಗೋವರ್ಧನ್ ನಡುವಿನ ಚಾಟ್ ಸಿಕ್ಕಿರುವ ಬಗ್ಗೆಯೂ ಅಮೃತ ಅವರ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರೊಬೇಷನರಿ DySP ಗೋವರ್ಧನ್ ಅವರು ಮಹಿಳಾ ಪ್ರೊಬೇಷನರಿ DySP ಜೊತೆ ಸಂಪರ್ಕದಲ್ಲಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದು ಪತಿ ಗೋವರ್ಧನ್ ಹಾಗೂ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಪತ್ನಿ ಅಮೃತ ದೂರು ನೀಡಿದ್ದಾರೆ. ಪರಸ್ತ್ರೀಗೆ ಮಕ್ಕಳಿದ್ದರೂ ತನ್ನ ಪತಿ(ಗೋವರ್ಧನ್) ಜೊತೆ ಸಲುಗೆ ಬೆಳೆಸಿದ್ದಾರೆ. ಪತಿ ಎಲ್ಲೇ ಕೆಲಸಕ್ಕೆ ಸೇರಿದರೂ ಅಲ್ಲಿಗೆ ಹೋಗುತ್ತಾರೆ. ಇದನ್ನು ಗೋವರ್ಧನ್ ಪತ್ನಿ ಅಮೃತ ಅವರು ಪ್ರಶ್ನಿಸಿದ್ದು, ಇದರಿಂದ ಆಕ್ರೋಗೊಂಡು ಹಲ್ಲೆ ಮಾಡಿದ್ದಾರೆ. ಹೊಟ್ಟೆಗೆ ಒದ್ದು, ಡಿವೋರ್ಸ್ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನು ಪತಿ ಜೊತೆಗಿನ ಸಹವಾಸ ಬಿಡುವಂತೆ ಮಹಿಳಾ ಅಧಿಕಾರಿಗೂ ಅಮೃತ ಹೇಳಿದ್ದಾರೆ. ಇದಕ್ಕೆ ಮಹಿಳಾಧಿಕಾರಿ ಹೆಂಡ್ತಿಗೆ ಡಿವೋರ್ಸ್ ನೀಡುವಂತೆ ಗೋವರ್ಧನ್ಗೆ ಒತ್ತಾಯಿಸಿದ್ದಾರೆ. ಇಲ್ಲವಾದರೇ ಅಮೃತ ಮೇಲೆ ಸುಳ್ಳು ಕೇಸ್ ಹಾಕಿಸುವ ಬೆದರಿಕೆ ಹಾಕಿದ್ದಾರೆ ಎಂದು ಅಮೃತ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಕೆಲಸ ಸಿಕ್ಕ ಕೂಡಲೆ ಗಂಡನಿಗೆ ಕೈ ಕೊಟ್ಟ ಮಹಿಳೆ; ಜಾಣತನದಿಂದ ಹೆಂಡತಿ ಮೇಲೆ ಸೇಡು ತೀರಿಸಿಕೊಂಡ ಪತಿ!
ಈ ಬಗ್ಗೆ ಅಮೃತ ಅತ್ತೆ, ಮಾವನ ಬಳಿ ಹೇಳಿಕೊಂಡಿದ್ದಾರೆ. ಆದರೆ ಅತ್ತೆಯೂ ನನ್ನ ಬೆಂಬಲಕ್ಕೆ ನಿಲ್ಲದೆ ಕೊಲೆಗೆ ಯತ್ನಿಸಿದ್ದಾರೆ. ಸೀಮೆಎಣ್ಣೆ ಸುರಿದು ಹತ್ಯೆಗೆ ಯತ್ನಿಸಿದ್ದಾಳೆಂದು ಅತ್ತೆ ವಿರುದ್ಧ ದೂರು ದಾಖಲಿಸಿದ್ದರು. ಪತಿಯ ಸಂಬಂಧದಿಂದ ಬೇಸತ್ತು ಅಮೃತ ಡಿಜಿಗೆ ದೂರು ನೀಡಿದ್ದರು. ಬಳಿಕ ಇಲಾಖೆಯೂ ಇಬ್ಬರಿಗೂ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ಇದೀಗ ಅಮೃತ ಅವರ ದೂರು ಆಧರಿಸಿ ಗೋವರ್ಧನ್, ಗೆಳತಿ(ಮಹಿಳಾಧಿಕಾರಿ ಹಾಗೂ ಪೋಷಕರ ವಿರುದ್ಧ ಕೊಲೆಗೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿ ಎಫ್‌ಐಆರ್ ದಾಖಲಾಗಿದೆ.
