AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರಿಗೆ ಬ್ಯಾಡ್​​ ನ್ಯೂಸ್​: ಸದ್ಯ ಸಾರ್ವಜನಿಕ ಸೇವೆಗೆ ಲಭ್ಯವಾಗಲ್ಲ ಬಹುನಿರೀಕ್ಷಿತ ಈ ಫ್ಲೈಓವರ್​

ಈಗಾಗಲೇ ವಿಳಂಬವಾಗಿರುವ ಬೆಂಗಳೂರಿನ ಬಹುನಿರೀಕ್ಷಿತ ಈಜಿಪುರ ಫ್ಲೈಓವರ್ ಕಾಮಗಾರಿ ಮುಗಿಯುವುದು ಮತ್ತಷ್ಟು ತಡವಾಗಲಿದೆ. ಭೂಸ್ವಾಧೀನ ಮತ್ತು ಇಂಜಿನಿಯರ್‌ಗಳ ವರ್ಗಾವಣೆ ಸಮಸ್ಯೆಗಳಿಂದ ಕುಂಟುತ್ತ ಸಾಗಿದ್ದ ಕೆಲಸ ಜೂನ್‌ಗೆ ಮುಗಿಯುವ ನಿರೀಕ್ಷೆ ಇತ್ತು. ಆದರೆ ಕಾಮಗಾರಿ ಈಗ ಆಗಸ್ಟ್‌ಗೆ ವೇಳೆಗೆ ಕಂಪ್ಲೀಟ್​​ ಆಗಬಹುದು ಎನ್ನಲಾಗ್ತಿದೆ. ಈ ವಿಳಂಬದಿಂದ ಸಾರ್ವಜನಿಕರು ಆಕ್ರೋಶಗೊಂಡಿದ್ದು,ಸಣ್ಣ ಕಾರಣಗಳಿಗೂ ಕೆಲಸ ವಿಳಂಬವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿಗರಿಗೆ ಬ್ಯಾಡ್​​ ನ್ಯೂಸ್​: ಸದ್ಯ ಸಾರ್ವಜನಿಕ ಸೇವೆಗೆ ಲಭ್ಯವಾಗಲ್ಲ ಬಹುನಿರೀಕ್ಷಿತ ಈ ಫ್ಲೈಓವರ್​
ಈಜಿಪುರ ಫ್ಲೈಓವರ್ ಕಾಮಗಾರಿImage Credit source: newindianexpress.com
ಪ್ರಸನ್ನ ಹೆಗಡೆ
|

Updated on: Apr 03, 2026 | 4:25 PM

Share

ಬೆಂಗಳೂರು, ಏಪ್ರಿಲ್​​ 03: ನಾನಾ ಕಾರಣಗಳಿಂದಾಗಿ ಕುಂಟುತ್ತಾ ಸಾಗಿರುವ ಬೆಂಗಳೂರಿನ (Bengaluru) ಬಹು ನಿರೀಕ್ಷಿತ ಈಜಿಪುರ ಫ್ಲೈಓವರ್ ಸಾರ್ವಜನಿಕ ಬಳಕೆಗೆ ಲಭ್ಯವಾಗುವುದು ಮತ್ತಷ್ಟು ವಿಳಂಬವಾಗಲಿದೆ. ಈಗಿನ ಮಾಹಿತಿಯ ಪ್ರಕಾರ ಜೂನ್​​ ಒಳಗೆ ಮುಗಿಯಬೇಕಿದ್ದ ಮೇಲ್ಸೇತುವೆಯ ಕೆಲಸ ಆಗಸ್ಟ್ ವೇಳೆಗೆ ಕಂಪ್ಲೀಟ್​​ ಆಗಬಹುದು ಎನ್ನಲಾಗ್ತಿದೆ. ಮಾರ್ಚ್ ಗಡುವನ್ನು ಹೊಂದಿದ್ದ ಈ ಕಾಮಗಾರಿ ಭೂಸ್ವಾಧೀನ ಹಾಗೂ ಇಂಜಿನಿಯರ್ ವರ್ಗಾವಣೆ ಸಮಸ್ಯೆಗಳ ಕಾರಣದಿಂದ ಅದಾಗಲೇ ವಿಳಂಬವಾಗಿತ್ತು ಎನ್ನುವುದಿಲ್ಲಿ ಗಮನಾರ್ಹ.

