AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿಗೆ ರಪ್​ ಅಂತ ಹೊಡೆದ ರ‍್ಯಾಪಿಡೋ ಬೈಕ್ ಚಾಲಕ: ಏಟಿಗೆ ರಸ್ತೆಗೆ ಬಿದ್ದಳು, ವಿಡಿಯೋ ವೈರಲ್

ಕರ್ನಾಟಕದಲ್ಲಿ ಅನೇಕ ದಿನದಿಂದ ಆಟೋ ಚಾಲಕರು ವರ್ಸಸ್ ಬೈಕ್ ಟ್ಯಾಕ್ಸಿಯವರ (Bike Taxi) ನಡುವಿನ ಗುದ್ದಾಟ ನಡೆಯುತ್ತಿತ್ತು. ಸದ್ಯ ಈಗ ಇದಕ್ಕೆಲ್ಲಾ ಇಂದಿನಿಂದ ಬ್ರೇಕ್ ಬಿದ್ದಿದೆ. ಹೈಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ ಅನಧಿಕೃತ ರ್ಯಾಪಿಡೋ, ಓಲಾ, ಊಬರ್ ಬೈಕ್ ಟ್ಯಾಕ್ಸಿ ಸ್ಥಗಿತವಾಗಿದ್ದು, ಈ ಸಂಬಂಧ ಬೆಂಗಳೂರಿನ ಹಲವೆಡೆ ಗಲಾಟೆಗಳು ನಡೆಯುತ್ತಿವೆ. ಇದರ ಮಧ್ಯೆ ರ್ಯಾಪಿಡೋ ಚಾಲಕ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಯುವತಿಗೆ ರಪ್​ ಅಂತ ಹೊಡೆದ ರ‍್ಯಾಪಿಡೋ ಬೈಕ್ ಚಾಲಕ: ಏಟಿಗೆ ರಸ್ತೆಗೆ ಬಿದ್ದಳು, ವಿಡಿಯೋ ವೈರಲ್
Rapido Driver
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on:Jun 16, 2025 | 3:20 PM

Share

ಬೆಂಗಳೂರು, (ಜೂನ್ 16): ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ (Rapido Driver) ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ (Bengaluru)ಜಯನಗರದಲ್ಲಿ ನಡೆದಿದೆ. ಚಾಲಕನ ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಯುವತಿ ಮೇಲೆ ಹಲ್ಲೆ ನಡೆಸಿದ್ದು, ಯುವತಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್ ಎನ್ನುವಾತ ಶ್ರೇಯಾ ಎನ್ನುವ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಜೂನ್ 14ರಂದು ಈ ಘಟನೆ ನಡೆದಿದೆ. ಆದ್ರೆ, ಇಂದು (ಜೂನ್ 16) ಈ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಜಯನಗರ ಪೊಲೀಸರು NCR ದಾಖಲಿಸಿಕೊಂಡು ಕೈತೊಳೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಶ್ರೇಯಾ ಅವರು ಆ ದಿನದಂದು ರ‍್ಯಾಪಿಡೋ ಸೇವೆ ಬಳಸಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನು ಅತಿ ವೇಗವಾಗಿ (ರ್ಯಾಶ್ ಡ್ರೈವಿಂಗ್) ವಾಹನ ಚಲಾಯಿಸುತ್ತಿದ್ದುದರಿಂದ, ಶ್ರೇಯಾ ಚಾಲಕನನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟಯಾಗಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಚಾಲಕ ಸುಹಾಸ್ ಯುವತಿ ರಪ್ ಅಂತ ಬಾರಿಸಿದ್ದದಾನೆ. ಹೊಡೆದ ಏಟಿಗೆ ಯುವತಿ ರಸ್ತೆಗೆ ಬಿದ್ದಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ
Image
ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ಶಾಕ್: ಹೈಕೋರ್ಟ್ ಹೇಳಿದ್ದೇನು?
Image
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಲ್ಲಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಆದೇಶ
Image
ಬೆಂಗಳೂರು ಬುಕಿಂಗ್ ಮಾಫಿಯಾ: ಟಿಪ್ಸ್ ಹೆಸರಲ್ಲಿ ದುಪ್ಪಟ್ಟು ಹಣ ವಸೂಲಿ
Image
ಸಿಹಿ ಸುದ್ದಿ ನೀಡಿದ ಅಮಿತ್​​ ಶಾ: ಓಲಾ-ಊಬರ್ ರೀತಿ ಸಹಕಾರಿ ಟ್ಯಾಕ್ಸಿ ಆರಂಭ

