AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾದಿಂದ ಬೆಂಗಳೂರು ಸೇರಿ ನಾಲ್ಕು ಮಹಾನಗರಗಳಿಗೆ ಐಷಾರಾಮಿ ಬಸ್ ಸೇವೆ ಆರಂಭ: ಪ್ರಯಾಣದ ಸಮಯ, ಟಿಕೆಟ್​​ ದರದ ಬಗ್ಗೆ ಇಲ್ಲಿದೆ ಮಾಹಿತಿ

ಕೋಲ್ಕತ್ತಾದಿಂದ ಬೆಂಗಳೂರು, ದೆಹಲಿ, ಚೆನ್ನೈ ಹಾಗೂ ಪುರಿಗೆ ಐಷಾರಾಮಿ ಬಸ್ ಸೇವೆ ಆರಂಭವಾಗಿದೆ. ಈ ಬಸ್‌ಗಳು ಕರುಣಾಮಯಿ ಬಸ್ ಟರ್ಮಿನಸ್‌ನಿಂದ ಸಂಚಾರ ಆರಂಭಿಸಲಿದ್ದು, ಬಯೋ ಟಾಯ್ಲೆಟ್, ಒಟಿಟಿ ಸ್ಕ್ರೀನ್ ಸೇರಿದಂತೆ ಹಲವು ಸೌಲಭ್ಯಗಳು ಪ್ರಯಾಣಿಕರಿಗೆ ದೊರೆಯಲಿವೆ. ಟಿಕೆಟ್ ದರ ಮತ್ತು ಪ್ರಯಾಣದ ಸಮಯದ ಮಾಹಿತಿ ಇಲ್ಲಿದೆ.

ಕೋಲ್ಕತ್ತಾದಿಂದ ಬೆಂಗಳೂರು ಸೇರಿ ನಾಲ್ಕು ಮಹಾನಗರಗಳಿಗೆ ಐಷಾರಾಮಿ ಬಸ್ ಸೇವೆ ಆರಂಭ: ಪ್ರಯಾಣದ ಸಮಯ, ಟಿಕೆಟ್​​ ದರದ ಬಗ್ಗೆ ಇಲ್ಲಿದೆ ಮಾಹಿತಿ
ಕೋಲ್ಕತ್ತಾದಿಂದ ಬೆಂಗಳೂರಿಗೆ ಐಷಾರಾಮಿ ಬಸ್ ಸೇವೆ ಆರಂಭ
ಪ್ರಸನ್ನ ಹೆಗಡೆ
|

Updated on: Jul 15, 2026 | 5:34 PM

Share

ಮುಖ್ಯಾಂಶಗಳು

  • ಕೋಲ್ಕತ್ತಾದಿಂದ ಬೆಂಗಳೂರಿಗೆ ಐಷಾರಾಮಿ ಬಸ್​​ ಸೇವೆ ಆರಂಭ
  • ಬೆಂಗಳೂರು ಸೇರಿ 4 ಮಹಾನಗರಗಳಿಗೆ ಪ್ರತಿದಿನ ಬಸ್​​ ಸಂಚಾರ
  • ಮಾರ್ಗಗಳು, ಪ್ರಯಾಣ ದರ, ಸೌಲಭ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಕೋಲ್ಕತ್ತಾ, ಜುಲೈ 15: ಕೋಲ್ಕತ್ತಾದಿಂದ ದೂರ ಪ್ರಯಾಣ ಮಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು, ದೆಹಲಿ, ಚೆನ್ನೈ ಹಾಗೂ ಪುರಿಗೆ ಐಷಾರಾಮಿ ಬಸ್ ಸೇವೆ ಆರಂಭಿಸಲಾಗಿದೆ. ರೈಲು ಹಾಗೂ ವಿಮಾನ ಪ್ರಯಾಣಕ್ಕೆ ಪರ್ಯಾಯವಾಗಿ ಈ ಸೇವೆಯನ್ನು ಪರಿಚಯಿಸಲಾಗಿದೆ. ಈ ಬಸ್‌ಗಳು ಕರುಣಾಮಯಿ ಬಸ್ ಟರ್ಮಿನಸ್‌ನಿಂದ ಸಂಚಾರ ಆರಂಭಿಸಲಿದ್ದು, ವಾರದ ಎಲ್ಲಾ ದಿನಗಳಲ್ಲೂ ಸೇವೆ ಲಭ್ಯವಿರಲಿದೆ ಎಂದು ಸಂಸ್ಥೆ ತಿಳಿಸಿದೆ.

