Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬ: ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಸಂಚಾರ

ಹೋಳಿ ಹಬ್ಬದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆ ಬೆಂಗಳೂರಿನ ಎಸ್.ಎಂ.ವಿ.ಟಿ. ನಿಲ್ದಾಣ ಮತ್ತು ಕಲಬುರಗಿ ನಡುವೆ ಎರಡು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಮಾರ್ಚ್ 13 ಮತ್ತು 14 ರಂದು ಬೆಂಗಳೂರಿನಿಂದ ಹಾಗೂ ಮಾರ್ಚ್ 14 ಮತ್ತು 15 ರಂದು ಕಲಬುರಗಿಯಿಂದ ರೈಲುಗಳು ಹೊರಡಲಿವೆ. ಪ್ರಯಾಣಿಕರು ಆನ್‌ಲೈನ್ ಅಥವಾ 139 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಹೋಳಿ ಹಬ್ಬ: ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಸಂಚಾರ
ಕಲಬುರಗಿ ರೈಲು ನಿಲ್ದಾಣ
Follow us
ವಿವೇಕ ಬಿರಾದಾರ
|

Updated on: Mar 07, 2025 | 7:26 AM

ಕಲಬುರಗಿ, ಮಾರ್ಚ್​ 07: ಹೋಳಿ ಹಬ್ಬದ (Holi Festival) ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ಬೆಂಗಳೂರಿನ ಸರ್​ ಎಂ ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಕಲಬುರಗಿ ನಿಲ್ದಾಣಗಳ (Kalaburagi Railway Station) ನಡುವೆ ಎರಡು ಟ್ರಿಪ್ ವಿಶೇಷ ರೈಲುಗಳನ್ನು (Train) ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ವಿಶೇಷ ರೈಲುಗಳು

ರೈಲು ಸಂಖ್ಯೆ 06519: ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ವಿಶೇಷ ಎಕ್ಸ್​​ಪ್ರೆಸ್ ರೈಲು ಮಾರ್ಚ್ 13 ಮತ್ತು 14 ರಂದು ರಾತ್ರಿ 9.15 ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುತ್ತದೆ. ಈ ರೈಲು ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣಾ ಯಾದಗಿರಿ, ಶಹಾಬಾದ್ ನಿಲ್ದಾಣಗಳ ಮೂಲಕ ಮರುದಿನ ಬೆಳಗ್ಗೆ 7.40 ಕ್ಕೆ ಕಲಬುರಗಿ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ಪುನಃ ಇದೇ ರೈಲು 06520 ಕಲಬುರಗಿಯಿಂದ ಮಾರ್ಚ್ 14 ಮತ್ತು 15 ರಂದು ಬೆಳಿಗ್ಗೆ 9.35 ಕ್ಕೆ ಹೊರಡಲಿರುವ ರೈಲು ಇದೇ ಮಾರ್ಗವಾಗಿ, ಅದೇ ದಿನ ರಾತ್ರಿ 8 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ಇದನ್ನೂ ಓದಿ
Image
ಪ್ರಯಾಣಿಕರ ಗಮನಕ್ಕೆ: ಬೆಳಗಾವಿ-ಮಿರಜ್ ರೈಲು ಸಂಚಾರ ಭಾಗಶಃ ರದ್ದು
Image
ಬೆಂಗಳೂರು ಭುವನೇಶ್ವರ ವಿಶೇಷ ರೈಲು ಟ್ರಿಪ್ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
Image
ರಾಜ್ಯದ ಕೆಲ ರೈಲುಗಳ ಸಂಚಾರ ಭಾಗಶಃ ರದ್ದು, ಮಾರ್ಗ ಬದಲಾವಣೆ
Image
ನಿಮ್ಮನ್ನು ಅಚ್ಚರಿಗೊಳಿಸುವ ಭಾರತದ 7 ಅತ್ಯಂತ ಸುಂದರ ರೈಲು ಮಾರ್ಗಗಳಿವು

ಈ ರೈಲಿನಲ್ಲಿ 02 ಜನರಲ್ ಸೆಕೆಂಡ್ ಕ್ಲಾಸ್, 10 ಸ್ಲಿಪರ್ ಕ್ಲಾಸ್, 5 ಎಸಿ ತ್ರಿ ಟೈಯರ್, 02 ಎಸಿ ಟು ಟೈಯರ್ ಮತ್ತು 2 ಎಸ್‌ಎಲ್‌ಆ‌ರ್ ಡಿ ಸೇರಿದಂತೆ 21 ಬೋಗಿಗಳು ಇರಲಿವೆ.

ಪ್ರಯಾಣಿಕರು ಅಧಿಕೃತ ವೆಬೈಟ್ (www.enquiry.indianrail.gov.in) ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನದ ಸಮಯವನ್ನು ಪರಿಶೀಲಿಸಬಹುದು.

