ಚಾಮರಾಜನಗರ: ಶಾಲೆಗೆ ಬಂದ ಕರಡಿ, ಶಿಕ್ಷಕರ ವಿಶ್ರಾಂತಿ ಕೊಠಡಿಗೂ ಎಂಟ್ರಿಕೊಟ್ಟು ತಿಂಡಿ ಸೇವನೆ
ಗಡಿ ನಾಡು ಚಾಮರಾಜನಗರ ಜಿಲ್ಲೆಯಲ್ಲಿ ಕರಡಿ ದಾಳಿ ಮುಂದುವರಿದಿದೆ. ಇತ್ತೀಚೆಗೆ ಮೊಟ್ಟೆಗಳನ್ನು ತಿನ್ನುತ್ತಿದ್ದ ಕರಡಿಯನ್ನು ಸೆರೆ ಹಿಡಿದ ನಂತರ ಇದೀಗ ಮತ್ತೊಂದ ಕರಡಿ ಪ್ರತ್ಯಕ್ಷಗೊಂಡಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸಂದನಪಾಳ್ಯದಲ್ಲಿರುವ ಶಾಲೆಗೆ ನುಗ್ಗಿದ ಕರಡಿ, ಶಿಕ್ಷಕರ ವಿಶ್ರಾಂತಿ ಕೊಠಡಿಗೆ ಎಂಟ್ರಿಕೊಟ್ಟು ಆಹಾರ ಪದಾರ್ಥಗಳನ್ನು ತಿಂದು ಹೋಗಿದೆ.
ಚಾಮರಾಜನಗರ, ಡಿ.15: ಗಡಿ ನಾಡು ಜಿಲ್ಲೆಯಲ್ಲಿ (Chamarajanagara) ಕರಡಿ ದಾಳಿ (Bear Attack) ಮುಂದುವರಿದಿದೆ. ಇತ್ತೀಚೆಗೆ ಮೊಟ್ಟೆಗಳನ್ನು ತಿನ್ನುತ್ತಿದ್ದ ಕರಡಿಯನ್ನು ಸೆರೆ ಹಿಡಿದ ನಂತರ ಇದೀಗ ಮತ್ತೊಂದ ಕರಡಿ ಪ್ರತ್ಯಕ್ಷಗೊಂಡಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಸಂದನಪಾಳ್ಯದಲ್ಲಿರುವ ಶಾಲೆಗೆ ನುಗ್ಗಿದ ಕರಡಿ, ಶಿಕ್ಷಕರ ವಿಶ್ರಾಂತಿ ಕೊಠಡಿಗೆ ಎಂಟ್ರಿಕೊಟ್ಟು ಆಹಾರ ಪದಾರ್ಥಗಳನ್ನು ತಿಂದು ಹೋಗಿದೆ.
ನಿನ್ನೆ ಮಧ್ಯರಾತ್ರಿ ಸಂದನಪಾಳ್ಯದ ಸೇಂಟ್ ಆಂಟೋನಿಸ್ ಶಾಲೆಗೆ ನುಗ್ಗಿದ ಕರಡಿ, ಶಾಲೆಯ ಸ್ಟೋರ್ ರೂಮ್ ಹಾಗೂ ಶಿಕ್ಷಕರ ವಿಶ್ರಾಂತಿ ಕೋಣೆಗೆ ನುಗ್ಗಿ ಪೀಠೋಪಕರಣಗಳನ್ನು ಮುರಿದು ಆಹಾರ ಪದಾರ್ಥಗಳನ್ನು ತಿಂದು ಹಾಕಿದೆ.
ಇದನ್ನೂ ಓದಿ: ಕೊಪ್ಪಳ: ಕಲ್ಲಂಗಡಿ ತಿನ್ನಲು ಹೊಲಕ್ಕೆ ನುಗ್ಗಿದ ಕರಡಿಯನ್ನು ಅಟ್ಟಾಡಿಸಿದ ನಾಯಿ, ವಿಡಿಯೋ ಇಲ್ಲಿದೆ
ರಾತ್ರಿ 1 ಗಂಟೆ ಸಮಯದಲ್ಲಿ ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕರಡಿ ಬೀರುಬಾಗಿಲನ್ನು ಮುರಿದು ಅದರೊಳಗಿದ್ದ ಅಡುಗೆ ಎಣ್ಣೆ, ಬೆಲ್ಲ ಮುಂತಾದ ಪದಾರ್ಥಗಳನ್ನು ಭಕ್ಷಿಸಿದೆ. ಕೊಠಡಿ ಬಾಗಿಲು ಮುರಿದು ಕರಡಿ ಒಳನುಗ್ಗುತ್ತಿರುವ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಂದು ಬೆಳಿಗ್ಗೆ ಮುಖ್ಯಶಿಕ್ಷಕ ಲೂಯಿಸ್ ನೇಸನ್ ಅವರು ಶಾಲೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕರಡಿ ದಾಳಿಯಿಂದ ಶಾಲಾ ಆಡಳಿತ ಮಂಡಳಿ ಆತಂಕಕ್ಕೊಳಗಾಗಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:59 am, Fri, 15 December 23