ಕೃಷಿ ಭೂಮಿಗಿಳಿಯಿತು ಸೈಕಲ್ ಎಡೆಕುಂಟೆ: ಏನಿದರ ವಿಶೇಷತೆ, ಸಿಗುವುದಾದರೂ ಎಲ್ಲಿ?
ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರು ಹುಡುಕುವುದು ಹರಸಾಹಸ ಎನಿಸಿದೆ. ಬಾಡಿಗೆ ಎತ್ತುಗಳನ್ನು ಪಡೆದು, ಕಷಿ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ ಎಡೆ ಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಸಾಧ್ಯವಾಗಿದೆ. ರೈತರ ಇಂತಹ ಕಷ್ಟಗಳಿಗೆ ಸೈಕಲ್ ಎಡೆ ಕುಂಟೆ ಪರಿಹಾರವಾಗಿದೆ.
ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ದುಡಿಯುವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು ಸದ್ಯ ಮಹಾತ್ಮ ಗಾಂಧೀ ರಾಷ್ಟೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ದುಡಿಯಲು ಹೋದರೆ ಸುಮಾರು 275 ರೂ ವರೆಗೂ ಕೂಲಿ ದೊರೆಯುತಿದ್ದು, ಹೊಲದಲ್ಲಿನ ಕಳೆ ತೆಗೆಯಲು ಕೂಲಿಯಾಳುಗಳ ತೊಂದರೆ ಎದುರಾಗಿದೆ.
ಹಿಂಗಾರು ಹಂಗಾಮಿನ ಬೆಳೆಗಳ ಕಳೆ, ಕಸ ತೆಗೆಯಲು ಕೂಲಿಯಾಳುಗಳ ಕೊರತೆ ಹಿನ್ನೆಲೆಯಲ್ಲಿ ರೈತರು ಸೈಕಲ್ ಗಾಲಿ ಎಡೆ ಕುಂಟೆಗೆ ಮೊರೆ ಹೋಗುತ್ತಿದ್ದಾರೆ. ಇದು ಸರಳ ಮತ್ತು ಸುಲಭ ವಿಧಾನ ಕೂಡ ಹೌದು. ಹಿಂಗಾರಿನ ಬೆಳೆಗಳಾದ ಕಡಲೆ, ಜೋಳ, ಗೋಧಿ, ಇತ್ಯಾದಿ ಬೆಳೆಗಳಲ್ಲಿ ಕಸ ತೆಗೆಯಲು ಕೂಲಿಯಾಳು ಕೊರತೆ ಎದುರಾಗಿದೆ. ಪ್ರತಿ ಕೂಲಿಯಾಳುವಿಗೆ 150 ರೂ. 200 ರೂ. ಕೂಲಿ ಕೊಡುವುದು ರೈತರಿಗೆ ಸಹ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
ಸೈಕಲ್ ಎಡೆಕುಂಟೆಗಳು ಕೃಷಿ ಇಲಾಖೆಯಲ್ಲಿ ಲಭ್ಯವಿರುತ್ತವೆ ಸರಿಯಾದ ಸಮಯಕ್ಕೆ ಕೂಲಿಯಾಳುಗಳು ಸಹ ಲಭ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರವು ನೂತನ ತಂತ್ರಜ್ಞಾನವನ್ನು ಬಳಸಿ ಸೈಕಲ್ ಎಡೆ ಕುಂಟೆಯನ್ನು ಹೊರತಂದಿದ್ದು ಈ ಸೈಕಲ್ ಎಡೆಕುಂಟೆಗಳು ಕೃಷಿ ಇಲಾಖೆಯಲ್ಲಿ ಲಭ್ಯವಿರುತ್ತವೆ ಇದಕ್ಕೆ ಬೇಡಿಕೆ ಬಂದಿದೆ. ಇದನ್ನು ಬಳಸಿ ಹೊಲದಲ್ಲಿನ ಬೆಳೆಗಳ ನಡುವೆ ಇರುವ ಕಳೆಯನ್ನು ಕಸವನ್ನು ತೆಗೆಯಬಹುದು. ಈ ಕುಂಟೆ ಹಗುರವಾಗಿದ್ದು, ಒಬ್ಬರೆ ಇದನ್ನು ನಿರ್ವಹಿಸಲು ಸಾಧ್ಯವಿದೆ. ಸರಳವಾಗಿ, ಸುಲಭವಾಗಿ ಇದರಿಂದ ಕಳೆ ತೆಗೆಯಬಹುದಾಗಿದೆ.
ಎತ್ತುಗಳನ್ನು ಬಳಸಿ ಎಡೆ ಕುಂಟೆ ಹೊಡೆಯಲು ಮೂರ್ನಾಲ್ಕು ಕಷಿ ಕೂಲಿಕಾರ್ಮಿಕರು ಬೇಕು. ಇದಕ್ಕೆ ದುಬಾರಿ ಖರ್ಚು ಭರಿಸುವುದು ಅನಿವಾರ್ಯ. ಕೂಲಿ ದರ ಗಗನಕ್ಕೇರಿದೆ. ಮತ್ತೊಂದೆಡೆ ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರು ಹುಡುಕುವುದು ಹರಸಾಹಸ ಎನಿಸಿದೆ. ಬಾಡಿಗೆ ಎತ್ತುಗಳನ್ನು ಪಡೆದು, ಕಷಿ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ ಎಡೆ ಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಸಾಧ್ಯವಾಗಿದೆ. ರೈತರ ಇಂತಹ ಕಷ್ಟಗಳಿಗೆ ಸೈಕಲ್ ಎಡೆ ಕುಂಟೆ ಪರಿಹಾರವಾಗಿದೆ.
ಇದನ್ನೂ ಓದಿ: ಹಳ್ಳಿ ಹೈದ ರೂಪಿಸಿದ ಸೋಲಾರ್ ಟ್ರಾಪ್ ಈಗ ವಿದೇಶಿ ಕೃಷಿ ವಿವಿಗಳಲ್ಲಿ ಪಠ್ಯ: ಸರಳ ವಿನ್ಯಾಸ, ಅದ್ಭುತ ಕೆಲಸ
ಕೊಳಚೆ ನೀರಿನಲ್ಲೇ.. ಬಂಗಾರದಂತಹ ನೂರಾರು ಗಂಧದ ಮರ ಬೆಳೆಸಿದ ಕೋಲಾರದ ರೈತ!
Published On - 2:30 pm, Mon, 30 November 20