ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ; ಎಲ್ಲೂ ಆ್ಯಸಿಡ್ ಸಿಗದಂತೆ ಸರ್ಕಾರಕ್ಕೆ ಮನವಿ ಮಾಡಿದ ಸಂತ್ರಸ್ಥ ಯುವತಿ
ನಾನು ಬಹುತೇಕ ಗುಣಮುಖವಾಗಿದ್ದು, ತುಂಬಾ ನೋವು ಪಟ್ಟಿದ್ದೇನೆ ಎಂದು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥ ಯುವತಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಬೆಂಗಳೂರು: ನಾನು ಬಹುತೇಕ ಗುಣಮುಖವಾಗಿದ್ದು, ತುಂಬಾ ನೋವು ಪಟ್ಟಿದ್ದೇನೆ ಎಂದು ಬೆಂಗಳೂರಿನ (Bengaluru) ಸುಂಕದಕಟ್ಟೆಯಲ್ಲಿ ಆ್ಯಸಿಡ್ (Acid) ದಾಳಿಗೊಳಗಾದ ಸಂತ್ರಸ್ಥ ಯುವತಿ ತಮ್ಮ ನೋವು ತೋಡಿಕೊಂಡಿದ್ದಾರೆ. ಸರ್ಕಾರಕ್ಕೆ ಒಂದು ಮನವಿ ಮಾಡುತ್ತೇನೆ. ಎಲ್ಲೂ ಆ್ಯಸಿಡ್ ಸಿಗಬಾರದು. ಯಾರಿಗೂ ಈ ಸ್ಥಿತಿ ಬೇಡ. ನನಗಾದ ನೋವು ಯಾವ ಹೆಣ್ಣಿಗೂ ಬೇಡ ಎಂದು ಹೇಳಿದ್ದಾರೆ.
ನಾನು ಕಾನೂನು ಮೂಲಕ ಆರೋಪಿಗೆ ಕಠಿಣ ಶಿಕ್ಷೆ ಕೊಡುವಂತೆ ಮಾಡುತ್ತೇನೆ. ಆ್ಯಸಿಡ್ ದಾಳಿ ನಡೆದ ದಿನ ನಾನು ಆಫೀಸ್ ಗೆ ಹೋಗಿದ್ದೆ. ಅಪ್ಪ ನನ್ನನ್ನು ಡ್ರಾಪ್ ಮಾಡಿದರು. ಅಮೇಲೆ ನಾನು ಮೇಲೆ ಹೋಗಿದ್ದೆ. ಯಾರೊ ಹಿಂದಿನಿಂದ ಕರೆದಂತೆ ಆಯ್ತು. ಆವಾಗ ನೋಡಿದರೆ ಈ ನಾಗೇಶ್ ಕೈನಲ್ಲಿ ಗ್ಲೌಸ್ನಲ್ಲಿ ಆ್ಯಸಿಡ್ ಹಿಡಿದು ನಿಂತಿದ್ದನು. ನಂತರ ನಾನು ಮುಂದೆ ಬಂದೆ ತನ್ನ ಜುಟ್ಟು ಹಿಡಿದು ಎಳೆದು ಆ್ಯಸಿಡ್ ಹಾಕಿದ. ನಂತರ ಕಿರುಚಾಡಿದೆ ಎಂದು ದಾಳಿಯ ದಿನದ ಘಟನೆಯನ್ನು ವಿವರಿಸಿದರು.
ನಡೆದಿದ್ದೇನು?
ಎಪ್ರಿಲ್ 28ರಂದು ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಬೆಂಗಳೂರಿನ ಸುಂಕದಕಟ್ಟೆ ಮುತ್ತೂಟ್ ಫಿನ್ಕಾರ್ಪ್ ಬಳಿ ಆರೋಪಿ ನಾಗೇಶ್ ಆ್ಯಸಿಡ್ ಹಾಕಿ ವಿಕೃತಿ ಮೆರೆದಿದ್ದನು. ನಾಗೇಶ್ ಎಂಬಾತ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದಿದ್ದನು.
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದನು. ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಹೆಗ್ಗನಹಳ್ಳಿ ನಿಯಾಸಿಯಾಗಿದ್ದು. ನಾಗೇಶ್ ಹೆಗ್ಗನಹಳ್ಳಿಯಲ್ಲಿಯೇ ಬಾಡಿಗೆಗೆ ಇದ್ದನು. ಯುವತಿ ಎಂ ಕಾಂ ವಿದ್ಯಾಭ್ಯಾಸ ಮಾಡಿದ್ದಾಳೆ. ಇತ್ತೀಚೆಗೆ ಮುತೂಟ್ ಫಿನ್ಕಾರ್ಪ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. 8 ರಿಂದ 9 ತಿಂಗಳಿಂದ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದಳು. ನಾಗೇಶ್ ಪ್ರೀತಿ ಮಾಡುವಂತೆ ಯುವತಿ ಹಿಂದೆ ಬಿದ್ದಿದ್ದನು.
