ಸಜಾಬಂದಿ ಪ್ರಜ್ವಲ್ ರೇವಣ್ಣ ಬ್ಯಾರಕ್​ನಲ್ಲಿ ಸ್ಮಾರ್ಟ್​ಫೋನ್ ಪತ್ತೆ ಕೇಸ್​​: ಪೊಲೀಸರಿಗೇ ಮಾಜಿ ಸಂಸದನಿಂದ ಆವಾಜ್​​

ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್‌ನಲ್ಲಿ ಸ್ಮಾರ್ಟ್‌ಫೋನ್ ಪತ್ತೆಯಾದ ಪ್ರಕರಣದ ವಿಚಾರಣೆ ಸಂಬಂಧ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಪೊಲೀಸರಿಗೇ ಆವಾಜ್​​ ಹಾಕಿದ್ದಾರೆ ಎನ್ನಲಾಗಿದೆ. ನೀವು ಯಾರ ಜೊತೆ ಮಾತಾಡ್ತಿದ್ದೀರಾ ಅಂತಾ ಗೊತ್ತಾ ಎಂದು ಪ್ರಶ್ನಿಸಿರುವ ಬಗ್ಗೆ ವರದಿಯಾಗಿದ್ದು, ಕೋರ್ಟ್​​ಗೆ ಅಪೀಲ್​ ಹೋಗುತ್ತೇನೆ ಎಂದೂ ಪ್ರಜ್ವಲ್​​ ಹೇಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಸಜಾಬಂದಿ ಪ್ರಜ್ವಲ್ ರೇವಣ್ಣ ಬ್ಯಾರಕ್​ನಲ್ಲಿ ಸ್ಮಾರ್ಟ್​ಫೋನ್ ಪತ್ತೆ ಕೇಸ್​​: ಪೊಲೀಸರಿಗೇ ಮಾಜಿ ಸಂಸದನಿಂದ ಆವಾಜ್​​
ಪ್ರಜ್ವಲ್​​ ರೇವಣ್ಣ (ಫೈಲ್​​ ಚಿತ್ರ)
Image Credit source: PTI
Edited By:

Updated on: Sep 10, 2026 | 3:49 PM

ಬೆಂಗಳೂರು, ಸೆಪ್ಟೆಂಬರ್​​ 10: ಅತ್ಯಾಚಾರ ಕೇಸ್​​ನಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಇದ್ದ ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್​​ನಲ್ಲಿ ಮೊಬೈಲ್​​ ಪತ್ತೆ ಸಂಬಂಧ ತನಿಖೆ ಚುರುಕುಗೊಂಡಿದೆ. ಈ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ಪ್ರಜ್ವಲ್​​ ಬಾಲ ಬಿಚ್ಚಿದ್ದು, ಯಾರ ಜೊತೆಗೆ ಮಾತನಾಡ್ತಿದ್ದೀರಾ ನೀವು? ನಾನು ಮಾಜಿ ಸಂಸದ, ಮಾಜಿ ಪ್ರಧಾನಿ ಮೊಮ್ಮಗ. ಬೇಕಂತಲೆ ನನ್ನನ್ನು ಸಿಕ್ಕಿಸಲು ಯತ್ನಿಸುತ್ತಿದ್ದೀರ, ಬೇಲ್ ಕ್ಯಾನ್ಸಲ್ ಮಾಡಲು ಸಾಕಷ್ಟು ಪ್ರಯತ್ನ ಪಡುತ್ತಿದ್ದೀರ. ನಾನು ಏನೂ ಹೇಳಲ್ಲ, ಏನೂ ಮಾತಾಡಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಪೊಲೀಸರಿಗೇ ಪ್ರಜ್ವಲ್​​ ಹೇಳಿದ್ದಾರಂತೆ. ನಾನು ಕೋರ್ಟ್​​ಗೆ ಅಪೀಲ್​​ ಹೋಗ್ತೀನಿ ಎಂದೂ ಪ್ರಜ್ವಲ್​​ ತಿಳಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ

Prajwal Revanna Case: ಎರಡು ದಿನ ಪ್ರಜ್ವಲ್ ವಿಚಾರಣೆ ನಡೆಸಿದ ಪೊಲೀಸರು

ಜೈಲಿನ ಬ್ಯಾರಕ್​ನಲ್ಲಿ ​ ಮೊಬೈಲ್ ಬಳಸಿದ ಪ್ರಕರಣ ಸಂಬಂಧ ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ಪ್ರತಾಪ್ ರಾಯ್​​ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ 2ನೇ ಎಸಿಜೆಎಂ ನ್ಯಾಯಾಧೀಶರಾದ ಸಂದೀಪ್ ಪಾಟೀಲ್​​ ಆದೇಶಿಸಿದ್ದಾರೆ. 2 ದಿನ ಕಸ್ಟಡಿ ಅವಧಿ ಮುಕ್ತಾಯ ಹಿನ್ನೆಲೆ ಆರೋಪಿಗಳನ್ನು ಪೊಲೀಸರು ಕೋರ್ಟ್​​ಗೆ ಹಾಜರುಪಡಿಸಿದ್ದು, ಆ ವೇಳೆ ನ್ಯಾಯಾಲಯ ಈ ತೀರ್ಮಾನ ತೆಗೆದುಕೊಂಡಿದೆ.

ಇದನ್ನೂ ಓದಿ: ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ!

ಪ್ರತಿ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚನೆ ಹಿನ್ನೆಲೆ ಜೈಲಿನಲ್ಲಿರುವ ರೌಡಿಗಳು ಹೊರಗಿನ ರೌಡಿಗಳ ಜೊತೆ ಸಂಪರ್ಕದಲ್ಲಿರುವ ಮಾಹಿತಿ ಮತ್ತು ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಆರೋಪ ಹಿನ್ನೆಲೆ ಸಿಸಿಬಿ ಆಗಸ್ಟ್​​ 11ರಂದು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಮಾಜಿ ಸಂಸದ ಪ್ರಜ್ವಲ್​​ ರೇವಣ್ಣ ಇದ್ದ ಬ್ಯಾರಕ್​​ನಲ್ಲಿ ಮೊಬೈಲ್​​ ಪತ್ತೆಯಾಗಿತ್ತು. ಆ ಬಳಿಕ ತನಿಖೆಗಾಗಿ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ರಚನೆ ಮಾಡಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್​ನಲ್ಲಿ ಮೊಬೈಲ್ ಹೇಗೆ ಬಂತು? ಎಂಬ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Loading...
Unable to load recommendations.
Follow Us