ನೆಲಮಂಗಲ ಟು ಯಶವಂತಪುರ ರಸ್ತೆಗೆ ಲೀಲಾವತಿ ಹೆಸರಿಡಲು ಬಿಬಿಎಂಪಿಗೆ ಪತ್ರ ಬರೆದು ಮನವಿ
ಬೆಂಗಳೂರಿನ ಹಲವು ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್, ವಿಷ್ಣುವರ್ಧನ್, ರಾಜ್ ಕುಮಾರ್ ಸೇರಿದಂತೆ ಹಲವು ಪ್ರಸಿದ್ಧ ನಟರ ಹೆಸರಿಡಲಾಗಿದೆ. ಇದೇ ರೀತಿ ನೆಲಮಂಗಲದಿಂದ ಯಶವಂತಪುರ ಸಂಪರ್ಕಿಸುವ ರಸ್ತೆಗೆ ನಟಿ ಲೀಲಾವತಿ ಹೆಸರಿಡುವಂತೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಪತ್ರ ನೀಡೋ ಮೂಲಕ ಆಗ್ರಹ ಮಾಡಿದ್ದಾರೆ.
ಬೆಂಗಳೂರು, ಡಿ.12: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ರಸ್ತೆಗಳಿಗೆ ಎಂಟ್ರಿಯಾದ್ರೆ ಸೆಲೆಬ್ರೆಟಿಗಳೋ, ಸಾಹಿತಿಗಳೋ ಅಥವಾ ಯಾವುದಾದ್ರೂ ಕ್ಷೇತ್ರದ ಗಣ್ಯರ ಹೆಸರಿರೋ ಬೋರ್ಡ್ ಕಣ್ಣಿಗೆ ಬೀಳುತ್ತೆ. ಇದೀಗ ಬೆಂಗಳೂರಿನ ಪ್ರತಿಷ್ಠಿತ ರಸ್ತೆಯೊಂದಕ್ಕೆ ಮೊನ್ನೆಯಷ್ಟೇ ಅಗಲಿದ ಹಿರಿಯ ನಟಿ ಲೀಲಾವತಿ (Actress Leelavathi) ಹೆಸರಿಡಬೇಕೆಂಬ ಕೂಗು ಕೇಳಿಬರ್ತಿದೆ.
ಕನ್ನಡ ಚಿತ್ರರಂಗದ ಕಳಸದಂತಿದ್ದ ನಟಿ ಲೀಲಾವತಿ ಮಣ್ಣಿನಲ್ಲಿ ಲೀನರಾಗಿ ಐದಾರು ದಿನಗಳೇ ಕಳೆಯುತ್ತಾ ಬಂದ್ರೂ ಅವರ ನೆನಪುಗಳು ಅಳಿಸಿಲ್ಲ. ಬರೀ ಸಿನಿಮಾ ಮಾತ್ರವಲ್ಲ ಸಾಮಾಜಿಕ ಸೇವೆಯಲ್ಲೂ ಹತ್ತಾರು ಜನರಿಗೆ ನೆರವಾಗಿದ್ದ ಲೀಲಾವತಿಯವರಿಗೆ ರಾಜ್ಯ ಸರ್ಕಾರ ಗೌರವ ಸ್ಥಾನ ನೀಡುವಂತೆ ಕೂಗು ಕೇಳಿಬಂದಿದೆ. ಬೆಂಗಳೂರಿನ ರಸ್ತೆಗೆ ಲೀಲಾವತಿಯವರ ಹೆಸರಿಡಬೇಕು ಅನ್ನೋ ಆಗ್ರಹ ಕೂಡ ಕೇಳಿಬರ್ತಿದೆ.
ಇದನ್ನೂ ಓದಿ: Leelavathi No More: ಸಕಲ ಸರ್ಕಾರೀ ಗೌರವ ಮತ್ತು ಬಂಟ ಸಂಪ್ರದಾಯದಂತೆ ನೆರವೇರಿದ ಲೀಲಾವತಿ ‘ಅಮ್ಮ’ನ ಅಂತಿಮ ಸಂಸ್ಕಾರ
ಬೆಂಗಳೂರಿನ ಹಲವು ರಸ್ತೆಗಳಿಗೆ ಪುನೀತ್ ರಾಜ್ ಕುಮಾರ್, ವಿಷ್ಣುವರ್ಧನ್, ರಾಜ್ ಕುಮಾರ್ ಸೇರಿದಂತೆ ಹಲವು ಪ್ರಸಿದ್ಧ ನಟರ ಹೆಸರಿಡಲಾಗಿದೆ. ಇದೇ ರೀತಿ ನೆಲಮಂಗಲದಿಂದ ಯಶವಂತಪುರ ಸಂಪರ್ಕಿಸುವ ರಸ್ತೆಗೆ ನಟಿ ಲೀಲಾವತಿ ಹೆಸರಿಡುವಂತೆ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಪಾಲಿಕೆ ಮುಖ್ಯ ಆಯುಕ್ತರಿಗೆ ಮನವಿ ಪತ್ರ ನೀಡೋ ಮೂಲಕ ಆಗ್ರಹ ಮಾಡಿದ್ದಾರೆ.
ಇನ್ನು ಈಗಾಗಲೇ ಲೀಲಾವತಿಯವರ ಸಿನಿಮಾ ರಂಗದ ಸಾಧನೆ ಜೊತೆಗೆ ಸಾಮಾಜಿಕ ಕೆಲಸಗಳನ್ನ ಗುರ್ತಿಸಿರೋ ಸರ್ಕಾರ, ಅವರ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ಸಲ್ಲಿಸಿ ಗೌರವ ಸೂಚಿಸಿತ್ತು. ಇದೀಗ ಪಾಲಿಕೆಯ ಆಯುಕ್ತರ ಮೂಲಕ ನೆಲಮಂಗಲ ಟು ಯಶವಂತಪುರ ರಸ್ತೆಗೆ ಲೀಲಾವತಿಯವರ ಹೆಸರಿಡೋ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸದ್ಯ ಸರ್ಕಾರ ಪುನೀತ್ ರಾಜ್ ಕುಮಾರ್ ಮರಣದ ಬಳಿಕ ರಸ್ತೆಗಳಿಗೆ ಅವರ ಹೆಸರು ನಾಮಕರಣ ಮಾಡಿದ ಹಾಗೇ, ಇದೀಗ ಬಂದಿರೋ ಮನವಿಗೆ ಹೇಗೆ ಸ್ಪಂದಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