AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ‘ಹೌಸ್ ಪಾರ್ಟಿ’ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

ಕರ್ನಾಟಕದಲ್ಲಿ ಮನೆ ಹಾಗೂ ಖಾಸಗಿ ಜಾಗಗಳಲ್ಲಿ ಆಯೋಜಿಸುವ ಪಾರ್ಟಿಗಳ ತಾತ್ಕಾಲಿಕ ಮದ್ಯದ ಪರ್ಮಿಟ್ (CL-5) ಶುಲ್ಕವನ್ನು ಸರ್ಕಾರ ದುಪ್ಪಟ್ಟುಗೊಳಿಸಿದೆ. ವಾಣಿಜ್ಯೇತರ ಕಾರ್ಯಕ್ರಮಗಳ ದರ 20,000 ರೂ.ಗೆ ಏರಿಕೆಯಾಗಿದ್ದು, ತತ್ಕಾಲ್ ಪರ್ಮಿಟ್‌ಗೆ 40,000 ರೂ. ನಿಗದಿಪಡಿಸಲಾಗಿದೆ. ಆದರೆ, 9 ಲೀಟರ್ ಒಳಗೆ ಮದ್ಯ ಬಳಸುವ ಸಣ್ಣ ಪಾರ್ಟಿಗಳಿಗೆ ಯಾವುದೇ ಲೈಸೆನ್ಸ್ ಅಗತ್ಯವಿಲ್ಲ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ 'ಹೌಸ್ ಪಾರ್ಟಿ' ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!
ದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!
ಭಾವನಾ ಹೆಗಡೆ
|

Updated on: May 27, 2026 | 10:46 AM

Share

ಬೆಂಗಳೂರು, ಮೇ 27: ಬರ್ತ್​ ಡೇ, ಮದುವೆ, ಗೆಟ್-ಟು-ಗೆದರ್ ಎಂದು ಹೌಸ್ ಪಾರ್ಟಿ ಮಾಡುವವರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಪಾರ್ಟಿಗೆ ಬಂದ ಅತಿಥಿಗಳಿಗೆ ಭರಪೂರವಾಗಿ ಮದ್ಯ (Alcohol) ನೀಡಲು ಯೋಚಿಸುತ್ತಿರುವವರ ಜೇಬಿಗೆ ಇನ್ನು ಮುಂದೆ ಕತ್ತರಿ ಬೀಳಲಿದೆ. ಏಕೆಂದರೆ ಕರ್ನಾಟಕ ಸರ್ಕಾರವು ಖಾಸಗಿ ಪಾರ್ಟಿಗಳಲ್ಲಿ ಮದ್ಯ ಸರಬರಾಜು ಮಾಡಲು ನೀಡಲಾಗುವ ತಾತ್ಕಾಲಿಕ ಮದ್ಯದ ಪರ್ಮಿಟ್ (CL-5 ಲೈಸೆನ್ಸ್) ಶುಲ್ಕವನ್ನು ಅಕ್ಷರಶಃ ದುಪ್ಪಟ್ಟು ಮಾಡಿದೆ. ಆರ್ಥಿಕ ಇಲಾಖೆಯು ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ವಾಣಿಜ್ಯೇತರ (Non-commercial) ಮತ್ತು ವಾಣಿಜ್ಯ (Commercial) ಪಾರ್ಟಿಗಳ ಮದ್ಯದ ಪರ್ಮಿಟ್ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಖಾಸಗಿ ಪಾರ್ಟಿಗಳ ತಾತ್ಕಾಲಿಕ ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟುಗೊಂಡಿದೆ.
  • ವಾಣಿಜ್ಯೇತರ ಕಾರ್ಯಕ್ರಮಗಳ ಸಾಮಾನ್ಯ ಪರ್ಮಿಟ್ ದರ ಇಪ್ಪತ್ತು ಸಾವಿರಕ್ಕೇರಿಕೆ ಕಂಡಿದೆ.
  • ಒಂಬತ್ತು ಲೀಟರ್ ಒಳಗಿನ ಮದ್ಯದ ಬಳಕೆಗೆ ಯಾವುದೇ ಪರವಾನಗಿ ಅಗತ್ಯವಿಲ್ಲ.