ಇದನ್ನೂ ಓದಿ: ಬುಲೆಟ್ ರೈಲು ಕಾರ್ಮಿಕರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಂಡ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರು ಪೂರ್ವ ನಿಲ್ದಾಣ ಬಂದ್​

ಬೆಂಗಳೂರು ಪೂರ್ವ ನಿಲ್ದಾಣವನ್ನು ಮಾರ್ಚ್ 13 ರಿಂದ ಪ್ರಯಾಣಿಕರ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಪ್ರಸ್ತುತ ಅಪ್ ಮತ್ತು ಡೌನ್ ಲೈನ್ ಪ್ಲಾಟ್ಫಾರ್ಮ್​ಗಳನ್ನು ತೆಗೆದುಹಾಕಿ ಮೂರನೇ ಮತ್ತು ನಾಲ್ಕನೇ ಮಾರ್ಗಗಳಿಗೆ ಹೊಸ ಹಳಿಗಳನ್ನು ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿಗಳಿಂದಾಗಿ, ಮಾರ್ಚ್ 13 ರಿಂದ ಮುಂದಿನ ಸೂಚನೆಯವರೆಗೆ ಒಟ್ಟು 41 ರೈಲುಗಳ ನಿಲುಗಡೆಗಳನ್ನು ಬೆಂಗಳೂರು ಪೂರ್ವ ನಿಲ್ಯಾಣದಲ್ಲಿ ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತದೆ.

15 ಎಕ್ಸಪ್ರೆಸ್ ರೈಲುಗಳು:

  1. ರೈಲು ಸಂಖ್ಯೆ 16522 ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ
  2. ರೈಲು ಸಂಖ್ಯೆ 16021 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು
  3. ರೈಲು ಸಂಖ್ಯೆ 16220 ತಿರುವತಿ-ಚಾಮರಾಜನಗರ
  4. ರೈಲು ಸಂಖ್ಯೆ 12657 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು
  5. ರೈಲು ಸಂಖ್ಯೆ 16231 ಕಡಲೂರು ಪೋರ್ಟ್-ಮೈಸೂರು
  6. ರೈಲು ಸಂಖ್ಯೆ 11301 ಸಿಎಸ್‌ಎಂಟಿ ಮುಂಬೈ ಕೆಎಸ್‌ಆರ್ ಬೆಂಗಳೂರು
  7. ರೈಲು ಸಂಖ್ಯೆ 16235 ತೂತುಕುಡಿ-ಮೈಸೂರು
  8. ರೈಲು ಸಂಖ್ಯೆ 12785 ಕಾಚಿಗುಡ-ಮೈಸೂರು
  9. ರೈಲು ಸಂಖ್ಯೆ 16525 ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು
  10. ರೈಲು ಸಂಖ್ಯೆ 16519 ಜೋಲಾರ್‌ಪೇಟ್ಸ್-ಕೆಎಸ್‌ಆರ್ ಬೆಂಗಳೂರು
  11. ರೈಲು ಸಂಖ್ಯೆ 18463 ಭುವನೇಶ್ವರ-ಕೆಎಸ್‌ಆರ್ ಬೆಂಗಳೂರು
  12. ರೈಲು ಸಂಖ್ಯೆ 12609 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು
  13. ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್-ಕೋಯಂಬತ್ತೂರು
  14. ರೈಲು ಸಂಖ್ಯೆ 16521 ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು
  15. ರೈಲು ಸಂಖ್ಯೆ 12577 ದರ್ಭಾಂಗ-ಮೈಸೂರು

ಪ್ಯಾಸೆಂಜರ್/ಮೆಮು ರೈಲುಗಳು:

  1. ರೈಲು ಸಂಖ್ಯೆ 06595 ಕೆಎಸ್‌ಆರ್ ಬೆಂಗಳೂರು-ಧರ್ಮಾವರಂ
  2. ರೈಲು ಸಂಖ್ಯೆ 66546 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ
  3. ರೈಲು ಸಂಖ್ಯೆ 66581 ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ
  4. ರೈಲು ಸಂಖ್ಯೆ 66511 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ
  5. ರೈಲು ಸಂಖ್ಯೆ 66583 ಕೆಎಸ್‌ಆರ್ ಬೆಂಗಳೂರು-ಧರ್ಮಪುರಿ
  6. ರೈಲು ಸಂಖ್ಯೆ 66556 ಕೆಎಸ್‌ಆರ್ ಬೆಂಗಳೂರು-ಮಾರಿಕುಪ್ಪಂ
  7. ರೈಲು ಸಂಖ್ಯೆ 66587 ಬೆಂಗಳೂರು ಕಂಟೋನ್ವೆಂಟ್. ಕೋಲಾರ
  8. ರೈಲು ಸಂಖ್ಯೆ 66591 ಕೆಎಸ್‌ಆರ್ ಬೆಂಗಳೂರು-ಕೋಲಾರ
  9. ರೈಲು ಸಂಖ್ಯೆ 66559 ಕೆಎಸ್‌ಆರ್ ಬೆಂಗಳೂರು-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ
  10. ರೈಲು ಸಂಖ್ಯೆ 66550 ಕೆಎಸ್‌ಆರ್ ಬೆಂಗಳೂರು-ಜೋಲಾರ್‌ಪೇಟೆ
  11. ರೈಲು ಸಂಖ್ಯೆ 66542 ಕೆಎಸ್‌ಆರ್ ಬೆಂಗಳೂರು-ವೈಟ್​​ಫೀಲ್ಡ್​
  12. ರೈಲು ಸಂಖ್ಯೆ 66530 ಕೆಎಸ್‌ಆರ್ ಬೆಂಗಳೂರು-ಬಂಗಾರಪೇಟೆ
  13. ರೈಲು ಸಂಖ್ಯೆ 66519 ಮಾರಿಕುಪ್ಪಂ-ಕೆಎಸ್‌ಆರ್​ ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