Shanti Nagar Election Results: ಶಾಂತಿನಗರ ಕ್ಷೇತ್ರದಲ್ಲಿ ಹ್ಯಾರಿಸ್ಗೆ ನಾಲ್ಕನೆ ಬಾರಿಗೆ ಗೆಲುವು
Shanti Nagar Assembly Election Result 2023 Live Counting Updates: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ - ಎನ್.ಎ. ಹ್ಯಾರಿಸ್ಗೆ ನಾಲ್ಕನೆ ಬಾರಿಗೆ ಗೆಲುವು ದಕ್ಕಿದೆ.

Shanti Nagar Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections 2023) ಫಲಿತಾಂಶ ಪ್ರಕಟಗೊಂಡಿದೆ. ಮೇ 10 ರಂದು ನಡೆದ ಮತದಾನದಲ್ಲಿ ಶಾಂತಿನಗರ ಕ್ಷೇತ್ರದಲ್ಲಿ (Shanti Nagar Assembly Elections 2023) ಶೇ. 48.09ರಷ್ಟು ಮತದಾನವಾಗಿತ್ತು. ಶಾಂತಿನಗರ ಕ್ಷೇತ್ರದಲ್ಲಿ ಎನ್.ಎ. ಹ್ಯಾರಿಸ್ಗೆ ನಾಲ್ಕನೆ ಬಾರಿಗೆ ಗೆಲುವು ದಕ್ಕಿದೆ.
ಕಾಸ್ಟೋಪಾಲಿಟನ್ ವಿಧಾನಸಭಾ ಕ್ಷೇತ್ರ ಶಾಂತಿನಗರದಲ್ಲಿ ಚುನಾವಣಾ ಕಣ ರಂಗೇರಿತ್ತು. ಹಿಂದಿನ 3 ಚುನಾವಣೆಗಳಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಹುರಿಯಾಳು ‘ಹ್ಯಾಟ್ರಿಕ್ ಹ್ಯಾರಿಸ್’ ಜಯದ ಓಟ ಮುಂದುವರಿಸಿದ್ದಾರೆ. ಸತತ ಸೋಲಿನ ಹೊರತಾಗಿಯೂ ಪುಟವೇಳಲು ಬಿಜೆಪಿ ತವಕಿಸಿತ್ತು. ಶಾಂತಿನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಿವೆ. 1957ರಲ್ಲಿ ರಚನೆಯಾದ ಕ್ಷೇತ್ರವು ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಜೆಎನ್‌ಪಿ ಸೇರಿದಂತೆ ಹಲವು ಪಕ್ಷಗಳಿಗೆ ಸೋಲು ಗೆಲುವಿನ ರುಚಿ ತೋರಿಸಿದೆ. ಹಿಂದಿನಿಂದಲೂ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕ್ಷೇತ್ರವು ಪುನರ್ ವಿಂಗಡಣೆಗೂ ಮುನ್ನ ಒಮ್ಮೆ ಬಿಜೆಪಿಗೆ ಒಲಿದಿತ್ತು. ನಂತರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿ ಸಿರುವ ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಮತ್ತೊಂದು ಜಯ ಸಾಧಿಸಿದ್ದಾರೆ.
ಕಣದಲ್ಲಿ ಕೆಎಎಸ್ ಅಧಿಕಾರಿ ಮಥಾಯಿ ಸ್ಪರ್ಧಿ:
ಕ್ಷೇತ್ರದ ಒಂದೆಡೆ ಸಿರಿವಂತಿಕೆಯ ದರ್ಬಾರು ಕಂಡು ಬಂದರೆ, ಮತ್ತೊಂದೆಡೆ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಜನ ಕಾಣಸಿಗುತ್ತಾರೆ. ಬಹು ಭಾಷಿಕರ ಹಾಗೂ ಬಹು ಕೋಟಿ ವ್ಯಾಪಾರದ ನೆಲದಲ್ಲಿ ಕಾಂಗ್ರೆಸ್ ಆಳವಾಗಿ ಬೇರೂರಿದೆ. ಕಾಂಗ್ರೆಸ್ ಪ್ರಾಬಲ್ಯದ ಶಾಂತಿನಗರದಲ್ಲಿ ಬಿಜೆಪಿಯು ಗೆಲುವಿನ ಮಾಯಾ ಜಿಂಕೆಯ ಬೆನ್ನತ್ತಿದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಕೆ. ಶಿವಕುಮಾರ್, ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲು ಬೆವರು ಹರಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಅದೃಪ್ಪ ಪರೀಕ್ಷೆಗೆ ಇಳಿದಿರುವ ನಿವೃತ್ತ ಕೆಎಎಸ್ ಅಧಿಕಾರಿ ಕೆ. ಮಥಾಯಿ ಕಣದಲ್ಲಿ ಒಂದಿಷ್ಟು ಸದ್ದು ಮಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸ್ಪರ್ಧೆಗಷ್ಟೇ ಸೀಮಿತವಾದಂತಿದೆ.
ಜಾತಿ ಬಲಾಬಲ ಕನ್ನಡಿಗರು, ತಮಿಳರು, ತೆಲುಗರು, ಮಲಯಾಳಿಗಳು ಸೇರಿದಂತೆ ನಾನಾ ಭಾಷಿಗರು ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರು, ಕ್ರಿಶ್ಚಿಯನ್ನರು ಹಾಗೂ ಇತರ ಭಾಷಿಕ ಮತದಾರರು ನಿರ್ಣಾಯಕರು. ಸುಮಾರು 45 ಸಾವಿರ ಮುಸ್ಲಿಂ ಹಾಗೂ 35 ಸಾವಿರ ತಮಿಳು ಭಾಷಿಕ ಮತದಾರರಿದ್ದಾರೆ. ಉಳಿದಂತೆ 25 ಸಾವಿರ ಕುರುಬ, 20 ಸಾವಿರ ಪರಿಶಿಷ್ಟ, 20 ಸಾವಿರ ತೆಲುಗು ಭಾಷಿಕ, 15 ಸಾವಿರ ಮಲಯಾಳಂ ಭಾಷಿಕ ಮತದಾರರಿದ್ದಾರೆ. ಜತೆಗೆ, 15 ಸಾವಿರ ಬ್ರಾಹ್ಮಣ, 8 ಸಾವಿರ ಲಿಂಗಾಯತ, 4 ಸಾವಿರ ದೇವಾಂಗ ಮತ್ತು 3 ಸಾವಿರ ಮಂದಿ ಒಕ್ಕಲಿಗ ಮತದಾರರಿದ್ದಾರೆ.
Published On - 4:18 am, Sat, 13 May 23