ಇದನ್ನೂ ಓದಿ: ‘ನಮ್ಮನ್ನು ಬ್ಯಾನ್​ ಮಾಡಬೇಡಿ’: ರಾಹುಲ್​ ಗಾಂಧಿ, ಸಿದ್ದರಾಮಯ್ಯಗೆ ಪತ್ರ ಬರೆದ ಬೈಕ್​​ ಟ್ಯಾಕ್ಸಿ ಅಸೋಸಿಯೇಷನ್

ಪೊಲಿಸರ ನಿರ್ಲಕ್ಷ್ಯ ಆರೋಪ

ಇನ್ನು ಈ ಗಂಭೀರ ಘಟನೆ ನಡೆದ ನಂತರವೂ ಮಹಿಳೆ ಹೋಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಸಂಪೂರ್ಣವಾಗಿ ವಿಡಿಯೋ ಸಮೇತ ಮಾಹಿತಿ ಪಡೆದುಕೊಂಡ ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಎನ್‌ಸಿಆರ್ (Non-Cognizable Report) ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ.

ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಚಾಲಕ

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಶ್ರೇಯಾ ಮೇಲೆ ಹಲ್ಲೆ ಮಾಡಿದ ಬೈಜ್ ಟ್ಯಾಕ್ಸಿ ಚಾಲಕ ಸುಹಾಸ್ ಪ್ರತಿಕ್ರಿಯಿಸಿದ್ದು, ಮೊದಲು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು ಆ ಯುವತಿ. ಶರ್ಟ್ ಕಟ್ ನಲ್ಲಿ ಬಂದೆ ಅಂತ ಅರ್ಧ ದಾರಿಯಲ್ಲಿ ನಿಲ್ಲಿಸಿ ಇಂಗ್ಲಿಷ್ ನಲ್ಲಿ ಬೈದ್ರು. ನಾನು ಐದು ವರ್ಷದಿಂದ ರ್ಯಾಪಿಡೋ ಓಡಿಸುತ್ತಿದ್ದೇನೆ. ದಾರಿ ಗೊತ್ತು ಅಂದೆ. ಬಳಿಕ ಗಾಡಿ‌ ನಿಲ್ಲಿಸಿ ಇಂಗ್ಲಿಷ್‌ನಲ್ಲಿ ನನಗೆ ಕೆಟ್ಟದಾಗಿ ಬೈದರು. ಟಿಫಿನ್ ಬಾಕ್ಸ್ ನಿಂದ ಹೊಡೆದ್ರು. ಅಷ್ಟು ಜನರ ಮುಂದೆ ಹೊಡೆದಾಗ ಸಿಟ್ಟಲ್ಲಿ‌ ನಾನು ಹೊಡೆದೆ ಎಂದು ಸ್ಪಷ್ಟಪಡಿಸಿದ್ದಾನೆ.

ಆಮೇಲೆ ಯುವತಿ ಕೆಲಸ ಮಾಡುವ ಅಂಗಡಿಗೆ ಹೋಗಿ ಮ್ಯಾನೇಜರ್ ಗೆ ದೂರು ನೀಡಿದೆ . ಅದಕ್ಕೆ ಮ್ಯಾನೇಜರ್ ಅಂದರು ಅವಳು ಸೈಕೋ, ಇಲ್ಲೂ ಹುಚ್ಚುಚ್ಚಾಗಿ ಇರ್ತಾಳೆ ಅಂದ್ರು. ಅದಕ್ಕೆ ನಾನು ವಾಪಸ್ ಬಂದೆ. ಈಗ ವಿಡಿಯೋ ವೈರಲ್ ಆದ್ಮೇಲೆ ಪೊಲೀಸರು ಕಾಲ್ ಮಾಡಿದ್ರು. ತನಿಖೆಗೆ ಸಹಾಕರ ನೀಡುತ್ತೇನೆ ಎಂದು ತಿಳಿಸಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:20 pm, Mon, 16 June 25