ಬೇಸಿಗೆ ಜೊತೆಗೆ ಮಕ್ಕಳಲ್ಲಿ ಶುರುವಾಯ್ತು ಇನ್ಫೆಕ್ಷನ್ ಹಾವಳಿ: ಪೋಷಕರಿಗೆ ವೈದ್ಯರ ಸಲಹೆ ಏನು?
ಬೆಂಗಳೂರಿನಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತಿದ್ದು, ಮಕ್ಕಳು ಬಿಸಿಲು ಸಂಬಂಧಿತ ಅನಾರೋಗ್ಯಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಕ್ಯಾಂಡಿಡಾ, ಫಂಗಲ್, ವೈರಲ್ ಮತ್ತು ಚರ್ಮದ ಸೋಂಕುಗಳು ಹೆಚ್ಚಾಗುತ್ತಿವೆ. ಹೆಚ್ಚು ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಮುಖ್ಯ. ಪೋಷಕರು ಎಚ್ಚರಿಕೆಯಿಂದಿರುವಂತೆ ವೈದ್ಯರ ಸಲಹೆಯಾಗಿದೆ.

ಬೆಂಗಳೂರು, ಫೆಬ್ರವರಿ 26: ಬೇಸಿಗೆ ಶುರುವಾಗುತ್ತಿದ್ದಂತೆ ಮಕ್ಕಳೇ (Children’s) ಫಸ್ಟ್ ಟಾರ್ಗೆಟ್ ಆಗುತ್ತಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಈಗಾಗಲೇ ಕೊಂಚ ಪ್ರಮಾಣದಲ್ಲಿ ರಾಜಧಾನಿಯಲ್ಲಿ ತಾಪಮಾನ ಏರಿಕೆ ಕಂಡಿದೆ. ಮುಂದಿನ ಕೆಲ ದಿನ ಇದೇ ರೀತಿಯ ಗರಿಷ್ಠ ಬಿಸಿಲು ಇರಲಿದೆ ಸದ್ಯ ಬೇಸಿಗೆ ಆರಂಭದ ಜೊತೆ ಜೊತೆಗೆ ಪುಟಾಣಿ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿವೆ.
ಮಕ್ಕಳಲ್ಲಿ ನಾನಾ ಇನ್ಫೆಕ್ಷನ್
ಬೇಸಿಗೆ ಜೊತೆಗೆ ಮಕ್ಕಳಲ್ಲಿ ನಾನಾ ಇನ್ಫೆಕ್ಷನ್ಗಳು ಶುರುವಾಗಿದೆ. ಕ್ಯಾಂಡಿಡಾ ಇನ್ಫೆಕ್ಷನ್, ಫಂಗಲ್ ಇನ್ಫೆಕ್ಷನ್, ವೈರಲ್ ಇನ್ಫೆಕ್ಷನ್, ಸ್ಕಿನ್ ಇನ್ಫೆಕ್ಷನ್, ಡೈಯೆರಿಯಾ ಸೇರಿದಂತೆ ನಾನಾ ಆರೋಗ್ಯದ ಸಮಸ್ಯೆಗಳು ಕಂಡು ಬರುತ್ತಿವೆ. ಫಂಗಲ್, ವೈರಲ್, ಸ್ಕಿನ್ ಇನ್ಫೆಕ್ಷನ್ ಜೊತೆಗೆ ಡೈಯೆರಿಯಾ ಶುರುವಾಗಿದೆ. ಹೀಗಾಗಿ ವೈದ್ಯರು ಮಕ್ಕಳ ಆರೋಗ್ಯದ ಬಗ್ಗೆ ಕೊಂಚ ಎಚ್ಚರವಹಿಸುವಂತೆ ಪೋಷಕರಿಗೆ ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಬಿಸಿಲ ಶಾಖಕ್ಕೆ ಎಸಿ, ಕೂಲರ್ ಖರೀದಿಯತ್ತ ಮುಖ ಮಾಡಿದ ಸಿಟಿ ಮಂದಿ: ಬೆಲೆ ಕೇಳೇ ಮತ್ತಷ್ಟು ಬೆವೆತ ಜನ
ಬೇಸಿಗೆಯಿಂದ ಮಕ್ಕಳಲ್ಲಿ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿದ್ದು, ಸದ್ಯ ಈ ಖಾಯಿಲೆಗಳು ಮಕ್ಕಳಿಗೆ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿವೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ನಾನಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಮನೆಯಲ್ಲಿ ಒಂದು ಮಗುವಿಗೆ ಈ ರೀತಿಯ ಖಾಯಿಲೆಗಳು ಕಂಡು ಬಂದರೆ ವೇಗವಾಗಿ ಎಲ್ಲರಿಗೂ ಹರುಡುತ್ತಿದೆ. ಹೀಗಾಗಿ ಪೋಷಕರು ಮಕ್ಕಳಿಗೆ ಬೇಸಿಗೆ ಮುಗಿಯುವರೆಗೂ ಕಾದು ಆರಿಸಿದ ಬಿಸಿ ನೀರು ಕುಡಿಯುವಂತೆ, ನೀರನ್ನು ಹೆಚ್ಚು ಸೇವನೆ ಹಾಗೂ ಹರಗಡೆಯ ಆಹಾರ ಸೇವೆನೆಗೆ ಹೆಚ್ಚು ಅವಕಾಶ ಕೊಡದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ.
ಜೊತೆಗೆ ಬೇಸಿಗೆಯಲ್ಲಿ ಮಕ್ಕಳಿಗೆ ನಿತ್ರಾಣ, ನಿರ್ಜಲೀಕರಣ, ಅಜೀರ್ಣ ಸನ್ ಸ್ಟ್ರೋಕ್‌ಗಳು, ಚರ್ಮದಲ್ಲಿ ಅಲರ್ಜಿ ಹಾಗೂ ಅಜೀರ್ಣ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಹಾಗೂ ಮಲಬದ್ಧತೆಯಂತಹ ಸಮಸ್ಯೆ ಕಾಡುತ್ತದೆ. ಹೀಗಾಗಿ ಪೋಷಕರಿಗೆ ಎಚ್ಚರಿಕೆಯಿಂದ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಚಲಿಸುವ ಬೈಕ್ ಮೇಲೆಯೇ ರೊಮ್ಯಾನ್ಸ್: ಪ್ರೇಮಿಗಳ ಹುಚ್ಚಾಟದ ವಿಡಿಯೋ ವೈರಲ್
ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರು ಮತ್ತಷ್ಟು ಹಾಟ್ ಆಗಲಿದೆ. ಹೀಗಾಗಿ ಪೋಷಕರು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ವಹಿಸಬೇಕಿದೆ. ದೇಹದ ಉಷ್ಣತೆಯು 40 C ಅಥವಾ ಅದಕ್ಕಿಂತ ಹೆಚ್ಚು ಏರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವವಿದೆ. ಕೆಲವು ಸಂದರ್ಭಗಳಲ್ಲಿ ಹೀಟ್ ಸ್ಟ್ರೋಕ್ ಕೂಡ ಸಾಧ್ಯತೆ ಇದ್ದು, ಇದು ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಕೆಲವು ದಿನ ತಾಪಮಾನ ಇಳಿಕೆಯವರೆಗೂ ಹೆಚ್ಚು ಬಿಸಿಲಿಗೆ ಮೈ ಒಡ್ಡದಂತೆ ಎಚ್ಚರಿಕೆ ವಹಿಸಬೇಕಿದೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



