AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ನಿಂದನೆ ಮಾಡಿಲ್ಲ, ಅವರೇ ನಮ್ಮ ವಿರುದ್ಧವಾಗಿ ಮಾತನಾಡಿದ್ದರು: ಆನಂದ್​ ಸಿಂಗ್ ಸ್ಪಷ್ಟನೆ

ಜಾತಿ ನಿಂದನೆ, ಜೀವ ಬೆದರಿಕೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ನಾನು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬೆದರಿಕೆಯಾಗಲಿ, ಜಾತಿನಿಂದನೆಯಾಗಲಿ ಮಾಡಿಲ್ಲ ಎಂದರು.

ಜಾತಿ ನಿಂದನೆ ಮಾಡಿಲ್ಲ, ಅವರೇ ನಮ್ಮ ವಿರುದ್ಧವಾಗಿ ಮಾತನಾಡಿದ್ದರು: ಆನಂದ್​ ಸಿಂಗ್ ಸ್ಪಷ್ಟನೆ
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್
TV9 Web
| Edited By: |

Updated on: Aug 31, 2022 | 1:58 PM

Share

ವಿಜಯನಗರ: ನಾನು ಯಾವುದೇ ಜಾತಿ ನಿಂದನೆಯಾಗಲಿ ಅಥವಾ ಜೀವ ಬೆದರಿಕೆಯಾಗಲಿ ಹಾಕಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದರು. ಜಾಗದ ವಿಚಾರವಾಗಿ ಮಡಿವಾಳ ಸಮಾಜ ಮತ್ತು ಪೋಲಪ್ಪ ಅವರ ನಡುವೆ ವಿವಾದ ಇತ್ತು. ಈ ಸಂಬಂಧ ಪೋಲಪ್ಪ ಅವರಿಗೆ ಕರೆ ಮಾಡಿ ಸಮಾಜದವರನ್ನ ಕರೆದುಕೊಂಡು ಸ್ಥಳ ಪರಿಶೀಲನೆಗೆ ಹೋಗಿದ್ದೆ, ಈ ವೇಳೆ ನಾನು ಯಾವುದೇ ನಿಂದನೆ ಮಾಡಿಲ್ಲ, ಅವರೇ ನಮ್ಮ ವಿರುದ್ಧ ಮಾತನಾಡಿದರು ಎಂದು ಹೇಳಿದರು.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಆನಂದ್ ಸಿಂಗ್, ಜಾಗದ ವಿಚಾರದಲ್ಲಿ ಮಡಿವಾಳ ಸಮಾಜ ಹಾಗೂ ಪೋಲಪ್ಪ ಕುಟುಂಬದ ಮಧ್ಯೆ ಕಾನೂನು ಹೋರಾಟ ನಡೆಯುತ್ತಿದ್ದು, ಮಡಿವಾಳ ಸಮಾಜದ ಎಲ್ಲ ಹಿರಿಯರು ಬಂದು ನನ್ನನ್ನು ಭೇಟಿ ಆಗಿದ್ದರು. ಮಡಿವಾಳ ಸಮಾಜ ನಮ್ಮ ಜಾಗ ಅಂತಿದ್ದಾರೆ. ಪೋಲಪ್ಪ ಅವರು ನಮ್ಮದು ಅಂತಿದ್ದಾರೆ. ಈ ವಿಚಾರವಾಗಿ ನಾಲ್ಕು ತಿಂಗಳ ಹಿಂದೆ ಕರೆದು ಸಂಧಾನ ಮಾಡಿದ್ದೆ ಎಂದರು.

ನಿನ್ನೆ ನಾನೇ ಪೋಲಪ್ಪ ಅವರಿಗೆ ದೂರವಾಣಿ ಕರೆ ಮಾಡಿದ್ದೆ, ನಂತರ ಮಡಿವಾಳ ಸಮಾಜದವರೊಂದಿಗೆ ದಾಖಲೆ ಹಾಗೂ ಸ್ಥಳ ಪರಿಶೀಲನೆಗೆ ಹೋಗಿದ್ದೆ. ಈ ವೇಳೆ ನಗರಸಭೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ನಾನು ಯಾವುದೇ ಬೆದರಿಕೆಯಾಗಲಿ, ಜಾತಿ ನಿಂದನೆಯಾಗಲಿ ಮಾಡಿಲ್ಲ. ಮಾತುಕತೆ ವೇಳೆ ನಮ್ಮ ವಿರುದ್ಧವಾಗಿ ಮಾತನಾಡಿ ದೌರ್ಜನ್ಯ ಮಾಡಬಾರದು ಎಂದು ಅವರೇ ಮಾತನಾಡಿದ್ದರು. ಅದು ಪೋಲಪ್ಪ ಪಿತಾರ್ಜಿತ ಆಸ್ತಿ ಅಲ್ಲ. ಪೋಲಪ್ಪನ ಪತ್ನಿಯ ಕುಟುಂಬಕ್ಕೆ ಸೇರಿದ ಆಸ್ತಿ ಆಗಿದೆ ಎಂದು ಹೇಳಿದ್ದೆ ಎಂದರು.

ಸಮಾಜದ ಜನರು ಹೆಚ್ಚಿದ್ದ ಹಿನ್ನೆಲೆ ಎಲ್ಲರೂ ಮಾತನಾಡುವ ವೇಳೆ ನಾನೇ ನಗರಸಭೆ ಅಧಿಕಾರಿಗಳಿಗೆ ದಾಖಲೆಗಳನ್ನ ಪರಿಶೀಲನೆ ನಡೆಸಲು ಹೇಳಿದ್ದೆ. ಸಂಜೆ ನಂತರ ಪೋಲಪ್ಪ ಕುಟುಂಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸುದ್ದಿ ತಿಳಿದುಬಂದಿದೆ. ಪೋಲಪ್ಪ ಯಾವ ಜಾತಿ ಅಂತಾ ಸಹ ನನಗೆ ಗೊತ್ತಿಲ್ಲ. ನಾನು ಜಾತಿ ನಿಂದನೆ ಮಾಡಿಲ್ಲ. ಕಾನೂನಿಗಿಂತ ನಾನು ದೊಡ್ಡವನಲ್ಲ. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರೆ ದಾಖಲೆಗಳನ್ನ ಕೊಡಲಿ, ನಾನು ಜಾತಿ ನಿಂದನೆ ಮಾಡಿದ್ದು ನಿಜ ಆಗಿದ್ದರೆ ಕ್ರಮ ಕೈಗೊಳ್ಳಲಿ ಎಂದರು.

ಸಚಿವನಾದರೂ ಪೊಲೀಸರು ತನಿಖೆ ನಡೆಸಲಿ, ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲನೆ ನಡೆಸಲಿ. ನಾನು ಅವರನ್ನ, ಅವರ ಮಕ್ಕಳನ್ನ ಸುಡುವ ಮಾತುಗಳನ್ನ ಹೇಳಿಲ್ಲ. ಇತಂಹ ಅವಕಾಶಗಳನ್ನ ಅವರು ಬಳಸಿಕೊಳ್ಳಲು ಮುಂದಾಗಿದ್ದಾರೆ. ನಾನು ಈ ಪ್ರಕರಣವನ್ನ ಬೆಳಸಲು ಇಷ್ಟಪಡಲ್ಲ ಎಂದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!