ಆದರೆ ಯುವತಿ ನೀನು ನನಗೆ ಅಣ್ಣನ ರೀತಿ ಎಂದಿದ್ದಳಂತೆ. ಆದರೂ ಮಾತು ಕೇಳದೇ ಪೀಡಿಸುತ್ತಿದ್ದನಂತೆ. ಎಪ್ರಿಲ್ 28ರ ಬೆಳಗ್ಗೆ ಕೆಲಸಕ್ಕೆ ಬಂದ ಯುವತಿಯನ್ನು ನಾಗೇಶ್ ಫಾಲೊ ಮಾಡಿಕೊಂಡು ಬಂದಿದ್ದನು. ಮತ್ತೆ ಪ್ರೀತಿ ಮಾಡುವಂತೆ ಪೀಡಿಸಿದ್ದನು. ಒಪ್ಪದಿದ್ದಾಗ ಆ್ಯಸಿಡ್ ಎರಚಿದ್ದಾನೆ.
ಆರೋಪಿ ನಾಗೇಶ್ನ ಬಂಧನ
ಆಸಿಡ್ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್ನನ್ನು ಪೊಲೀಸರು ಮೇ 13 ರಂದು 16 ದಿನಗಳ ಬಳಿಕ ಬಂಧಿಸಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಆರೋಪಿ ನಾಗೇಶ್ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ತಿರುವಣ್ಣಾಮಲೈನ ರಮಣಾ ಆಶ್ರಮದಲ್ಲಿ ಕಾವಿ ಬಟ್ಟೆ ಧರಿಸಿ ತಲೆಮರೆಸಿಕೊಂಡಿದ್ದನು. ನಾನು ಸ್ವಾಮೀಜಿ ಎಂದು ಆಶ್ರಮದಲ್ಲಿ ಹೇಳಿಕೊಂಡಿದ್ದನು. ಆಶ್ರಮದಲ್ಲಿ ಸಾವಿರಾರು ಜನರು ಇದ್ದಿದ್ದಕ್ಕೆ ನಾನು ಬಂದಿದ್ದೇನೆ. ಆಶ್ರಮಕ್ಕೆ ಬಂದು ತಲೆಮರೆಸಿಕೊಂಡಿದ್ದಾಗಿ ಪೊಲೀಸರ ವಿಚಾರಣೆಯ ವೇಳೆ ನಾಗೇಶ್ ಮಾಹಿತಿ ನೀಡಿದ್ದಾನೆ.
ಭಕ್ತರ ಸೋಗಿನಲ್ಲಿ ಹೋಗಿ ಸ್ವಾಮೀಜಿ ವೇಷದಲ್ಲಿದ್ದ ಆರೋಪಿ ಬಂಧನ ಕಾವಿ ಬಟ್ಟೆ ಧರಿಸಿ ಆಶ್ರಮದಲ್ಲಿ ತಲೆಮರೆಸಿಕೊಂಡಿದ್ದ ನಾಗೇಶ್ನನ್ನು ಹಿಡಿಯಲು ಭಕ್ತರ ವೇಷದಲ್ಲಿ ಮಫ್ತಿಯಲ್ಲಿ ಪೊಲೀಸರು ಆಶ್ರಮಕ್ಕೆ ತೆರಳಿದ್ದರು. ಭಕ್ತರ ವೇಷದಲ್ಲಿ ತೆರಳಿ ಸ್ವಾಮೀಜಿ ವೇಷದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ದೋಷಾರೋಪ ಪಟ್ಟಿ ಸಲ್ಲಿಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಕೆ ನಡೆಸಿ ಆಗಸ್ಟ 9 ರಂದು ಮೂರು ತಿಂಗಳ ನಂತರ 13ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಾಥಮಿಕ ಚಾರ್ಜ್ಶೀಟ್ ಒಟ್ಟು 770 ಪುಟಗಳಿವೆ. ದೋಷಾರೋಪ ಪಟ್ಟಿಯಲ್ಲಿ ಒಟ್ಟು 92 ಸಾಕ್ಷಿಗಳನ್ನು ಪೊಲೀಸರು ಹೆಸರಿಸಿದ್ದಾರೆ. ಇದರೊಂದಿಗೆ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಐಪಿಸಿ 164ರ ಅಡಿಯಲ್ಲಿ ದಾಖಲಿಸಲಾಗಿದೆ.
ಘಟನೆಯ ಪ್ರತ್ಯಕ್ಷದರ್ಶಿಗಳು ಐಪಿಸಿ 164ರ ಅಡಿಯಲ್ಲಿ ವಿಚಾರಣಾ ನ್ಯಾಯಾಧೀಶರ ಹೊರತಾದ ಪ್ರತ್ಯೇಕ, ಸ್ವತಂತ್ರ ನ್ಯಾಯಾಧೀಶರ ಎದುರು ಸ್ವಯಂ ಪ್ರೇರಣೆಯಿಂದ ಸಾಕ್ಷಿಗಳು ತಮ್ಮ ಹೇಳಿಕೆ ದಾಖಲಿಸುತ್ತಾರೆ. ಈ ಕಲಂ ಅಡಿಯಲ್ಲಿ ಸಾಕ್ಷಿ ನುಡಿಯುವ ಪ್ರಕ್ರಿಯೆ ಗೌಪ್ಯವಾಗಿರುತ್ತದೆ. ಮಾತ್ರವಲ್ಲ ವಿಡಿಯೊ ಚಿತ್ರೀಕರಣದ ಮೂಲಕವೂ ದಾಖಲಾಗುತ್ತದೆ. ಕಾನೂನು ಪ್ರಕ್ರಿಯೆಯಲ್ಲಿ ಐಪಿಸಿ 164 ಅಡಿಯಲ್ಲಿ ದಾಖಲಿಸುವ ಸಾಕ್ಷಿಗೆ ತನ್ನದೇ ಆದ ಮಹತ್ವವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