ಹೋದ ವರ್ಷ ಸುರಿದ ಮಳೆಗೆ ತುಂಬಿ ತುಳುಕುತ್ತಿರುವ ಕೆರೆಗಳು, ಕಾರಂಜಾ ಜಲಾಶಯ: ಸಂತಸದಲ್ಲಿ ಬೀದರ್ ರೈತರು

ಬೀದರ್ ಜಿಲ್ಲೆಯಲ್ಲಿ ಕಳೆದ ಜೂನ್, ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲೆಯ 121 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯದಲ್ಲೂ ನೀರು ಶೇಖರಣೆಯಾಗಿದೆ.

  • ಸುರೇಶ್ ನಾಯಕ್
  • Published On - 16:30 PM, 2 Mar 2021
ಹೋದ ವರ್ಷ ಸುರಿದ ಮಳೆಗೆ ತುಂಬಿ ತುಳುಕುತ್ತಿರುವ ಕೆರೆಗಳು, ಕಾರಂಜಾ ಜಲಾಶಯ: ಸಂತಸದಲ್ಲಿ ಬೀದರ್ ರೈತರು
ಭರ್ತಿಯಾಗಿರುವ ಕೆರೆ

ಬೀದರ್: ಕಳೆದ ಐದಾರು ವರ್ಷಗಳಿಂದ ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಮಳೆಯಾಗಿರಲಿಲ್ಲ. ಹೀಗಾಗಿ ಕೆರೆ, ಹಳ್ಳ, ಚೆಕ್ ಡ್ಯಾಂನಲ್ಲಿ ನೀರು ಇರುತ್ತಿರಲಿಲ್ಲ. ಇದರ ಪರಿಣಾಮವಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ಉಲ್ಬಣಿಸುತ್ತಿತ್ತು. ಪ್ರಾಣಿ, ಪಕ್ಷಿ, ಜಾನುವಾರುಗಳು ನೀರಿಲ್ಲದೇ ದಾಹ ಇಂಗಿಸಿಕೊಳ್ಳಲು ಅಲೆದಾಡಬೇಕಾಗಿತ್ತು. ಹೋದ ವರ್ಷ ಸುರಿದ ಮಳೆಯಿಂದಾಗ ಕೆರೆ, ಚೆಕ್ ಡ್ಯಾಂನಲ್ಲಿ ಭರಪೂರ ನೀರು ಸಂಗ್ರವಾಗಿದ್ದು, ರೈತರ ಮೊಗದಲ್ಲಿ ನಗು ಮೂಡಿದೆ.

ಬೀದರ್ ಜಿಲ್ಲೆಯಲ್ಲಿ ಕಳೆದ ಜೂನ್, ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲೆಯ 121 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯದಲ್ಲೂ ನೀರು ಶೇಖರಣೆಯಾಗಿದೆ. 7.79 ಟಿಎಂಸಿ ಸಾಮರ್ಥ್ಯದ ಡ್ಯಾಂ​ನಲ್ಲಿ 7 ಟಿಎಂಸಿ ನೀರು ಸದ್ಯ ಇದೆ. ಜೊತೆಗೆ ಜಿಲ್ಲೆಯಲ್ಲಿರುವ ಬ್ರೀಜ್ ಕಂ ಬ್ಯಾರೇಜ್​ನಲ್ಲಿಯೂ ಕೂಡಾ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ. ಐದು ವರ್ಷದ ಬಳಿಕೆ ಇದೇ ಮೊದಲ ಸಲ ಇಷ್ಟೊಂದು ಪ್ರಮಾಣದಲ್ಲಿ ಕೆರೆಗಳಲ್ಲಿ, ಬ್ಯಾರೇಜ್​ನಲ್ಲಿ ನೀರು ಸಂಗ್ರಹವಾಗಿದ್ದು, ನೀರಿಲ್ಲದೆ ಭಣಗುಡುತ್ತಿದ್ದ ನದಿ, ಕೆರೆ, ಜಲಾಶಯಗಳಿಗೆ ಜೀವ ಕಳೆ ಬಂದಿದೆ.

