AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ; ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷ ಬಂಧನ

ಕೆಲ ದಿನಗಳ ಹಿಂದೆ ಶಿವಮೊಗ್ಗದ ವಿನೋಬನಗರದ ಕೆಂಚಪ್ಪ ಲೇಚೌಟ್​ನಲ್ಲಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಡೆತ್​ನೋಟ್​ ಬರೆದಿಟ್ಟು, ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧೀಕ್ಷಕ ಚಂದ್ರಶೇಖರ್ ನೇಣಿಗೆ ಶರಣಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಎಂಬುವವರನ್ನ ಎಸ್​ಐಟಿ ಪೊಲೀಸರು ಬಂಧಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ; ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷ ಬಂಧನ
ಬಂಧಿತ ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷನ ಬಂಧನ
ರಾಚಪ್ಪಾಜಿ ನಾಯ್ಕ್
| Edited By: ಕಿರಣ್ ಹನುಮಂತ್​ ಮಾದಾರ್|

Updated on: Jun 05, 2024 | 2:41 PM

Share

ಬೆಂಗಳೂರು, ಜೂ.05: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ(Valmiki Development Corporation case) ಬಹುಕೋಟಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಎಂಬುವವರನ್ನ ಬಂಧಿಸಲಾಗಿದೆ. ಬರೊಬ್ಬರಿ 18 ನಕಲಿ ಖಾತೆ ಸೃಷ್ಟಿಸಿ ಹಣ ವರ್ಗಾಯಿಸಿದ ಆರೋಪದಡಿ ಅರೆಸ್ಟ್​ ಮಾಡಿ 8 ದಿನಗಳ ಎಸ್​ಐಟಿ(SIT) ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ನಿನ್ನೆ(ಜೂ.04) ಆತನನ್ನು ಪೊಲೀಸರು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದರು.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ರಾಜ್ಯ ಸರ್ಕಾರ ಪ್ರಕರಣವನ್ನು ಎಸ್​​ಐಟಿಗೆ ನೀಡಿತ್ತು.  ಅದರ ಬೆನ್ನೆಲ್ಲೇ ಇದೇ ಜೂನ್​ 01 ರಂದು ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಅವರನ್ನು ಬಂಧಿಸಿ, ಅವರನ್ನು 6 ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ ನೀಡಿ ಬೆಂಗಳೂರಿನ 3ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿತ್ತು. ಈ ಮಧ್ಯೆ ಇದೀಗ ತೆಲಂಗಾಣ ಸಹಕಾರ ಸಂಘದ ಅಧ್ಯಕ್ಷನನ್ನು ಬಂಧಿಸಿ, ಎಸ್​ಐಟಿ ವಶಕ್ಕೆ ಪಡೆದಿದೆ.

ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದ ವಂಚನೆ ಕೇಸ್​: ಬಂಧಿತ ಅಧಿಕಾರಿಗಳು 6 ದಿನ SIT ಕಸ್ಟಡಿಗೆ

ಏನಿದು ಪ್ರಕರಣ?

ಕೆಲ ದಿನಗಳ ಹಿಂದೆ ಶಿವಮೊಗ್ಗದ ವಿನೋಬನಗರದ ಕೆಂಚಪ್ಪ ಲೇಚೌಟ್​ನಲ್ಲಿ ರಾತ್ರಿ ಸಮಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧೀಕ್ಷಕ ಚಂದ್ರಶೇಖರ್ ನೇಣಿಗೆ ಶರಣಾಗಿದ್ದರು. ಈ ವೇಳೆ ಆರು ಪುಟಗಳ ಡೆತ್ ನೋಟ್ ಬರೆದಿಟ್ಟು, ಅದರಲ್ಲಿ 187.33 ಕೋಟಿ ರೂ. ನಿಗಮ ಅನುದಾನದಲ್ಲಿ 80 ರಿಂದ 85 ಕೋಟಿ ರೂ. ಅವ್ಯವಹಾರ ಆಗಿದೆ. ಈ ವ್ಯವಹಾರಕ್ಕೆ ತನ್ನನ್ನು ಹಿರಿಯ ಅಧಿಕಾರಿಗಳಾದ ಪದ್ಮನಾಭ್ಮ, ಪರಶುರಾಮ್ ಹಾಗೂ ಬೆಂಗಳೂರು ಎಂ ಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ರವುಲ್ ಮೂವರು ಸೇರಿ ಗೋಲ್ ಮಾಲ್ ಮಾಡಿದ್ದಾರೆ ಎಂದು ಬರೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಚಪ್ಪಾಜಿ ನಾಯ್ಕ್
ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಅವರು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನವರು. ಕಳೆದ 2 ವರ್ಷದಿಂದ ಟಿವಿ9 ಕನ್ನಡದ ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ ಅನುಭವವಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದಾರೆ.

Read More
‘ಗಂಡಸ್ತನ’ದ ಬಗ್ಗೆ ಮಾತು, ಮಂಜನಿಗೆ ಕಿಚ್ಚನ ಕ್ಲಾಸ್: ವಿಡಿಯೋ
‘ಗಂಡಸ್ತನ’ದ ಬಗ್ಗೆ ಮಾತು, ಮಂಜನಿಗೆ ಕಿಚ್ಚನ ಕ್ಲಾಸ್: ವಿಡಿಯೋ
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
"ಸನ್ಯಾಸಿ, ಸಿಎಂ ಎಲ್ಲವೂ ಹೊರಗಷ್ಟೇ, ಅಮ್ಮನ ಮುಂದೆ ಕೇವಲ ಮಗ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