ಮಾರ್ಗಗಳು ಮತ್ತು ಪ್ರಯಾಣ ದರ

  • ಕೋಲ್ಕತ್ತಾ–ದೆಹಲಿ: ₹2,500 ರಿಂದ ₹3,000, ಸುಮಾರು 17 ಗಂಟೆಗಳ ಪ್ರಯಾಣ.
  • ಕೋಲ್ಕತ್ತಾ–ಬೆಂಗಳೂರು: ₹4,500, ಸುಮಾರು 35 ಗಂಟೆಗಳ ಪ್ರಯಾಣ.
  • ಕೋಲ್ಕತ್ತಾ–ಚೆನ್ನೈ: ₹4,700, ಸುಮಾರು 24 ಗಂಟೆಗಳ ಪ್ರಯಾಣ.
  • ಕೋಲ್ಕತ್ತಾ–ಪುರಿ (ವೋಲ್ವೋ ವಿಶೇಷ): ₹1,500 ರಿಂದ ₹2,000, ಸುಮಾರು 8 ಗಂಟೆಗಳ ಪ್ರಯಾಣ.

ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಬಂಡಾಯ ಬಣ ಸೇರಿದ ಟಿಎಂಸಿ ಹಿರಿಯ ನಾಯಕ ಮದನ್ ಮಿತ್ರ

ಪ್ರಯಾಣಿಕರಿಗೆ ಏನೆಲ್ಲ ಸೌಲಭ್ಯಗಳು ಲಭ್ಯ ?

ದೂರ ಪ್ರಯಾಣವನ್ನು ಆರಾಮದಾಯಕವಾಗಿಸಲು ಬಸ್‌ಗಳಲ್ಲಿ ಹಲವು ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಯೋ ಟಾಯ್ಲೆಟ್, ದಿಂಬು ಮತ್ತು ಹೊದಿಕೆ, ವೈಯಕ್ತಿಕ ಮನರಂಜನೆ ಪರದೆ (OTT ವೀಕ್ಷಣೆಯೊಂದಿಗೆ), ಕುಡಿಯುವ ನೀರು, ತಿಂಡಿ, ಚಹಾ ಮತ್ತು ಕಾಫಿ, ಮಿನಿ ಸ್ನ್ಯಾಕ್ ಬಾರ್

ಈ ಸೇವೆಗೆ ಸಾರಿಗೆ ಸಚಿವ ಅರ್ಜುನ್ ಸಿಂಗ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಚಾಲನೆ ನೀಡಿದ್ದಾರೆ.  ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಸೇವೆ ನೀಡುವುದು ನಮ್ಮ ಗುರಿ. ಸರ್ಕಾರಿ ಬಸ್‌ಗಳಿಂದ ಮಾತ್ರ ಸಮಗ್ರ ಸೇವೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ಸಂಸ್ಥೆಗಳ ಭಾಗವಹಿಸುವಿಕೆಯನ್ನು ನಾವು ಸ್ವಾಗತಿಸುತ್ತೇವೆ. ಖಾಸಗಿ ಬಸ್‌ಗಳಿಗೆ ಪರವಾನಗಿ ಮತ್ತು ಅನುಮತಿ ಪಡೆಯುವ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗುತ್ತಿದೆ ಎಂದು  ಶಮಿಕ್ ಭಟ್ಟಾಚಾರ್ಯ ತಿಳಿಸಿದ್ದಾರೆ.

ಹಿಂದಿನ ಸರ್ಕಾರದ ವಿರುದ್ಧ ಸಂಸ್ಥೆ ಆರೋಪ

ಖಾಸಗಿ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು, ಈ ಯೋಜನೆ ಹಲವು ವರ್ಷಗಳಿಂದ ಅನುಮತಿ ಸಿಗದೆ ವಿಳಂಬವಾಗಿತ್ತು ಎಂದು ಆರೋಪಿಸಿದ್ದಾರೆ. ಹಿಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಮಾರ್ಗಗಳಿಗೆ ಅನುಮತಿ ಪಡೆಯಲು ನಾಲ್ಕು ವರ್ಷಗಳ ಕಾಲ ಸಚಿವರ ಕಚೇರಿಗೆ ಅಲೆದಾಡಬೇಕಾಯಿತು. ಪ್ರತಿ ಹಂತದಲ್ಲೂ ಸಹಕಾರ ಸಿಗಲಿಲ್ಲ. ಕಡತಗಳು ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಸಾಗಲಿಲ್ಲ. ವಿವಿಧ ರೀತಿಯ ಒತ್ತಡಗಳು ಮತ್ತು ಪರೋಕ್ಷವಾಗಿ ಹಣದ ಬೇಡಿಕೆಯ ಸೂಚನೆಗಳು ಎದುರಾದವು. ಸರ್ಕಾರದ ಸಹಕಾರದ ಕೊರತೆಯಿಂದ ಸೇವೆ ಆರಂಭಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ದೂರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!