AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡಿಗೆ ಮನೆಯಲ್ಲಿ ಅಕ್ರಮ ಹುಕ್ಕಾ ಬಾರ್: ಸಾಫ್ಟ್‌ವೇರ್ ಸಂಸ್ಥೆಯ ಹಿರಿಯ ವಿಶ್ಲೇಷಕ ಸೇರಿ ಇಬ್ಬರ ಬಂಧನ!

ಬೆಂಗಳೂರಿನ ಕೆಂಚನಪುರ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಜಾಲವನ್ನು ಕುಂಬಳಗೂಡು ಪೊಲೀಸರು ಭೇದಿಸಿದ್ದಾರೆ. ದೊಮ್ಲೂರು ಖಾಸಗಿ ಸಂಸ್ಥೆಯ ಹಿರಿಯ ವಿಶ್ಲೇಷಕ ಅಜಿತ್ ಹಾಗೂ ಸಪ್ಲೈಯರ್ ವರುಣ್ ಎಂಬಿಬ್ಬರನ್ನು ಬಂಧಿಸಲಾಗಿದ್ದು, ದಾಳಿ ವೇಳೆ 5 ಹುಕ್ಕಾ ಪಾಟ್‌ಗಳು, ಚಾರ್ಕೋಲ್ ಹಾಗೂ ಅಗತ್ಯ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಬಾಡಿಗೆ ಮನೆಯಲ್ಲಿ ಅಕ್ರಮ ಹುಕ್ಕಾ ಬಾರ್: ಸಾಫ್ಟ್‌ವೇರ್ ಸಂಸ್ಥೆಯ ಹಿರಿಯ ವಿಶ್ಲೇಷಕ ಸೇರಿ ಇಬ್ಬರ ಬಂಧನ!
ಸಾಂದರ್ಭಿಕ ಚಿತ್ರImage Credit source: The Hindu
ಭಾವನಾ ಹೆಗಡೆ
|

Updated on: Sep 02, 2026 | 8:38 AM

Share

ಮುಖ್ಯಾಂಶಗಳು

  • ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಅಕ್ರಮ ಹುಕ್ಕಾ ಬಾರ್ ಕಾರ್ಯಾಚರಣೆ ಭೇದಿಸಿದ ಪೊಲೀಸರು.
  • ಖಾಸಗಿ ಕಂಪನಿ ಹಿರಿಯ ವಿಶ್ಲೇಷಕ ಸೇರಿ ಇಬ್ಬರು ಆರೋಪಿಗಳ ಬಂಧನ.
  • ಕುಂಬಳಗೂಡು ಪೊಲೀಸರಿಂದ ದಾಳಿ; ಹುಕ್ಕಾ ಪಾಟ್ ಹಾಗೂ ಉಪಕರಣಗಳು ವಶ.

ಬೆಂಗಳೂರು, ಸೆಪ್ಟೆಂಬರ್ 02: ನಗರದ (Bengaluru) ಕೆಂಚನಪುರ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಜಾಲವನ್ನು ಕುಂಬಳಗೂಡು ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿಯ ಹಿರಿಯ ವಿಶ್ಲೇಷಕ (Senior Analyst) ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮೂಲತಃ ಬಸವೇಶ್ವರನಗರದ ಮೀನಾಕ್ಷಿನಗರ ನಿವಾಸಿ ಅಜಿತ್ ಬಿ. ನಾಯಕ್ (28) ಮತ್ತು ಹಾಸನದ ವರುಣ್ ಕೆ.ಆರ್. (25) ಎಂದು ಗುರುತಿಸಲಾಗಿದೆ. ಅಜಿತ್ ಸಿವಿಲ್ ಇಂಜಿನಿಯರಿಂಗ್ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ದೊಮ್ಲೂರು ಮೂಲದ ಖಾಸಗಿ ಸಂಸ್ಥೆಯಲ್ಲಿ ಹಿರಿಯ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ವರುಣ್ ಬಿಬಿಎ ಪದವೀಧರನಾಗಿದ್ದು, ಈ ಅಕ್ರಮ ಹುಕ್ಕಾ ಬಾರ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರೆಸಾರ್ಟ್‌ಗೆ ಹೋಗುವ ಬದಲು ಸ್ವಂತ ಬಾರ್ ಆರಂಭ!

ಪೊಲೀಸರ ತನಿಖೆಯ ವೇಳೆ ಆರೋಪಿಗಳು ನೀಡಿದ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಅಜಿತ್ ಮತ್ತು ಆತನ ಸ್ನೇಹಿತರು ಹುಕ್ಕಾ ಸೇದಲು ನಿಯಮಿತವಾಗಿ ರಾಮನಗರಕ್ಕೆ ತೆರಳುತ್ತಿದ್ದರು. ಪ್ರತಿ ಬಾರಿಯೂ ತಲಾ 500 ರೂ. ಖರ್ಚಾಗುತ್ತಿದ್ದರಿಂದ, ತಾವೇ ಖಾಸಗಿಯಾಗಿ ಹುಕ್ಕಾ ಬಾರ್ ತೆರೆಯಲು ಯೋಜಿಸಿದ್ದರು. ಇದಕ್ಕಾಗಿ ಅನ್ನಪೂರ್ಣೇಶ್ವರರಿನಗರದಲ್ಲಿ ಬಂದ್ ಆಗಿದ್ದ ಹುಕ್ಕಾ ಬಾರ್‌ ಒಂದರಿಂದ ಅಗತ್ಯ ಉಪಕರಣಗಳು ಹಾಗೂ ಪ್ಲೇವರ್‌ಗಳನ್ನು ಖರೀದಿಸಿದ್ದರು. ಬಳಿಕ ಕೆಂಚನಪುರದಲ್ಲಿ ತಿಂಗಳಿಗೆ 13,000 ರೂ. ಬಾಡಿಗೆಗೆ ಮನೆಯ ಮೊದಲನೇ ಮಹಡಿಯನ್ನು ಪಡೆದು, ವಾರಾಂತ್ಯಗಳಲ್ಲಿ ಸ್ನೇಹಿತರಿಗೆ ಅಕ್ರಮವಾಗಿ ಹುಕ್ಕಾ ಪೂರೈಸಲು ಆರಂಭಿಸಿದ್ದರು.

ಪೊಲೀಸ್ ದಾಳಿ ಹಾಗೂ ವಸ್ತುಗಳ ವಶ

ಖಚಿತ ಮಾಹಿತಿ ಆಧರಿಸಿ ಕುಂಬಳಗೂಡು ಇನ್ಸ್‌ಪೆಕ್ಟರ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಅಕ್ರಮ ಜಾಲ ಬಯಲಾಗಿದೆ. ದಾಳಿ ವೇಳೆ 5 ಹುಕ್ಕಾ ಪಾಟ್‌ಗಳು, 3 ಪೈಪ್‌ಗಳು, ಲೈಟರ್‌ಗಳು, ಚಾರ್ಕೋಲ್, ಫಾಯಿಲ್ ಶೀಟ್‌ಗಳು ಹಾಗೂ ಗ್ರಾಹಕರಿಂದ ಸಂಗ್ರಹಿಸಿದ್ದ 450 ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಟ್ಟಡದ ಮಾಲೀಕರಿಗೆ ಈ ಅಕ್ರಮದ ಅರಿವಿತ್ತೇ ಎಂಬ ಬಗ್ಗೆ ಕುಂಬಳಗೂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