ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ವರ್ಷಕ್ಕೆ 1,000 ಕ್ಕೂ ಅಧಿಕ ಹದಿಹರೆಯ ಗರ್ಭಧಾರಣೆ ಪ್ರಕರಣಗಳು
ನಗರದಲ್ಲಿರುವ ಸರ್ಕಾರಿ ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವರ್ಷಕ್ಕೆ 1,000 ಹದಿಹರೆಯದ ಹೆಣ್ಣುಮಕ್ಕಳ ಗರ್ಭಧಾರಣೆ ಪ್ರಕರಣಗಳು ವರದಿಯಾಗಿದೆ.
ಬೆಂಗಳೂರು: ಸರ್ಕಾರ ಹದಿಹರೆಯ ಗರ್ಭಧಾರಣೆ ಕುರಿತು ಜಾಗೃತಿ ಮೂಡಿಸುತ್ತಿದ್ದರೂ ನಗರದಲ್ಲಿರುವ ಸರ್ಕಾರಿ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ(Vani Vilas Women and Children Hospital)ಯಲ್ಲಿ ಸುಮಾರು 30% ರಷ್ಟು ಹದಿಹರೆಯದ ಹೆಣ್ಣುಮಕ್ಕಳು ಗರ್ಭಿಣಿಯರಾಗಿರುವ ಕುರಿತು ವರದಿಯಾಗಿದೆ. ಇವುಗಳನ್ನು ಪೋಕ್ಸೊ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ. 70% ಪ್ರಕರಣಗಳಲ್ಲಿ ಗರ್ಭಧರಿಸಿದವರು ವಿವಾಹಿತರಾಗಿದ್ದಾರೆ. ಪೋಕ್ಸೊ ಕಾಯಿದೆಯು ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಶಿಕ್ಷೆಯನ್ನು ಒದಗಿಸುವ ಮೂಲಕ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮಾಡುತ್ತದೆ. ಇನ್ನು ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ಚಾರ್ಜ್ ಶೀಟ್ ಸಲ್ಲಿಕೆಯಾಗುವವರೆಗೆ ಕನಿಷ್ಠ ಮೂರು ತಿಂಗಳ ಕಾಲ ಜೈಲಿನಲ್ಲೇ ಇರಬೇಕಾಗುತ್ತದೆ. ಬಾಲ್ಯ ವಿವಾಹವು ಕಾನೂನುಬಾಹಿರವಾಗಿದ್ದರೂ ವಿಶೇಷವಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರಲ್ಲಿ ಇದು ಹೆಚ್ಚು ಪ್ರಚಲಿತವಾಗಿದೆ.
ಈ ಕುರಿತು ವೈದ್ಯಕೀಯ ಅಧೀಕ್ಷಕಿ ಡಾ.ಸಿ.ಸವಿತಾ ಅವರು “ಹದಿಹರೆಯದವರು ಗರ್ಭಧರಿಸಿದ್ದಲ್ಲಿ ಅಪಾಯ ಹೆಚ್ಚಿರುತ್ತದೆ. ಮಗುವಿನ ಅಪೂರ್ಣ ಬೆಳವಣಿಗೆ, ರಕ್ತಹೀನತೆ ಮತ್ತು ಅಪೌಷ್ಟಿಕತೆಯಂತಹ ಸಮಸ್ಯೆಗಳಿಂದ ಸಾವಿನ ಸಾಧ್ಯತೆ ಹೆಚ್ಚು ಇರುತ್ತದೆ ಎಂದಿದ್ದಾರೆ.
ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದಲೂ ರೋಗಿಗಳು ಬರುತ್ತಾರೆ. 75-80% ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳಲ್ಲಿ ಬೆಂಗಳೂರಿಗರೇ ಆಗಿದ್ದಾರೆ. ಹೆಚ್ಚಿನ ಪ್ರಕರಣಗಳು ಕಡಿಮೆ ಸಾಮಾಜಿಕ ಆರ್ಥಿಕ ಸ್ತರದಿಂದ ಬಂದಿವೆ ಎಂದು ಸ್ತ್ರೀರೋಗತಜ್ಞ ಡಾ. ರಾಧಿಕಾ ಅವರು ಹೇಳುತ್ತಾರೆ.