ಅಮೃತ ಪರ ವಕೀಲೆ ಗ್ರೀಷ್ಮಾ ಹೇಳಿದ್ದಿಷ್ಟು
ಈ ಬಗ್ಗೆ ದೂರುದಾರೆ ಅಮೃತ ಪರ ವಕೀಲೆ ಗ್ರೀಷ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅಮೃತರವರು ನನ್ನ ಕ್ಲೈಂಟ್. ಅವರ ಪತಿ ಗೋವರ್ಧನ್ ಮೇಲೆ ದೂರು ನೀಡಿದ್ದಾರೆ. ಎಸಿಪಿ ಗೋವರ್ಧನ್ ಹಾಗೂ ಅಶ್ವಿನಿ ಅವರು ಸ್ನೇಹಿತರು. ಗೋವರ್ಧನ್, ಅಶ್ವಿನಿ ಹಾಗೂ ಗೋವರ್ಧನ್ ತಾಯಿ ವಿರುದ್ದ ದೂರು ನೀಡಿದ್ದೇವೆ. ಅಲ್ಲದೇ ಅಶ್ವಿನಿ ತಂದೆ ಕೂಡ ನಾಲ್ಕನೇ ಆರೋಪಿ. 2014 ರಲ್ಲಿ ಮದುವೆಯಾಗಿ 8 ವರ್ಷದ ಮಗು ಇದೆ. ಮೊದಲು ಗೋವರ್ಧನ್ ಡಾಕ್ಟರ್ ಆಗಿದ್ರು. ನಂತರ ಪೊಲೀಸ್ ಇಲಾಖೆಗೆ ಸೇರಿದ್ರು. ಅಶ್ವಿನಿ ಕಾರವಾರ ಸೈಬರ್ ಕ್ತೈಂ ನಲ್ಲಿ ಎಸಿಪಿ. ಗೋವರ್ಧನ್ ಬೆಂಗಳೂರು ಸೈಬರ್ ಕ್ರೈಂ ನಲ್ಲಿ ಎಸಿಪಿಯಾಗಿದ್ದಾರೆ ಎಂದು ಹೇಳಿದರು.
ಗೋವರ್ಧನ್ ನರಿಗೆ ಅಶ್ವಿನಿ ಪದೇ ಪದೇ ಕಾಲ್,ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಅಮೃತಾ ಪತಿಯನ್ನ ಕೇಳಲಿಕ್ಕೆ ಶುರು ಮಾಡಿದ್ರು. ಆಗ ಪತ್ನಿಗೆ ಹೊಡೆದು ಟಾರ್ಚರ್ ಮಾಡಿದ್ದಾರೆ. ಅಲ್ಲದೇ ಅಶ್ವಿನಿ ಅವರು ಅಮೃತಾ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಹೈಗ್ರೌಂಡ್ಸ್ ನಲ್ಲಿ ಕೇಸ್ ಆಗಿದ್ದು, ಪೊಲೀಸರು ಮಹಜರ್ ಕೂಡ ಮಾಡಿದ್ದಾರೆ. ಗೋವರ್ಧನ್ ಮತ್ತು ಅಶ್ವಿನಿ ನಡುವೆ ವಾಟ್ಸಾಪ್ ಚಾಟ್ನಲ್ಲಿ ಅಮೃತಾ ಬಗ್ಗೆ ಮಾತಾಡಿದ್ದಾರೆ. ಅಮೃತಾ ಅವರಿಗೆ ಜೀವ ಬೆದರಿಕೆ ಇದೆ ಎಂದರು.
Published On - 1:50 pm, Thu, 13 February 25