ಈ ವರ್ಷವೂ SEP ಜಾರಿ ಡೌಟ್; ಪ್ರಸಕ್ತ ವರ್ಷದಲ್ಲಿಯೂ NEP ಮುಂದುವರೆಯುತ್ತಾ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರ್ತಿದ್ದಂತೆ ಮೊದಲು ಮಾಡಿದ ಕೆಲಸಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಂಪೂರ್ಣವಾಗಿ ರಾಜ್ಯದಲ್ಲಿ ಮೂಲೆಗುಂಪು ಮಾಡುವುದು ಕೂಡಾ ಒಂದಾಗಿತ್ತು. ರಾಜ್ಯಸರ್ಕಾರ ನಿರ್ಧರಿಸಿದಂತೆ ಈಗಾಗಲೇ ಎನ್ಇಪಿ ರದ್ದು ಮಾಡಿ ಘೋಷಣೆಯೂ ಆಗಿದ್ದು ರಾಜ್ಯದಲ್ಲಿ ಎಸ್ಇಪಿ ಜಾರಿಗೆ ಹಾಗೂ SEP ರಚನೆಗೆ ಈಗ 15 ಜನರ ತಜ್ಞರ ಸಮಿತಿ ರಚಿಸಿ ಪ್ರಸಕ್ತ ಸಾಲಿನಲ್ಲಿ ಎಸ್ ಇಪಿ ಜಾರಿಗೆ ತರುವುದಾಗಿ ಕೂಡಾ ಹೇಳಿತ್ತು. ಆದ್ರೆ ಈಗ ಈ ವರ್ಷವೇ ಎಸ್ಇಪಿ ಜಾರಿ ಡೌಟ್ ಎನ್ನಲಾಗತ್ತಿದೆ.

ಈ ವರ್ಷವೂ SEP ಜಾರಿ ಡೌಟ್; ಪ್ರಸಕ್ತ ವರ್ಷದಲ್ಲಿಯೂ NEP ಮುಂದುವರೆಯುತ್ತಾ?
ಸಾಂದರ್ಭಿಕ ಚಿತ್ರ
Updated By: ಆಯೇಷಾ ಬಾನು

Updated on: Mar 04, 2024 | 1:50 PM

ಬೆಂಗಳೂರು, ಮಾರ್ಚ್.04: ಎನ್ಇಪಿ (NEP), ರಾಷ್ಟ್ರೀಯ ಶಿಕ್ಷಣ ನೀತಿ 2020. ಪ್ರಧಾನಿ ಮೋದಿಯವರ ಮಹತ್ವದ ನೀತಿಗಳಲ್ಲೊಂದು. ಸದ್ಯ ಇದು ಜಾರಿಯಾಗಿ 3 ವರ್ಷಗಳೇ ಉರುಳಿದರೂ ಈ ಕುರಿತ ವಾದ ವಿವಾದಗಳು ಇನ್ನೂ ಮುಂದುವರೆದಿವೆ. ಅದರಲ್ಲೂ ಪ್ರಾರಂಭದಿಂದಲೂ ಎನ್‌ಇಪಿಯನ್ನ ಪ್ರಬಲವಾಗಿ ವಿರೋಧಿಸುತ್ತಾ ಬಂದಿರುವ ಕಾಂಗ್ರೆಸ್‌ ರಾಜ್ಯದಲ್ಲಿ ಎನ್‌ಇಪಿ ರದ್ದು ಮಾಡಿ ಬಜೆಟ್‌ನಲ್ಲಿ ಸಹ ಘೋಷಣೆ ಮಾಡಿ ಸರ್ಕಾರ ಎಸ್​ಇಪಿ ರಚನೆಗೆ ಸುಖದೇವ್ ಥೋರಟ್ (Sukhadeo Thorat) ನೇತೃತ್ವದಲ್ಲಿ 15 ಜನರ ತಜ್ಞರ ಒಂದು ಸಮಿತಿಯನ್ನು ರಚನೆ ಮಾಡಿದೆ. ಈ ವರ್ಷದಲ್ಲಿಯೇ ಹೊಸ ಶಿಕ್ಷಣ ನೀತಿ ಜಾರಿಗೂ ಮುಂದಾಗಿತ್ತು. ಆದ್ರೆ ತಜ್ಞರ ಸಮಿತಿ ಮಾರ್ಚ್ ಆರಂಭವಾದ್ರೂ ಪ್ರಾಥಮಿಕ ವರದಿ ಸಲ್ಲಿಸದ ಹಿನ್ನಲೆ ಈ ವರ್ಷವೂ ಎಸ್ಇಪಿ ಜಾರಿ ಡೌಟ್ ಎನ್ನುವಂತಾಗಿದೆ. ತಜ್ಞರ ಸಮಿತಿ ವರದಿ ಸಲ್ಲಕೆಗೆ ಮತಷ್ಟು ಸಮಯ ಕೇಳಿರೋದರಿಂದ ಇದೇ ವರ್ಷದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯೋಗೊದು ಅನುಮಾನ ಎನ್ನಲಾಗಿದೆ.

