AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬತ್ತಿದ ಬೋರ್​​ವೆಲ್​​ಗಳು: ರಾಜ್ಯದ 652 ಹಳ್ಳಿಗಳಲ್ಲಿ ನೀರಿಗೆ ಬರ; ಯಾವೆಲ್ಲ ಜಿಲ್ಲೆಗಳು ಭಾದಿತ?

ಬಿಸಿಲಿನ ತಾಪದಿಂದ ಕರ್ನಾಟಕದ 1.23 ಲಕ್ಷ ಬೋರ್‌ವೆಲ್‌ಗಳ ಪೈಕಿ 1,010 ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕುಸಿದಿದೆ. ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ, ತುಮಕೂರು, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಜಲ ಜೀವನ್ ಮಿಷನ್ ಮತ್ತು ಬಹುಗ್ರಾಮ ನೀರು ಯೋಜನೆಗಳು ಪ್ರಗತಿಯಲ್ಲಿದ್ದರೂ, ಹಲವು ಗ್ರಾಮಗಳಿಗೆ ಇನ್ನೂ ನೀರು ತಲುಪಿಲ್ಲ.

ಬತ್ತಿದ ಬೋರ್​​ವೆಲ್​​ಗಳು: ರಾಜ್ಯದ 652 ಹಳ್ಳಿಗಳಲ್ಲಿ ನೀರಿಗೆ ಬರ; ಯಾವೆಲ್ಲ ಜಿಲ್ಲೆಗಳು ಭಾದಿತ?
ಸಾಂದರ್ಭಿಕ ಚಿತ್ರImage Credit source: AI Image
ಪ್ರಸನ್ನ ಹೆಗಡೆ
|

Updated on:May 02, 2026 | 10:23 AM

Share

ಬೆಂಗಳೂರು, ಮೇ 02: ರಾಜ್ಯದಲ್ಲಿ ಬಿಸಿಲಿನ ಅಬ್ಬರದ ಹಿನ್ನೆಲೆ ನೀರಿಗೆ ಬರ ಆರಂಭವಾಗಿದೆ. ರಾಜ್ಯದಲ್ಲಿರುವ 1.23 ಲಕ್ಷಕ್ಕೂ ಹೆಚ್ಚು ಬೋರ್‌ವೆಲ್​​ಗಳ ಪೈಕಿ, ವಿವಿಧ ಜಿಲ್ಲೆಗಳಲ್ಲಿನ 1,010 ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಭಾರಿ ಕುಸಿದಿದೆ. ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಸಮಸ್ಯೆಯಾಗಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಕಾರ, ಉತ್ತರ ಕನ್ನಡ, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ ನೀರಿನ ಸಮಸ್ಯೆ ಉಲ್ಬಣವಾಗಿದೆ.

ರಾಯಚೂರು ಜಿಲ್ಲೆಯಲ್ಲಿ 198 ಗ್ರಾಮಗಳು, ಶಿವಮೊಗ್ಗದಲ್ಲಿ 196, ಉತ್ತರ ಕನ್ನಡದಲ್ಲಿ 184, ತುಮಕೂರಿನಲ್ಲಿ 152 ಮತ್ತು ವಿಜಯಪುರದಲ್ಲಿ 148 ಗ್ರಾಮಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಕೊಪ್ಪಳ, ಹಾಸನ, ದಾವಣಗೆರೆ, ಮಂಡ್ಯ, ಬಳ್ಳಾರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ 100ಕ್ಕೂ ಹೆಚ್ಚು ಗ್ರಾಮಗಳು ತೊಂದರೆಗೆ ಸಿಲುಕಿವೆ. ಹೀಗಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಸಂಖ್ಯೆ ಕಡಿಮೆ ಎನ್ನುವುದು ಸಮಾಧಾನಕರ ಸಂಗತಿ.

