ಅಮೃತಾ ಎಂಬ ಹನ್ನೆರೆಡು ವರ್ಷದ ಬಾಲಕಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ನಮ್ಮ ತಂದೆ ಬೆಳಿಗ್ಗೆ ಎರಡು ಗಂಟೆಗೆ ಮನೆ ಬಿಡುತ್ತಾರೆ. ರಾತ್ರಿ ಒಂಬತ್ತಕ್ಕೆ ವಾಪಸ್ಸು ಬರುತ್ತಾರೆ. ನಾವು ತಂದೆ ಜೊತೆ ಕಾಲ ಕಳೆದಿದ್ದೇ ಅಪರೂಪ. ಈಗ ಮನೆಗೆ ಬಂದು ಸಾರಿಗೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಬೇಡಿಕೆ ಪೂರೈಕೆ ಆಗುವ ತನಕ ಹೋರಾಟ ನಿಲ್ಲದು ಎಂದು ಬಾಲಕಿ ದಿಟ್ಟ ನುಡಿ ನುಡಿದಿದ್ದಾರೆ.
ಈ ಮಧ್ಯೆ ಕರ್ನಾಟಕ ಸರ್ಕಾರ ಅತ್ಯವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013 ರಂತೆ ಎಸ್ಮಾ ಜಾರಿಗೂ ಚಿಂತನೆ ನಡೆಸಿದೆ. ಸಾರಿಗೆ ಇಲಾಖೆಯ ನೌಕರರಲ್ಲದಿದ್ದರೂ ನೌಕರರ ಸಂಘಟನೆಗಳ ಗೌರವಾಧ್ಯಕ್ಷರಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಸಾರಿಗೆ ನೌಕರರ ಕುಟುಂಬಸ್ಥರು ಡಿಸಿ ಕಚೇರಿ ಎದುರು ತಟ್ಟೆ ಲೋಡ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ:
ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಡಿಸಿ ಕಚೆರಿ ಮುಂದೆ ತಟ್ಟೆ ಲೋಟ ಬಡಿದು ಪ್ರತಿಭಟನೆ
( My Mother paid school fees by pledging her jewels says KSRTC Bus Employee’s daughter in Davangere)