ಇನ್ನು ಮತ್ತೊಂದಡೆ NEP ಅಳವಡಿಸಿಕೊಳ್ಳದ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಅನುದಾನದಕ್ಕೆ ಕೊಕ್ಕೆ ಬಿದಿದೆ. ಪ್ರಸ್ತುತ ಪಿಎಂ ಉಷಾ ಅಡಿಯಲ್ಲಿ ನೀಡುವ ಉನ್ನತ್ತ ಶಿಕ್ಷಣಕ್ಕೆ ವಿಶ್ವವಿದ್ಯಾಲಯಗಳಿಗೆ ನೀಡುವ ಕೇಂದ್ರ ಸರ್ಕಾರದ ಅನುದಾನ ಮೇಲೆ ಗಂಭೀರ ಪರಿಣಾಮ ಎದುರಾಗಿದೆ. ಎನ್ಇಪಿ ಅಳವಡಿಸದ ರಾಜ್ಯಗಳ ವಿವಿಗಳಿಗೆ ಕೇಂದ್ರ ಅನುದಾನಕ್ಕೆ ಕೊಕ್ಕೆ ಹಾಕಲು ಮುಂದಾಗಿದೆಯಂತೆ. ಹೀಗಾಗಿ ಸರ್ಕಾರವೂ ಕೊಂಚ ಹೊಸ ಶಿಕ್ಷಣ ನೀತಿ ಅಳವಡಿಕೆಗೆ ಹಿಂದೇಟು ಹಾಕ್ತೀದೆ ಎನ್ನಲಾಗಿದೆ. ಹೊಸ ಶಿಕ್ಷಣ ನೀತಿ ಜಾರಿಯಿಂದ ಕೇಂದ್ರದ ಅನುದಾನಕ್ಕೂ ಕೊಕ್ಕೆ ಬೀಳುವ ಸಮಸ್ಯೆ ಎದುರಾಗಿದ್ದು ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಈ ವರ್ಷ ಎಸ್​ಇಪಿ ಜಾರಿಯಾಗುತ್ತಾ ಇಲ್ವಾ ಅನ್ನೊ ಗೊಂದಲ ಶುರುವಾಗಿದೆ.

ಇದನ್ನೂ ಓದಿ:ಸಬರಮತಿ ರೀತಿ ತುಂಗಾ ತೀರ ಅಭಿವೃದ್ದಿ- 80 ಕೋಟಿ ವೆಚ್ಚದಲ್ಲಿ ಮಲೆನಾಡಿನಲ್ಲಿ ರೆಡಿಯಾಯ್ತು ಮತ್ತೊಂದು ಪ್ರವಾಸಿ ಸ್ಮಾರ್ಟ್ ತಾಣ!

ಒಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ರಾಷ್ಟ್ರೀಯ ಶಿಕ್ಷಣ ನೀತಿ ಎನ್‌‌ಇಪಿ ಮೂಲೆಗುಂಪು ಮಾಡಿ ಎಸ್ಇಪಿ ರಚನೆಗೆ ಮುಂದಾಗಿದೆ. ಆದ್ರೆ ಈ ಎಸ್ಇಪಿಯಿಂದ ಆದ್ರೂ ರಾಜ್ಯದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುತ್ತಾ ಅಂತಾ ಅಂದುಕೊಂಡ್ರೆ ಇದು ಕುಡಾ ಈಗ ಮತ್ತೆ ಸಮಸ್ಯೆಗಳಿಗೆ ಕಾರಣವಾಗ್ತೀದೆ. ಒಂದೆಡೆ ಕೇಂದ್ರದ ಅನುದಾನಕ್ಕೆ ಕೊಕ್ಕೆ ಬೀಳುವ ಆತಂಕದ ಜೊತೆ ಹೊಸ ನೀತಿ ಮತ್ತಷ್ಟು ತಡವಾಗುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