ಬೆಂಗಳೂರು ಸುತ್ತಮುತ್ತ 12 ಹೊಸಾ ಮಾರುಕಟ್ಟೆ ಆರಂಭ

ಬೆಂಗಳೂರು: ಮಹಾಮಾರಿ ಕೊರೊನಾಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಈ ವೇಳೆ ರೈತರು ತಾವು ಬೆಳೆದ ಬೆಲೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಸರಿಯಾದ ಬೆಲೆಯೂ ಸಿಗದೆ ಕಣ್ಣೀರು ಹಾಕುತ್ತಿದ್ದಾನೆ. ಹೀಗಾಗಿ ರೈತರಿಗೆ ಸಹಾಯವಾಗಲು ನಗರದಲ್ಲಿ 12 ಹೊಸ ಮಾರುಕಟ್ಟೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇಂದು ನಡೆದ ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಬೆಂಗಳೂರು ಸುತ್ತಮುತ್ತ ಹೊಸ 12 ಮಾರುಕಟ್ಟೆ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತೋಟಗಾರಿಕೆ ಉತ್ಪನ್ನ ಮತ್ತು ಹೂವು ಮಾರಾಟಕ್ಕೆ 12 ಹೊಸ ಮಾರುಕಟ್ಟೆ […]

ಬೆಂಗಳೂರು ಸುತ್ತಮುತ್ತ 12 ಹೊಸಾ ಮಾರುಕಟ್ಟೆ ಆರಂಭ
Follow us
ಸಾಧು ಶ್ರೀನಾಥ್​
|

Updated on: Apr 16, 2020 | 1:27 PM

ಬೆಂಗಳೂರು: ಮಹಾಮಾರಿ ಕೊರೊನಾಗೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಈ ವೇಳೆ ರೈತರು ತಾವು ಬೆಳೆದ ಬೆಲೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಸರಿಯಾದ ಬೆಲೆಯೂ ಸಿಗದೆ ಕಣ್ಣೀರು ಹಾಕುತ್ತಿದ್ದಾನೆ. ಹೀಗಾಗಿ ರೈತರಿಗೆ ಸಹಾಯವಾಗಲು ನಗರದಲ್ಲಿ 12 ಹೊಸ ಮಾರುಕಟ್ಟೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇಂದು ನಡೆದ ಸಭೆ ಬಳಿಕ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಬೆಂಗಳೂರು ಸುತ್ತಮುತ್ತ ಹೊಸ 12 ಮಾರುಕಟ್ಟೆ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತೋಟಗಾರಿಕೆ ಉತ್ಪನ್ನ ಮತ್ತು ಹೂವು ಮಾರಾಟಕ್ಕೆ 12 ಹೊಸ ಮಾರುಕಟ್ಟೆ : ಕೃಷಿ, ತೋಟಗಾರಿಕೆ ಉತ್ಪನ್ನ ಮತ್ತು ಹೂವು ಮಾರಾಟಕ್ಕೆ 12 ಹೊಸ ಮಾರುಕಟ್ಟೆ ನಿರ್ಮಿಸಲಾಗುವುದು. ಹೀಗಾಗಿ ಕಂದಾಯ ಇಲಾಖೆಗೆ ಜಾಗ ಕೊಡಲು ಮನವಿ ಮಾಡಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ಅಗತ್ಯ ವಸ್ತು ತಯಾರಿಸುವ ಫ್ಯಾಕ್ಟರಿಗಳ ಸಿಬ್ಬಂದಿಗೆ ಇಂದಿನಿಂದ ಪಾಸ್ ವಿತರಣೆ ಮಾಡಲಾಗುವುದು. ಗುಳೆ ಬಂದಿರುವ ಕಟ್ಟಡ ಕಾರ್ಮಿಕರಿಗೆ ಆಹಾರ ಕೊಡ್ತಿದ್ದೇವೆ. ಪಡಿತರ ಚೀಟಿ ಅರ್ಜಿ ಸಲ್ಲಿಸಿದವರಿಗೂ ಪಡಿತರ ಹಂಚಿಕೆ ಆಗ್ತಿದೆ ಎಂದು ಹೇಳಿದ್ರು.

ದ್ರಾಕ್ಷಿ ಬೆಲೆ ಸಹಜ ಸ್ಥಿತಿಗೆ: ಇನ್ನು ತೋಟಗಾರಿಕೆ ಇಲಾಖೆಯಲ್ಲಿ ಈ ಹಿಂದೆ ಒಂದೂವರೆ ಸಾವಿರ ಟನ್ ವಹಿವಾಟು ನಡೀತಿತ್ತು. ಈಗ 5 ಸಾವಿರ ಟನ್ ತೋಟಗಾರಿಕೆ ಉತ್ಪನ್ನ ವಹಿವಾಟು ನಡೆಯುತ್ತಿದೆ. ಟೊಮೇಟೊ ಮತ್ತು ದ್ರಾಕ್ಷಿ ಬೆಲೆ ಸಹಜ ಸ್ಥಿತಿಗೆ ಬಂದಿದೆ. ದ್ರಾಕ್ಷಿಗಳನ್ನ ವೈನ್ ಡಿಸ್ಟಲರಿಗೆ ನೀಡುವ ಕುರಿತು ಅಬಕಾರಿ ಇಲಾಖೆ ಜತೆ ಚರ್ಚೆ ನಡೆದಿದೆ.

ಸರ್ಕಾರ ಬೀಜ ವಿತರಣಾ ಸಂಸ್ಥೆಗಳಿಗೆ 83 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿತ್ತು. ಅದನ್ನ ಈಗ ಸರ್ಕಾರದ ವತಿಯಿಂದ ನೀಡುವ ವ್ಯವಸ್ಥೆ ಆಗಿದೆ. ಬೆಂಗಳೂರಿನಲ್ಲಿ ತರಕಾರಿ ಮತ್ತು ಹಣ್ಣು ವ್ಯಾಪಾರ ಮಾಡಲು 320 ಮೊಬೈಲ್ ವಾಹನ ಸಂಚಾರ ಮಾಡ್ತಿದೆ. ರೇಷ್ಮೆ ಮಾರುಕಟ್ಟೆ ಸುಧಾರಣೆ ಆಗಿದೆ. 120 ಟನ್ ಖರೀದಿ ಮಾಡುವ ವ್ಯವಸ್ಥೆ ಆಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದು.

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್