ಟಿವಿ9 ನೆಟ್‌ವರ್ಕ್‌ ಪ್ರೈಡ್ ಡೇ: ನಮ್ಮ ಬಗ್ಗೆ ಕರುಣೆ ಬೇಡ, ಗೌರವವಿರಲಿ-ಅಕ್ಕಯ್ ಪದ್ಮಶಾಲಿ

ಇಂದು (ಶುಕ್ರವಾರ) ಟಿವಿ9 ನೆಟ್‌ವರ್ಕ್‌ನಲ್ಲಿ ನಡೆದ ‘ಪ್ರೈಡ್ ಡೇ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಕ್ಕಯ್ ಪದ್ಮಶಾಲಿ(Akkai Padmashali) ಅವರು, ‘ನಮ್ಮ ಬಗ್ಗೆ ಕರುಣೆ ಬೇಡ, ಗೌರವವಿರಲಿ ಎಂದು ಹೇಳಿದರು. ಬೆಂಗಳೂರಿನವರಾದ ಅಕ್ಕಯ್​ ಪದ್ಮಶಾಲಿ ಅವರು ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಅವರ ಹಕ್ಕುಗಳ ಹೋರಾಟದಲ್ಲಿ ರಾಷ್ಟಮಟ್ಟದಲ್ಲಿ ಮಂಚೂಣಿಯಲ್ಲಿದ್ದಾರೆ.

ಟಿವಿ9 ನೆಟ್‌ವರ್ಕ್‌ ಪ್ರೈಡ್ ಡೇ: ನಮ್ಮ ಬಗ್ಗೆ ಕರುಣೆ ಬೇಡ, ಗೌರವವಿರಲಿ-ಅಕ್ಕಯ್ ಪದ್ಮಶಾಲಿ
ಅಕ್ಕಯ್ ಪದ್ಮಶಾಲಿ
Follow us
|

Updated on: Jun 28, 2024 | 5:10 PM

ಇಂದು (ಶುಕ್ರವಾರ) ಟಿವಿ9 ನೆಟ್‌ವರ್ಕ್‌ನಲ್ಲಿ ‘ಪ್ರೈಡ್ ಡೇ’ ಆಚರಿಸಲಾಗಿದ್ದು, ಈ ವೇಳೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಕ್ಕಯ್ ಪದ್ಮಶಾಲಿ(Akkai Padmashali) ಅವರು, ‘ನಮ್ಮ ಬಗ್ಗೆ ಕರುಣೆ ಬೇಡ, ಗೌರವವಿರಲಿ ಎಂದು ಹೇಳಿದರು. ‘ನಾವು ಕೂಡಾ ಸಮಾಜದಲ್ಲಿ ಎಲ್ಲರ ಹಾಗೆ ಸಹಜವಾಗಿ ಬದುಕುವುದಕ್ಕಾಗಿ ಮುಕ್ತ ವಾತಾವರಣ ಬೇಕಿದೆ. ಈಗಾಗಲೇ ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ಸಮಾನತೆ ಬಗ್ಗೆ ಹೋರಾಟ ನಡೆದು, ಕಾನೂನು ಚೌಕಟ್ಟಿನಲ್ಲಿ ನಮಗೊಂದಿಷ್ಟು ನ್ಯಾಯ ಸಿಕ್ಕಿದ್ದು ಸಮಾಧಾನವಾಗಿದೆ.  ‘ನಮ್ಮ ಸಮೂಹಕ್ಕೊಂದು ಸುಭದ್ರ ವ್ಯವಸ್ಥೆ ಹಾಗೂ ಶೈಕ್ಷಣಿಕವಾಗಿ ಮುಂದುವರೆಯಲು ಸಹಕಾರ ಬೇಕಿದೆ ಎಂದರು.

ನಾವು ಕೆಲಸ ಮಾಡಲು ಸರ್ಕಾರ ಹಾಗೂ ಸಮಾಜದ ಸಹಕಾರ ಬೇಕು

ಭೀಕ್ಷೆ ಬೇಡಿಕೊಂಡು ತಿನ್ನುವ ಹಂತವನ್ನು ದಾಟಿ ನಾವು ದುಡಿದು ತಿನ್ನಬೇಕಾಗಿದೆ. ಹಾಗಾಗಿ ನಾವು ಕೆಲಸ ಮಾಡಲು ಸರ್ಕಾರ ಹಾಗೂ ಸಮಾಜದ ಸಹಕಾರ ಬೇಕೇಬೇಕು. ಈಗಾಗಲೇ ನಮ್ಮಲ್ಲೂ ಕೂಡ ಕೆಲವರು ಓದಿಕೊಂಡು, ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಮತ್ತೊಂದಿಷ್ಟು ಜನ ಓದಿಕೊಂಡು ಮುಂದುವರೆದರೆ ನಮ್ಮ ಇಡೀ ಸಮೂಹಕ್ಕೆ ಸಹಕಾರಿಯಾಗಬಲ್ಲದು. ಒಟ್ಟಿನಲ್ಲಿ ಸರ್ಕಾರವೂ ಸೇರಿದಂತೆ ಸಮಾಜದಲ್ಲಿರುವ ಪ್ರತಿಯೊಬ್ಬರು ನಮ್ಮ ಸಮೂಹದ ಬಗ್ಗೆ ಮರುಕಪಡದೆ ಸಮಾನವಾಗಿ ಕಂಡರೆ ಅದಕ್ಕಿಂತ ಗೆಲುವು ಮತ್ತೊಂದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಮೊಟ್ಟ ಮೊದಲು ಬಾರಿಗೆ ಸರ್ಕಾರದಿಂದ ತೃತೀಯ ಲಿಂಗಿಗಳ ಆಶ್ರಯ ಜಾಗ: ನಮ್ಮನೆ ಸುಮ್ಮನೆಗೆ ಭೂಮಿ ಪೂಜೆ ಮಾಡಿದ ಅಶೋಕ್

ಅಕ್ಕಯ್ ಪದ್ಮಶಾಲಿ

ಬೆಂಗಳೂರಿನವರಾದ ಅಕ್ಕಯ್​ ಪದ್ಮಶಾಲಿ ಅವರು ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಅವರ ಹಕ್ಕುಗಳ ಹೋರಾಟದಲ್ಲಿ ರಾಷ್ಟಮಟ್ಟದಲ್ಲಿ ಮಂಚೂಣಿಯಲ್ಲಿದ್ದಾರೆ. ಇವರು ಪ್ರೇರಕ ಭಾಷಣಕಾರ ಮತ್ತು ಗಾಯಕಿ. ಅವರ ಸಮಾಜಮುಖಿ ಕೆಲಸಕ್ಕಾಗಿ,  ಕರ್ನಾಟಕ ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಶಾಂತಿ, ಶಿಕ್ಷಣಕ್ಕಾಗಿ ಭಾರತೀಯ ವರ್ಚುವಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?