AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಹಂತ-3 ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮತಿ, ಡಬಲ್ ಡೆಕ್ಕರ್ ಮೇಲ್ಸೇತುವೆಗಳಿಗೆ ಚಿಂತನೆ

15,611 ಕೋಟಿ ರೂ. ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮತಿ ನೀಡಿದೆ. ಜೊತೆಗೆ ಏಕಕಾಲದಲ್ಲಿ 44.65 ಕಿ.ಮೀ ಉದ್ದದ ಯೋಜನೆಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲು ಬಿಎಂಆರ್‌ಸಿಎಲ್​ಗೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಡಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ನಿರ್ಮಿಸಲು ಸರ್ಕಾರ ಹೇಳಿದ್ದು ಇದರಿಂದ ಯೋಜನೆ ವಿಳಂಬವಾಗುತ್ತಿದೆ.

ಮೆಟ್ರೋ ಹಂತ-3 ಯೋಜನೆಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮತಿ, ಡಬಲ್ ಡೆಕ್ಕರ್ ಮೇಲ್ಸೇತುವೆಗಳಿಗೆ ಚಿಂತನೆ
ಮೆಟ್ರೋ
ಆಯೇಷಾ ಬಾನು
|

Updated on: Aug 01, 2024 | 11:29 AM

Share

ಬೆಂಗಳೂರು, ಆಗಸ್ಟ್.01: ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವಾಲಯವು 15,611 ಕೋಟಿ ರೂ. ವೆಚ್ಚದ ಬೆಂಗಳೂರು ಮೆಟ್ರೋ ಹಂತ-3 ಯೋಜನೆಗೆ (Bengaluru Metro)ಅನುಮತಿ ನೀಡಿದ್ದು, ಇದೀಗ ಸಂಪುಟದ ಅಂತಿಮ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳ ಮೂಲಕ ತಿಳಿದುಬಂದಿದೆ.

ಏಕಕಾಲದಲ್ಲಿ 44.65 ಕಿ.ಮೀ ಉದ್ದದ ಯೋಜನೆಗೆ ಟೆಂಡರ್ ಪ್ರಕ್ರಿಯೆ ನಡೆಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿತ್ತು. ಆದರೆ ಮುಂಬರುವ ಎಲ್ಲಾ ಮೆಟ್ರೋ ಯೋಜನೆಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ನಿರ್ಮಿಸಲು ರಾಜ್ಯ ಸರ್ಕಾರ ಸೂಚಿಸಿದ್ದು, ಈ ಹೊಸ ಪ್ರಸ್ತಾವನೆಯು ಕೆಲಸವನ್ನು ತಡೆಹಿಡಿಯುತ್ತಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಸಾರ್ವಜನಿಕ ಹೂಡಿಕೆ ಮಂಡಳಿಯು ಯೋಜನೆಗೆ ಮೊದಲೇ ಅನುಮರಿ ನೀಡಿದ ನಂತರ, ಹಣಕಾಸು ಸಚಿವಾಲಯವು ಇತ್ತೀಚೆಗೆ ತನ್ನ ಒಪ್ಪಿಗೆಯನ್ನು ನೀಡಿತು. ಕಳೆದ ವಾರ, ಕೇಂದ್ರದ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟದ ಅನುಮತಿಗೆ ಅನುಕೂಲವಾಗುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಮೆಟ್ರೋ ಹಂತ-3ರ ಕುರಿತು ವಿವರವಾದ ಪ್ರಸ್ತುತಿಯನ್ನು ನೀಡಿತು.

ಇದನ್ನೂ ಓದಿ: Bengaluru Metro: ಆಗಸ್ಟ್ 6ರಿಂದ ನಾಗಸಂದ್ರ-ಮಾದಾವರ ಮಾರ್ಗದಲ್ಲಿ ಮೆಟ್ರೋ ಪ್ರಾಯೋಗಿಕ ಸಂಚಾರ ಆರಂಭ

ಮೆಟ್ರೋ ಮೂರನೇ ಹಂತ ಎರಡು ಎಲಿವೇಟೆಡ್ ಸ್ಟ್ರೆಚ್‌ಗಳನ್ನು ಒಳಗೊಂಡಿದೆ. ಒಂದು 32.15 ಕಿಮೀ ಇದ್ದು, ಹೊರವರ್ತುಲ ರಸ್ತೆಯ ಪಶ್ಚಿಮ ಭಾಗದಲ್ಲಿ ಜೆಪಿ ನಗರ ನಾಲ್ಕನೇ ಹಂತವನ್ನು ಸಂಪರ್ಕಿಸುತ್ತದೆ. ಆದರೆ ಮಾಗಡಿ ರಸ್ತೆಯಲ್ಲಿನ 12.5 ಕಿಮೀ ಮಾರ್ಗವು ಹೊಸಹಳ್ಳಿ ಮತ್ತು ಕಡಬಗೆರೆಯನ್ನು ಸಂಪರ್ಕಿಸುತ್ತದೆ. ಇದು ಒಟ್ಟು 31 ನಿಲ್ದಾಣಗಳನ್ನು ಹೊಂದಿದೆ.

ಈ ವರ್ಷದ ಮಾರ್ಚ್ 14 ರಂದು ಯೋಜನೆಯ ಕಡಿಮೆ ಪರಿಷ್ಕೃತ ವೆಚ್ಚಕ್ಕೆ (16,328 ಕೋಟಿ ರೂ.ಗಳಿಂದ ಕಡಿಮೆ) ರಾಜ್ಯ ಸರ್ಕಾರ ತನ್ನ ಒಪ್ಪಿಗೆಯನ್ನು ನೀಡಿತು. ಮತ್ತು 2028ರ ಗಡುವು ನೀಡಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ವರ್ಷದ ಆರಂಭದಲ್ಲಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ನಿರ್ಮಿಸಲು ಸೂಚಿಸಿದ್ದರು. ಹೀಗಾಗಿ ಮೂರನೇ ಹಂತದ ಮೂರು ಕಾರಿಡಾರ್‌ಗಳಲ್ಲಿ ಇಂತಹ ಫ್ಲೈಓವರ್‌ಗಳನ್ನು ನಿರ್ಮಿಸಲು BMRCL ಮುಂದಾಗಿದೆ. ಜೆಪಿ ನಗರ 4 ನೇ ಹಂತದಿಂದ ಹೆಬ್ಬಾಳ, ಹೊಸಹಳ್ಳಿಯಿಂದ ಕಡಬಗೆರೆ ಹಂತ 3 ಮತ್ತು ಸರ್ಜಾಪುರದಿಂದ ಇಬ್ಬಲೂರು ORR ಜಂಕ್ಷನ್‌ನಲ್ಲಿ ಮತ್ತು ಅಗರದಿಂದ ಕೋರಮಂಗಲದ ಭಾಗವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