Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರು ಮಂಗಳಸೂತ್ರ ಮಾತ್ರವಲ್ಲ ತಮ್ಮ ಗಂಡಂದಿರು, ಮಕ್ಕಳನ್ನೂ ಕಳೆದುಕೊಳ್ಳುತ್ತಾರೆ. ಕೋಮುಗಲಭೆ, ದೊಂಬಿ ಮಾಡಿ ಮಕ್ಕಳು ಸಾಯುವಂತೆ ಮಾಡುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವಿರುದ್ಧ ರಾಜ್ಯ ಬಿಜೆಪಿ ನಿಯೋಗದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿದೆ.

ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಯತೀಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಡಾ.ಯತೀಂದ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 22, 2024 | 7:37 PM

ಬೆಂಗಳೂರು, ಏಪ್ರಿಲ್​ 22: 70 ವರ್ಷಗಳಿಂದ ರಾಜ್ಯದಲ್ಲಿ ಹಲವು ಪಕ್ಷಗಳ ಆಡಳಿತ ನಡೆಸಿವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರು ಮಂಗಳಸೂತ್ರ ಮಾತ್ರವಲ್ಲ ತಮ್ಮ ಗಂಡಂದಿರು, ಮಕ್ಕಳನ್ನೂ ಕಳೆದುಕೊಳ್ಳುತ್ತಾರೆ ಎಂಬ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ (Dr Yathindra Siddaramaiah) ವಿರುದ್ಧ ಬಿಜೆಪಿ (BJP) ದೂರು ನೀಡಿದೆ. ಮಾಜಿ ಎಂಎಲ್​ಸಿ ಅಶ್ವತ್ಥ್ ನಾರಾಯಣ ನೇತೃತ್ವದ ನಿಯೋಗದಿಂದ ಚುನಾವಣಾ ಆಯೋಗದ ಕಚೇರಿಗೆ ಬಿಜೆಪಿ ನಿಯೋಗದಿಂದ ದೂರು ನೀಡಲಾಗಿದೆ.

ಯತೀಂದ್ರ ಕ್ಷಮೆ ಕೇಳಬೇಕು: ಅಶ್ವತ್ಥ್ ನಾರಾಯಣ

ದೂರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಎಂಎಲ್​ಸಿ ಅಶ್ವತ್ಥ್ ನಾರಾಯಣ, ಯತೀಂದ್ರ ಅವರ ವಿರುದ್ದ ನಾವು ಇವತ್ತು ದೂರು ನೀಡಿದ್ದೇವೆ. ಈ‌ ರೀತಿ ಯಾವುದೇ ಹೇಳಿಕೆ ಕೊಡದಂತೆ ಸೂಚನೆ‌ ನೀಡಿ ಎಂದು‌ ಮನವಿ ಮಾಡಿದ್ದೇವೆ. ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇವೆ. ಜೊತೆಗೆ ಯತೀಂದ್ರ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರು ಮಂಗಳಸೂತ್ರ ಕಳೆದುಕೊಳ್ಳುತ್ತಾರೆ: ಸಿಎಂ ಪುತ್ರ ಡಾ ಯತೀಂದ್ರ ವಿವಾದಾತ್ಮಕ ಹೇಳಿಕೆ

ಚುನಾವಣೆ ಘೋಷಣೆ ಬಳಿಕ ಕಾಂಗ್ರೆಸ್ ನಾಯಕರು ಜವಾಬ್ದಾರಿ ಮಾತುಗಳನ್ನ ಆಡುತ್ತಿದ್ದಾರೆ. ಈ ಹಿಂದೆ ನಟಿ‌ ಹೇಮಾ ಮಾಲಿನಿ ಕುರಿತು ಹೇಳಿಕೆ‌ ಕೊಟ್ಟು ಸುರ್ಜೇವಾಲಾ ಎರಡು ದಿನ ಪ್ರಚಾರದಿಂದ ದೂರ ಉಳಿಯಬೇಕಾಯಿತು. ಈಗ ಯತೀಂದ್ರ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಏನೇನೋ ಮಾತಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಿವಕುಮಾರ್ ಒಬ್ಬ ತಲೆತಿರುಕ, ಕ್ಷುಲ್ಲಕ ಕಾರಣಗಳಿಂದ ಮುಸ್ಲಿಮರ ಮನವೊಲಿಸುವ ಪ್ರಯತ್ನ ಮಾಡುತ್ತಾನೆ: ಬಿಎಸ್ ಯಡಿಯೂರಪ್ಪ

ಯತೀಂದ್ರ ಓರ್ವ ಮಾಜಿ ಶಾಸಕರು ಜವಾಬ್ದಾರಿಯುತ ರಾಜಕಾರಣಿಯ ಮಗ. ಪ್ರಧಾನಿಗಳು ಏನ್ ಮಾತಾಡಿದ್ದಾರೆ ಅನ್ನೋ ಪರಿಜ್ಞಾನ ಯತೀಂದ್ರ ಅವರಿಗಿಲ್ಲ. ಈ ಹಿಂದೆ ಮನ್ ಮೋಹನ್ ಸಿಂಗ್ ಮಾತಾಡಿದ್ದನ್ನ ಮತ್ತು ಕಾಂಗ್ರೆಸ್ ಪ್ರಣಾಳಿಕೆ ಉಲ್ಲೇಖಿಸಿ ಮೋದಿ ಮಾತಾಡಿದ್ದಾರೆ ಹೊರತು, ಖುದ್ದು ಮೋದಿಯೇ ಹೇಳಿದ್ದ ಮಾತಲ್ಲ. ಆದರೆ ಮೋದಿ ಅವರ ಹೇಳಿಕೆ ಸರಿಯಾಗಿ ಅರ್ಥೈಸಿಕೊಳ್ಳದೇ ಮಿಸ್ ಗೈಡ್ ಮಾಡಿದ್ದಾರೆ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ವರದಿ: ಈರಣ್ಣ ಬಸವ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.