ಇದನ್ನೂ ಓದಿ:Bengaluru: ಬೆಂಗಳೂರಿಗೆ ಹೆಚ್ಚುವರಿ 2000 ಪೊಲೀಸ್ ಬಲ; ಸರ್ಕಾರಕ್ಕೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಧನ್ಯವಾದ
ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ, ಆಸ್ಪತ್ರೆಯು ಎಲ್ಲಾ ಪ್ರಕರಣಗಳನ್ನು ಪೊಲೀಸರಿಗೆ ವರದಿ ಮಾಡಲಾಗಿದ್ದು, ಕೋವಿಡ್ ಕಾರಣದಿಂದ 2020 ಹಾಗೂ 2021 ರ ಪ್ರಕರಣಗಳನ್ನು ನೋಂದಣಿ ಮಾಡಿಲ್ಲ ಎನ್ನುತ್ತಾರೆ. ಬಾಲ್ಯವಿವಾಹ ನಿಷೇಧ ಕಾಯಿದೆ 2006 ಅಡಿಯಲ್ಲಿ ಮದುವೆಯನ್ನು ಬೆಂಬಲಿಸಿದ ಪತಿ ಮತ್ತು ಇತರರಿಗೆ ಈ ಕಾಯಿದೆ ಅನ್ವಯಿಸುತ್ತದೆ ಎಂದು ಮಹಿಳೆಯರಿಗಾಗಿ ನಿರ್ಭಯಾ ಒನ್–ಸ್ಟಾಪ್ ಕೇಂದ್ರಕ್ಕೆ ಸಂಬಂಧಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ಆಧಾರ್ ಕಾರ್ಡ್‌ಗಳಿಂದ ಅಪ್ರಾಪ್ತ ಬಾಲಕಿಯರನ್ನು ಗುರುತಿಸಲಾಗುತ್ತದೆ. ಬಳಿಕ ಪೊಲೀಸರು ಡಿಎನ್ಎ ಮತ್ತು ವಯಸ್ಸಿನ ನಿರ್ಣಯ ಪರೀಕ್ಷೆಗಳಂತಹ ವಿವರಗಳನ್ನು ಸಂಗ್ರಹಿಸುತ್ತಾರೆ. ಆರೋಪ ಪಟ್ಟಿ ಸಲ್ಲಿಸಿದ ನಂತರ ಮೂರು ತಿಂಗಳ ನಂತರ ಆರೋಪಿಗೆ ಜಾಮೀನು ಸಿಗುತ್ತದೆ. ಕಾಯಿದೆಯ ಪ್ರಕಾರ, ಗಂಡಂದಿರಿಗೆ ಶಿಕ್ಷೆಯಾಗುತ್ತದೆ ಎಂದು ಇಲ್ಲಿನ ಅಧಿಕಾರಿ ಹೇಳುತ್ತಾರೆ.
ಇದನ್ನೂ ಓದಿ:ಬೆಂಗಳೂರು: ನನ್ನ ಮಗಳಿಗೆ ಆದ ನೋವು ಬೇರೆ ಯಾರಿಗೂ ಆಗಬಾರದು; ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆಯ ತಾಯಿಯ ಕಣ್ಣೀರು
ಕೆಲವೊಮ್ಮೆ ಆಸ್ಪತ್ರೆಯಲ್ಲಿ ಬಾಲಕಿಯ ಪೋಷಕರು ಮಾತ್ರ ಇರುತ್ತಾರೆ. ನವಜಾತ ಶಿಶುವನ್ನು ನೋಡಿಕೊಳ್ಳಲು ಅವರು ನಿರಾಕರಿಸಿದರೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC) ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸುತ್ತದೆ. ಬೆಂಗಳೂರು ನಗರಕ್ಕೆ ಮಾಜಿ ಸಿಡಬ್ಲ್ಯೂಸಿ ಸದಸ್ಯೆ ಲಕ್ಷ್ಮಿ ಪ್ರಸನ್ನ ಅವರು ಸಿಡಬ್ಲ್ಯೂಸಿಗೆ ಬರುವ ಒಟ್ಟು ಪ್ರಕರಣಗಳಲ್ಲಿ ಖಾಸಗಿ ಆಸ್ಪತ್ರೆಗಳು ಕೇವಲ 2-3% ರಷ್ಟು ಮಾತ್ರ ಅವರ ಕೊಡುಗೆ ಎಂದು ಹೇಳುತ್ತಾರೆ. ವರದಿಯಾದ ಹೆಚ್ಚಿನ ಪ್ರಕರಣಗಳು ವಾಣಿವಿಲಾಸದಿಂದ ಬಂದಿವೆ. ಆದರೆ ಇಲ್ಲಿಯೂ ಸಹ ರೋಗಿಯು ತಪ್ಪಾದ ವಯಸ್ಸನ್ನು ಘೋಷಿಸಿದರೆ ಮತ್ತು ನೋಡಲು ಚಿಕ್ಕವನಲ್ಲದಿದ್ದರೆ ಪ್ರಕರಣಗಳು ತಪ್ಪಿಹೋಗಬಹುದು ಎಂದು ಡಾ. ರಾಧಿಕಾ ಹೇಳುತ್ತಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:23 am, Mon, 20 February 23