AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಯಾಂಗ ವ್ಯವಸ್ಥೆಗೆ ಎಐ ಸ್ಪರ್ಷ! ಐಐಐಟಿ ಬೆಂಗಳೂರು ವಿದ್ಯಾರ್ಥಿಗಳಿಂದ ಪ್ರಕರಣಗಳನ್ನು ಪತ್ತೆ ಹಚ್ಚುವ ‘ಎಐ’ ಟೂಲ್ ಅಭಿವೃದ್ಧಿ

ದೇಶದ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳನ್ನು ರಾಜಿ ಸಂಧಾನ ಅಥವಾ ಲೋಕ ಅದಾಲತ್ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಲು ಐಐಐಟಿ ಬೆಂಗಳೂರು ವಿದ್ಯಾರ್ಥಿಗಳು 'ನ್ಯಾಯ ಸೇತು' ಎಂಬ ವಿನೂತನ ಎಐ ಟೂಲ್ ಅಭಿವೃದ್ಧಿಪಡಿಸಿದ್ದಾರೆ. ಈ ನಾವೇನ್ಯತೆಯು ಸುದೀರ್ಘ ನ್ಯಾಯಾಲಯದ ಪ್ರಕ್ರಿಯೆಗಳನ್ನು ಕಡಿಮೆಗೊಳಿಸಿ, ಸಾಮಾನ್ಯ ಜನರಿಗೆ ವೇಗವಾಗಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ನ್ಯಾಯಾಂಗ ವ್ಯವಸ್ಥೆಗೆ ಎಐ ಸ್ಪರ್ಷ! ಐಐಐಟಿ ಬೆಂಗಳೂರು ವಿದ್ಯಾರ್ಥಿಗಳಿಂದ ಪ್ರಕರಣಗಳನ್ನು ಪತ್ತೆ ಹಚ್ಚುವ 'ಎಐ' ಟೂಲ್ ಅಭಿವೃದ್ಧಿ
ಸಾಂದರ್ಭಿಕ ಚಿತ್ರImage Credit source: NC Courts
ಭಾವನಾ ಹೆಗಡೆ
|

Updated on: Nov 07, 2026 | 9:02 AM

Share

ಮುಖ್ಯಾಂಶಗಳು

  • ಐಐಐಟಿ ಬೆಂಗಳೂರು ವಿದ್ಯಾರ್ಥಿಗಳಿಂದ ಬಾಕಿ ಕೇಸ್‌ ಗುರುತಿಸುವ ಎಐ ಟೂಲ್.
  • ಮಾತುಕತೆ ಮೂಲಕ ವಿವಾದ ಬಗೆಹರಿಸಲು 'ನ್ಯಾಯ ಸೇತು' ವ್ಯವಸ್ಥೆ ರೂಪಿಸಲಾಗಿದೆ.
  • ಇನ್ನೋವೇಶನ್ ಚಾಲೆಂಜ್‌ನಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳ ವಿನೂತನ ಆವಿಷ್ಕಾರ.

ಬೆಂಗಳೂರು, ನವೆಂಬರ್ 07: ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಗಾಗಿ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಐಐಐಟಿ ಬೆಂಗಳೂರು ವಿದ್ಯಾರ್ಥಿಗಳು ವಿನೂತನ ಕೃತಕ ಬುದ್ಧಿಮತ್ತೆ (ಎಐ) ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ನ್ಯಾಯಾಲಯದಲ್ಲಿ ವರ್ಷಗಟ್ಟಲೆ ಕಾಲಹರಣವಾಗುವ ಬದಲು, ಮಾತುಕತೆ ಅಥವಾ ಲೋಕ ಅದಾಲತ್ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿರುವ ಪ್ರಕರಣಗಳನ್ನು ಈ ‘ನ್ಯಾಯ ಸೇತು’ಎಐ ಟೂಲ್ ಗುರುತಿಸಿ ಶಿಫಾರಸು ಮಾಡುತ್ತದೆ.