2017ರಲ್ಲಿ ಸಿಂಪ್ಲೆಕ್ಸ್​​ ಇನ್ಫ್ರಾಸ್ಟ್ರಕ್ಚರ್​​ ಸಂಸ್ಥೆ ಈ ಫ್ಲೈಓವರ್ ಕಾಮಗಾರಿ ಆರಂಭಿಸಿತ್ತು. ಆದರೆ ನಂತರ ಸಂಸ್ಥೆ ಯೋಜನೆಯನ್ನು ಅರ್ಧದಲ್ಲೇ ಬಿಟ್ಟಿತ್ತು. ಬಳಿಕ ಹೈದರಾಬಾದ್ ಮೂಲದ ಬೊಳ್ಳಿನೇನಿ ಸೀನಯ್ಯ ಕಂಪನಿ ಪ್ರೈವೇಟ್ ಲಿಮಿಟೆಡ್(BSCPL) ಸಂಸ್ಥೆಗೆ 2024ರಲ್ಲಿ 15 ತಿಂಗಳ ಗಡುವಿನೊಂದಿಗೆ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನೀಡಲಾಗಿತ್ತು. ಈಜಿಪುರ ಮುಖ್ಯ ರಸ್ತೆಯ ಮೇಲೆ ನಿರ್ಮಾಣವಾಗುತ್ತಿರುವ 2.38 ಕಿಮೀ ಉದ್ದದ ಫ್ಲೈಓವರ್‌ನಲ್ಲಿ ಒಟ್ಟು 762 ಸೆಗ್ಮೆಂಟ್‌ಗಳು ಬರಲಿದ್ದು, ಆ ಪೈಕಿ ಇನ್ನೂ ಸುಮಾರು 20 ಸೆಗ್ಮೆಂಟ್‌ಗಳನ್ನು ಅಳವಡಿಸೋದು ಬಾಕಿ ಇದೆ. ಸೇಂಟ್ ಜಾನ್ಸ್ ಜಂಕ್ಷನ್ ಬಳಿ ಪಿಯರ್ ಕೆಲಸ ಈಗಷ್ಟೇ ಆರಂಭವಾಗಿರುವುದರಿಂದ ಕೆಲವು ವಾರಗಳು ಬೇಕಾಗುತ್ತದೆ ಎಂದು ಇಂಜಿನಿಯರ್ ತಿಳಿಸಿದ್ದಾರೆ. ಡೊಮ್ಲೂರ್ ಭಾಗ ಹಾಗೂ ಕೇಂದ್ರಿಯ ಸದನ್ ಭಾಗದಲ್ಲಿ ಅಪ್ ರ್ಯಾಂಪ್ ಮತ್ತು ಡೌನ್ ರ್ಯಾಂಪ್ ಕೆಲಸಗಳು ಕೂಡ ಪ್ರಾರಂಭವಾಗಿವೆ. ಮಣ್ಣಿನ ಸ್ಥಿರೀಕರಣ, ಸೈಡ್‌ವಾಲ್ ನಿರ್ಮಾಣ ಹಾಗೂ ನಂತರ ಬಿಟುಮಿನ್ ಹಾಸುವ ಕೆಲಸಗಳಿಗೆ ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ; ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ

ಇನ್ನು ಕಾಮಗಾರಿ ವಿಳಂಬದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ಕಾರಣಗಳಿಗೂ ಕೆಲಸ ವಿಳಂಬವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ. ಈ ಫ್ಲೈಓವರ್ ಪೂರ್ಣಗೊಂಡರೆ ಈಜಿಪುರ ಜಂಕ್ಷನ್, ಸೋನಿ ವರ್ಲ್ಡ್ ಸಿಗ್ನಲ್ ಮತ್ತು ಕೇಂದ್ರೀಯ ಸದನ ಸೇರಿದಂತೆ ಕೋರಮಂಗಲದ ಒಟ್ಟು 7 ಪ್ರಮುಖ ಜಂಕ್ಷನ್‌ಗಳನ್ನು ಬೈಪಾಸ್ ಮಾಡಬಹುದು. ಇದರಿಂದ ಪ್ರಯಾಣದ ಅವಧಿ ಸುಮಾರು 30 ನಿಮಿಷಗಳ ಉಳಿತಾಯವಾಗಲಿದೆ. ಹೀಗಾಗಿ ಆದಷ್ಟು ಶೀಘ್ರ ಮೇಲ್ಸೇತುವೆ ಸಾರ್ವಜನಿಕ ಸೇವೆಗೆ ಮುಕ್ತವಾಗಬೇಕೆಂಬ ಆಗ್ರಹವೂ ಕೆಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!