ಹೊಸ ದರ ಪಟ್ಟಿ ಹೀಗಿದೆ

ಹೌಸ್ ಪಾರ್ಟಿಗಳಲ್ಲಿಇದುವರೆಗೆ ಪ್ರತಿದಿನಕ್ಕೆ 11,500 ರೂ. ಇದ್ದ ಶುಲ್ಕವನ್ನು ಈಗ 20,000 ರೂ.ಗೆ ಹೆಚ್ಚಿಸಲಾಗಿದೆ. ಈ ಪರ್ಮಿಟ್‌ ಅನ್ನು ಕನಿಷ್ಠ 7 ದಿನಗಳ ಮುಂಚಿತವಾಗಿಯೇ ಪಡೆಯಬೇಕು. ಒಂದು ವೇಳೆ ಕಾರ್ಯಕ್ರಮಕ್ಕೆ 24 ಗಂಟೆಗಳ ಮುಂಚೆ ತುರ್ತಾಗಿ ಅನುಮತಿ ಬೇಕಿದ್ದರೆ, ತತ್ಕಾಲ್ ಯೋಜನೆಯಡಿ ಪ್ರತಿದಿನಕ್ಕೆ ಬರೋಬ್ಬರಿ 40,000 ರೂ.ಪಾವತಿಸಬೇಕಾಗುತ್ತದೆ.

ವಾಣಿಜ್ಯ ಕಾರ್ಯಕ್ರಮಗಳಿಗೆ ಲಕ್ಷಗಳಲ್ಲಿ ಶುಲ್ಕ!

ಸಂಗೀತ ಕಚೇರಿಗಳು (Concerts), ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಹೊಸ ವರ್ಷದ ಆಚರಣೆಗಳಂತಹ ವಾಣಿಜ್ಯ (Commercial) ಪಾರ್ಟಿಗಳಿಗೆ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದ್ದು, ಪ್ರತಿದಿನಕ್ಕೆ 75,000 ರೂ. ನಿಗದಿಪಡಿಸಲಾಗಿದೆ. ತುರ್ತು ಅನುಮತಿಗಾಗಿ ಪ್ರತಿದಿನಕ್ಕೆ 1.5 ಲಕ್ಷ ರೂ. ದಂಡ ತೆರಬೇಕಾಗುತ್ತದೆ.

9 ಲೀಟರ್‌ವರೆಗಿನ ಮದ್ಯಕ್ಕೆ ಲೈಸೆನ್ಸ್ ಬೇಡ!

ಮನೆಯಲ್ಲಿ ಸಣ್ಣ ಪ್ರಮಾಣದ ಪಾರ್ಟಿ ಮಾಡುವವರಿಗೆ ಅಬಕಾರಿ ಇಲಾಖೆ ಒಂದು ಸಣ್ಣ ವಿನಾಯಿತಿ ನೀಡಿದೆ. ಖಾಸಗಿ ಪಾರ್ಟಿಗಳಲ್ಲಿ 9 ಲೀಟರ್ ಮದ್ಯ (IMFL) ಮತ್ತು 18 ಲೀಟರ್ ಬಿಯರ್ ಅಥವಾ ವೈನ್ ಮಿತಿಯೊಳಗೆ ಮದ್ಯ ಬಳಸಲು ಯಾವುದೇ ರೀತಿಯ ಅಬಕಾರಿ ಪರವಾನಗಿ (Licence) ಪಡೆಯುವ ಅಗತ್ಯವಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಮಿತಿ ದಾಟಿದರೆ ಕಡ್ಡಾಯವಾಗಿ CL-5 ಲೈಸೆನ್ಸ್ ಪಡೆಯಲೇಬೇಕು.

ಇದನ್ನೂ ಓದಿ ಮದ್ಯಪ್ರಿಯರಿಗೆ ಗುಡ್ ನ್ಯೂಸ್: ಬಿಯರ್ ಮತ್ತು ವಿಸ್ಕಿ ದರ ಭಾರಿ ಇಳಿಕೆ!

ರಾಜ್ಯ ಸರ್ಕಾರದ ಆದಾಯ ಸಂಗ್ರಹಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ವಾಣಿಜ್ಯೇತರ ಕಾರ್ಯಕ್ರಮಗಳಿಗೂ ಇನ್ಮುಂದೆ ಕಡ್ಡಾಯವಾಗಿ CL-5 ಲೈಸೆನ್ಸ್ ಪಡೆಯಬೇಕಾಗುತ್ತದೆ ಎಂದು ಅಬಕಾರಿ ಆಯುಕ್ತ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ವೀಕೆಂಡ್ ಪಾರ್ಟಿ ಮೂಡ್‌ನಲ್ಲಿದ್ದ ಸಿಲಿಕಾನ್ ಸಿಟಿ ಮಂದಿಗೆ ಸರ್ಕಾರದ ಈ ಹೊಸ ಆದೇಶ ಭಾರಿ ಶಾಕ್ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More