AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಎಂಟ್ರಿ: ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸೇವೆ ಆರಂಭ

ಫ್ಲಿಪ್‌ಕಾರ್ಟ್ ತನ್ನ ಆಹಾರ ವಿತರಣಾ ಸೇವೆಯನ್ನು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಿದೆ. ONDC ಮೂಲಕ ವಿಸ್ತರಿಸುವ ಯೋಜನೆಯೂ ಇದೆ. ಸ್ವಿಗ್ಗಿ ಮತ್ತು ಝೊಮ್ಯಾಟೋದಂತಹ ದೈತ್ಯರಿಗೆ ಇದು ನೇರ ಸ್ಪರ್ಧೆಯಾಗಲಿದೆ. ಆದಾಗ್ಯೂ, 'ಫೋರಂ ಫಾರ್ ಇಂಟರ್ನೆಟ್ ರಿಟೇಲರ್ಸ್' ಸಂಸ್ಥೆಯು ಫ್ಲಿಪ್‌ಕಾರ್ಟ್ ವಿರುದ್ಧ 3000 ಕೋಟಿ ರೂ. ತೆರಿಗೆ ವಂಚನೆ ಮತ್ತು ಅನ್ಯಾಯದ ಸ್ಪರ್ಧೆಯ ಕುರಿತು ದೂರು ನೀಡಿದೆ.

ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಗ್ರ್ಯಾಂಡ್ ಎಂಟ್ರಿ: ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಸೇವೆ ಆರಂಭ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jul 24, 2026 | 4:07 PM

Share

ಬೆಂಗಳೂರು, ಜು.24: ದೇಶದ ಪ್ರಮುಖ ಇ-ಕಾಮರ್ಸ್ ದೈತ್ಯ ಹಾಗೂ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ (Flipkart), ಭಾರತದಲ್ಲಿ ತನ್ನದೇ ಆದ ಆಹಾರ ಸರಬರಾಜು (Food Delivery) ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲು ಸಜ್ಜಾಗಿದೆ. ಮುಂದಿನ ಒಂದು ತಿಂಗಳ ಒಳಗಾಗಿ ರಾಜಧಾನಿ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ (Pilot Rollout) ಈ ಸೇವೆಗೆ ಚಾಲನೆ ನೀಡಲಿದೆ ಎಂದು ಎನ್‌ಡಿಟಿವಿ ಪ್ರಾಫಿಟ್ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ಪರೀಕ್ಷಿಸಿದ ಬಳಿಕ, ಸೇವೆಯನ್ನು ದೇಶದ ಇತರೆ ಪ್ರಮುಖ ನಗರಗಳಿಗೂ ವಿಸ್ತರಿಸಲು ಕಂಪನಿ ಯೋಜಿಸಿದೆ. ಫ್ಲಿಪ್‌ಕಾರ್ಟ್ ತನ್ನ ಫುಡ್ ಡೆಲಿವರಿ ಸೇವೆಗಾಗಿ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ಇದರ ಜೊತೆಗೆ, ಸರ್ಕಾರದ ಬೆಂಬಲಿತ ಒಎನ್‌ಡಿಸಿ ನೆಟ್‌ವರ್ಕ್ ಮೂಲಕವೂ ಗ್ರಾಹಕರಿಗೆ ಸೇವೆ ಲಭ್ಯವಾಗುವಂತೆ ಮಾಡಲು ತಂತ್ರ ರೂಪಿಸುತ್ತಿದೆ.

ಈಗಾಗಲೇ ಸ್ವಿಗ್ಗಿ, ಝೊಮ್ಯಾಟೋಗಳಂತಹ ದೈತ್ಯ ಸಂಸ್ಥೆಗಳಿರುವ ತೀವ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನದೇ ಆದ ಬಲವಾದ ಹೆಜ್ಜೆಗುರುತು ಮೂಡಿಸಲು ಫ್ಲಿಪ್‌ಕಾರ್ಟ್ ಸಿದ್ಧತೆ ನಡೆಸುತ್ತಿದೆ. ಆದರೆ, ಈ ಸೇವೆ ಆರಂಭವಾಗುವ ಅಧಿಕೃತ ದಿನಾಂಕವನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ಭಾರತೀಯ ಸೇನೆಯಲ್ಲಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ; B.Tech ಪದವೀಧರರಿಗೆ ಸುವರ್ಣಾವಕಾಶ

ಮತ್ತೊಂದೆಡೆ, ಆನ್‌ಲೈನ್ ಮಾರಾಟಗಾರರ ಒಕ್ಕೂಟವಾದ ‘ಫೋರಂ ಫಾರ್ ಇಂಟರ್ನೆಟ್ ರಿಟೇಲರ್ಸ್, ಸೆಲ್ಲರ್ಸ್ ಅಂಡ್ ಟ್ರೇಡರ್ಸ್’ ಸಂಸ್ಥೆಯು ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ ಫ್ಲಿಪ್‌ಕಾರ್ಟ್ ವಿರುದ್ಧ ದೂರು ನೀಡಿದೆ. ಫ್ಲಿಪ್‌ಕಾರ್ಟ್ ತೆರಿಗೆ ವಂಚನೆಯಿಂದ ಅಂದಾಜು 3,000 ಕೋಟಿ ರೂ. ನಿಧಿಯನ್ನು ಸೃಷ್ಟಿಸಿಕೊಂಡು, ಸ್ವತಂತ್ರ ಮಾರಾಟಗಾರರಿಗೆ ಧಕ್ಕೆಯಾಗುವಂತೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ ಹಾಗೂ ಮಾರುಕಟ್ಟೆಯಲ್ಲಿ ಅನುಚಿತ ಸ್ಪರ್ಧೆಯನ್ನು ಸೃಷ್ಟಿಸುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