‘ಇನ್ಕ್ಲೂಸಿವ್ ಇನ್ನೋವೇಶನ್ ಫಾರ್ ಭಾರತ್’ ವಿಭಾಗದಲ್ಲಿ ಪ್ರಶಸ್ತಿ

ಐಐಐಟಿ ಬೆಂಗಳೂರಿನ ವಿದ್ಯಾರ್ಥಿಗಳಾದ ಹರ್ಷಿತ್ ಖಟ್ಟರ್, ಆರುಷ್ ಗುಪ್ತಾ, ಉತ್ಕರ್ಷ್ ಗುಪ್ತಾ ಮತ್ತು ಆದರ್ಶ್ ಸಿಂಗ್ ಅವರನ್ನೊಳಗೊಂಡ ತಂಡ ಈ ತಂತ್ರಜ್ಞಾನ ರೂಪಿಸಿದೆ. ‘ಐಡಿಯಾಸ್ ಫಾರ್ ಇಂಡಿಯಾ ಇನ್ನೋವೇಶನ್ ಚಾಲೆಂಜ್ 2026’ ಸ್ಪರ್ಧೆಯಲ್ಲಿ ‘ಇನ್ಕ್ಲೂಸಿವ್ ಇನ್ನೋವೇಶನ್ ಫಾರ್ ಭಾರತ್’ ವಿಭಾಗದಲ್ಲಿ ಈ ತಂಡ ಪ್ರಶಸ್ತಿಯನ್ನು ಗಳಿಸಿದೆ.

ದೇಶದ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ ಸದ್ಯ ಸುಮಾರು 5 ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ. ಈ ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಿ, ಯಾವ ವಿವಾದಗಳನ್ನು ಮಾಧ್ಯಸ್ಥಿಕೆ ಅಥವಾ ರಾಜಿ ಸಂಧಾನದ ಮೂಲಕ ಬೇಗ ಪರಿಹರಿಸಬಹುದು ಎಂಬುದನ್ನು ಈ ಎಐ ಉಪಕರಣವು ಪತ್ತೆ ಹಚ್ಚುತ್ತದೆ. ಮಾತ್ರವಲ್ಲದೆ, ಆ ಪ್ರಕರಣಗಳನ್ನು ಏಕೆ ರಾಜಿ ಸಂಧಾನಕ್ಕೆ ಪರಿಗಣಿಸಬೇಕು ಎಂಬುದರ ಕಾರಣಗಳನ್ನೂ ಸಹ ಇದು ವಿವರಿಸುತ್ತದೆ.

ವಿದ್ಯಾರ್ಥಿಗಳ ಅಭಿಪ್ರಾಯ

“ನ್ಯಾಯಾಲಯಗಳ ಮೆಟ್ಟಿಲೇರುವ ಸಾಮಾನ್ಯ ಜನರ ವಿವಾದಗಳು ಸುದೀರ್ಘ ಕಾಲ ವಿಚಾರಣೆಯಲ್ಲಿ ಉಳಿಯುತ್ತವೆ. ಕಾನೂನು ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೆ ಮತ್ತಷ್ಟು ಸುಲಭವಾಗಿಸಲು ನಾವು ‘ನ್ಯಾಯ ಸೇತು’ ರೂಪಿಸಿದ್ದೇವೆ” ಎಂದು ಹರ್ಷಿತ್ ಖಟ್ಟರ್ ತಿಳಿಸಿದ್ದಾರೆ.

“ಸುದೀರ್ಘ ನ್ಯಾಯಾಲಯದ ಪ್ರಕ್ರಿಯೆಗಳಿಲ್ಲದೆ ವಿವಾದಗಳನ್ನು ಪರಿಹರಿಸುವ ಸಾಧ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ನ್ಯಾಯವು ಎಲ್ಲರಿಗೂ ವೇಗವಾಗಿ ಮತ್ತು ಸುಲಭವಾಗಿ ಸಿಗಬೇಕು” ಎಂದು ಆರುಷ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಈ ಪ್ಲಾಟ್‌ಫಾರ್ಮ್ ಕೇವಲ ಸಹಾಯಕ ಸಾಧನವಾಗಿದ್ದು, ಅಂತಿಮವಾಗಿ ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಒಪ್ಪಿಸುವ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವು ಕಾನೂನು ಸಮಿತಿ ಹಾಗೂ ನ್ಯಾಯಾಲಯಗಳ ಬಳಿಯೇ ಇರುತ್ತದೆ. ವಿದ್ಯಾರ್ಥಿಗಳ ಈ ವಿನೂತನ ಆವಿಷ್ಕಾರವು ನ್ಯಾಯಾಂಗ ವ್ಯವಸ್ಥೆಯಲ್ಲಿ ಬಾಕಿ ಇರುವ ಪ್ರಕರಣಗಳ ಹೊರೆಯನ್ನು ತಗ್ಗಿಸಲು ಮತ್ತು ಜನಸಾಮಾನ್ಯರಿಗೆ ತ್ವರಿತ ನ್ಯಾಯ ಒದಗಿಸಲು ಮಹತ್ವದ ಹೆಜ್ಜೆಯಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More