171 ಮಿಲಿ ಮೀಟರ್ ಮಳೆ
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 124 ಕೆರೆಗಳಿದ್ದು, ಎಲ್ಲವೂ ಸೊರಗಿದ್ದವು. ಆದರೆ ಈ ಮಳೆಗೆ 121 ಕೆರೆಗಳು ಭರ್ತಿಯಾಗಿದೆ. ಉಳಿದ 3 ಕೆರೆಯಲ್ಲಿ ಮಾತ್ರ ನೀರು ಸಂಗ್ರಹವಾಗಿಲ್ಲ. ಹೋದ ವರ್ಷ ದಾಖಲೆ ಪ್ರಮಾಣದಲ್ಲಿ ಅಂದರೆ ವಾಡಿಕೆಯಂತೆ ಜಿಲ್ಲೆಯಲ್ಲಿ 39 ಮಿಲಿ ಮೀಟರ್ ಮಳೆ ಆಗಬೇಕಿತ್ತು. ಆದರೆ ವಾಸ್ತವವಾಗಿ ಜಿಲ್ಲೆಯಲ್ಲಿ 171 ಮಿಲಿ ಮೀಟರ್ ಮಳೆಯಾಗಿತ್ತು. ಹೀಗಾಗಿ ಜಿಲ್ಲೆಯ ಎಲ್ಲಾ ಕೆರೆಗಳು ತುಂಬಿಕೊಂಡಿವೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಜಲಾಶಯಗಳಲ್ಲಿ ನೀರಿನ ಸಂಗ್ರಹದಿಂದ ಹೊಲಗಳಿಗೆ ಅನುಕೂಲವಾಗಿದೆ

ಜಿಲ್ಲೆಯಲ್ಲೇ ಔರಾದ್ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 35 ಕೆರೆಗಳಿದ್ದು, 3 ಕೆರೆಗಳು ಬಿಟ್ಟು ಉಳಿದ ಎಲ್ಲಾ ಕೆರೆಗಳು ತುಂಬಿಕೊಂಡಿವೆ. ಭಾಲ್ಕಿ ತಾಲೂಕಿನ 17 ಕೆರೆಗಳಲ್ಲಿ 17 ತುಂಬಿದ್ದು, ಬಸವಕಲ್ಯಾಣದಲ್ಲಿ 23 ರಲ್ಲಿ 23 ಕೆರೆಗಳು ಭರ್ತಿಯಾಗಿವೆ. ಬೀದರ್ ತಾಲೂಕಿನಲ್ಲಿನ 34 ಕೆರೆಗಳ ಪೈಕಿ 34 ಕೆರೆಗಳು ಪೂರ್ಣ ತುಂಬಿವೆ ಹೀಗೆ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿವೆ. ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಬಹುತೇಕ ಕೆರೆಗಳು ಈ ವರ್ಷ ನೀರು ಕಂಡಿವೆ. ಇದು ರೈತರು, ಗ್ರಾಮೀಣ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.

ಕೃಷಿಗೆ ಸ್ಪಿಂಕ್ಲರ್​ ಬಳಕೆ

ಕಳೆದ ಐದಾರು ವರ್ಷದಿಂದ ಮಳೆಯೂ ಇಲ್ಲದೇ ಬೋರ್​ವೆಲ್​ಗಳು ಬತ್ತಿ ಹೋಗಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು ಮೊರೆ ಹೋಗಿದ್ದ ರೈತರು ಕೆರೆ ಕಟ್ಟೆಗಳಿಗೆ ನೀರು ಸಂಗ್ರಹವಾಗಿದ್ದರಿಂದ ಹರ್ಷಗೊಂಡಿದ್ದಾರೆ. ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ಕಿಲೋಮೀಟರ್ ಗಟ್ಟಲೇ ಹೋಗಿ ನೀರು ತರುವಂತಹ ಸ್ಥಿತಿ ಎದುರಾಗುತ್ತಿತ್ತು. ಆದರೆ ಕಳೆದ ವರ್ಷ ಭರಪೂರ ಮಳೆಯಾಗಿದ್ದರಿಂದ ಹಳ್ಳ, ಕೊಳ್ಳ, ಕೆರೆಗಳು, ನದಿ, ಜಲಾಶಯ, ಬಾವಿ, ಬೋರ್​ವೆಲ್​ಗಳಲ್ಲಿಯೂ ಕೂಡಾ ನೀರು ಸಂಗ್ರಹವಾಗಿದೆ.

ಹೊಲದಲ್ಲಿ ಮೇಯುತ್ತಿರುವ ಮೇಕೆಗಳು

ತುಂಬಿರುವ ನಾಲೆ

ಮೀನು ಹಿಡಿಯಲು ಬಲೆ ಹಾಕುತ್ತಿರುವ ವ್ಯಕ್ತಿ

ಇದನ್ನೂ ಓದಿ

ಔರಾದ್​ ತಾಲೂಕಿನಲ್ಲಿ ಟಾಪ್ ಸವಾರಿ ಸಾಮಾನ್ಯ: ರಸ್ತೆ ಮೇಲೆ ಪ್ರಯಾಣಿಕರಿಗೆ ನಿತ್ಯ ಗಂಡಾಂತರ

ಯಾವುದೇ ಕಾರಣಕ್ಕೂ ಹೆಚ್ಚುವರಿ ಕಾವೇರಿ ನೀರು ಪಡೆಯಲು ತಮಿಳುನಾಡಿಗೆ ಅವಕಾಶ ನೀಡಲ್ಲ- ಮುಖ್ಯಮಂತ್ರಿ ಯಡಿಯೂರಪ್ಪ