ಇದನ್ನೂ ಓದಿ: ಸಮುದ್ರ ಇದ್ರೂ ಮಂಗಳೂರಿನಲ್ಲಿ ನೀರಿಗೆ ಬರ; ವಾಹನಗಳನ್ನ ತೊಳೆಯದಂತೆ ಸೂಚನೆ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಕೆಲವು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಯ 1,128 ಗ್ರಾಮಗಳಲ್ಲಿ 708 ಗ್ರಾಮಗಳು ಬೋರ್‌ವೆಲ್‌ಗಳ ಮೇಲೆ ಅವಲಂಬಿತವಾಗಿವೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲಾ ಮನೆಗಳಿಗೆ ನಳ ನೀರು ಒದಗಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಹುಗ್ರಾಮ ನೀರಿನ ಯೋಜನೆಯೂ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯತ್ ಗ್ರಾಮೀಣ ಜಲಪೂರೈಕೆ ವಿಭಾಗದ ಕಾರ್ಯನಿರ್ವಹಣಾ ಇಂಜಿನಿಯರ್ ಜಿ. ರಾಮಸ್ವಾಮಿ ಅವರು, ಬೋರ್‌ವೆಲ್‌ಗಳ ಮೇಲೆ ಅವಲಂಬಿತವಾಗಿರುವ ಗ್ರಾಮಗಳಲ್ಲಿ ನೀರಿನ ಉತ್ಪಾದನೆ ಕಡಿಮೆಯಾದ ಕಾರಣ ಸಮಸ್ಯೆ ಉಂಟಾಗಿದೆ. ಜಲ ಜೀವನ್ ಮಿಷನ್ ಮತ್ತು ಬಹುಗ್ರಾಮ ನೀರಿನ ಯೋಜನೆಗಳ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಕೆಲವು ಗ್ರಾಮಗಳಿಗೆ ನದಿ ನೀರು ತಲುಪಿಲ್ಲ ಎಂದು ಹೇಳಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:22 am, Sat, 2 May 26

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಬ್ಯಾಂಕ್ ಆಫ್ ಬರೋಡಾದಲ್ಲಿ 8.70 ಕೋಟಿ ರೂ. ದರೋಡೆ
ಬ್ಯಾಂಕ್ ಆಫ್ ಬರೋಡಾದಲ್ಲಿ 8.70 ಕೋಟಿ ರೂ. ದರೋಡೆ
ಮಂಡ್ಯ: ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!
ಮಂಡ್ಯ: ಜಿಂಕೆಯನ್ನು ನುಂಗಿದ್ದ 10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ!
ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಗೃಹಲಕ್ಷ್ಮಿ ಯೋಜನೆ ಹಣ ದುರ್ಬಳಕೆ ಆರೋಪ: ಡಿಕೆ ಶಿವಕುಮಾರ್ ಮಹತ್ವದ ಹೇಳಿಕೆ
ಇಂಧನ ಬೆಲೆ ಏರಿಕೆ: ಕೇಂದ್ರ, ರಾಜ್ಯಕ್ಕೆಷ್ಟು ಪಾಲೆಂಬ ಮಾಹಿತಿ ಇಲ್ಲಿದೆ
ಇಂಧನ ಬೆಲೆ ಏರಿಕೆ: ಕೇಂದ್ರ, ರಾಜ್ಯಕ್ಕೆಷ್ಟು ಪಾಲೆಂಬ ಮಾಹಿತಿ ಇಲ್ಲಿದೆ
ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!
ಬಕ್ರೀದ್ ಸ್ಪೆಷಲ್: ಪೆರೆಸಂದ್ರ ಸಂತೆಯಲ್ಲಿ ಕುರಿಗಳಿಗೆ ಭಾರೀ ಬೇಡಿಕೆ!
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಅಭಿಮಾನಿಗಳ ಬಳಿ ವಿಶೇಷ ಮನವಿ ಇಟ್ಟ ಅಶ್ವಿನಿ ಗೌಡ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಕಳ್ಳನಾಯಿ: ಬೈಕ್​ನಿಂದ 1 ಲಕ್ಷ ರೂ.ಇದ್ದ ಹಣದ ಬ್ಯಾಗ್ ಕದ್ದೊಯ್ದ ನಾಯಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ಭಟ್ಕಳ ಮೂರಿನ್ ಕಟ್ಟೆ ವಿವಾದ: ಅಸಲಿಗೆ ಆಗಿದ್ದೇನೆಂಬ ಮಾಹಿತಿ ಕೊಟ್ಟ ಎಸ್ಪಿ
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!
ವಿದೇಶಿ ಪ್ರವಾಸ ಕೈಬಿಟ್ಟು ಸ್ವದೇಶಿ ಪ್ರವಾಸಕ್ಕೆ ಆದ್ಯತೆ ನೀಡಿ!
ಭಟ್ಕಳ ದುರಂತ: ಮನಕಲಕುವಂತಿದೆ ಜಲಸಮಾಧಿಯಾದ 11 ಮಂದಿಯ ಕುಟುಂಬದ ಕಥೆಗಳು
ಭಟ್ಕಳ ದುರಂತ: ಮನಕಲಕುವಂತಿದೆ ಜಲಸಮಾಧಿಯಾದ 11 ಮಂದಿಯ ಕುಟುಂಬದ ಕಥೆಗಳು