AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಕ್ಕೆ ಟಾರ್ಚರ್​​: ಕಾಡಿನ ಮಕ್ಕಳಿಗೆ ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆಯಿಂದ ಕಿರುಕುಳ ಆರೋಪ

Chamarajanagar News: ಲೋಕಾಯುಕ್ತಕ್ಕೆ ದೂರು ನೀಡಿದ ದ್ವೇಷಕ್ಕಾಗಿ ಚಾಮರಾಜನಗರದ ಪಾಲಾರ್ ಹಾಡಿಯ ಆದಿವಾಸಿ ಸೋಲಿಗರಿಗೆ ಮನೆ ಕಟ್ಟಿಕೊಳ್ಳಲು ಬಿಡದೆ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಡಿ ಜನತೆಗೆ ತೊಂದರೆ ಕೊಡದಂತೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಸಂಸದ ಸುನೀಲ್ ಬೋಸ್ ಸೂಚಿಸಿದ್ದು, ಮನೆ ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ತಿಳಿಸಿದ್ದರು. ಹೀಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಯ ಕಿರುಕುಳ ಮಾತ್ರ ತಪ್ಪಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಕ್ಕೆ ಟಾರ್ಚರ್​​: ಕಾಡಿನ ಮಕ್ಕಳಿಗೆ ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆಯಿಂದ ಕಿರುಕುಳ ಆರೋಪ
ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆಯಿಂದ ಕಿರುಕುಳ ಆರೋಪImage Credit source: Tv9 Kannada
ಸೂರಜ್ ಪ್ರಸಾದ್ ಎಸ್.ಎನ್
| Edited By: |

Updated on:Jul 05, 2026 | 9:19 AM

Share

ಮುಖ್ಯಾಂಶಗಳು

  • DRFO ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೇ ಆಯ್ತಾ ಶಾಪ?
  • ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಿರುಕುಳ
  • ಪಾಲಾರ್ ಹಾಡಿಯ ಆದಿವಾಸಿ ಸೋಲಿಗರಿಂದ ಗಂಭೀರ ಆರೋಪ

ಚಾಮರಾಜನಗರ, ಜುಲೈ 05: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಆರ್​​ಎಫ್​​ಒ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಪಾಲಾರ್ ಹಾಡಿಯ ಆದಿವಾಸಿ ಸೋಲಿಗರಿಗೆ ಕಳೆದ ಒಂದು ವರ್ಷದಿಂದ ಮನೆ ಕಟ್ಟಿಕೊಳ್ಳಲು ಬಿಡದೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಇಲಾಖೆ ಸಿಬ್ಬಂದಿ ಅಂಧಾ ದರ್ಬಾರ್ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಸಂಸದರು, ಜಿಲ್ಲಾಧಿಕಾರಿಗಳ ಸೂಚನೆಗೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ನಮಗೆ ನ್ಯಾಯ ಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಒಂದು ಮನೆಗೆ 1 ಸಾವಿರದಂತೆ 18 ಮನೆಗೆ 18 ಸಾವಿರ ರೂಪಾಯಿ ಹಣವನ್ನು ಡಿಆರ್​​ಎಫ್​​ಒ ಭೋಜಪ್ಪ ವಸೂಲಿ ಮಾಡಿದ್ದರಂತೆ. ಈ ಸಂಬಂಧ ಸೋಲಿಗ ಮುಖಂಡ ನಾಗೇಂದ್ರ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ರೆಡ್ ಹ್ಯಾಂಡ್ ಆಗಿ ಭೋಜಪ್ಪರನ್ನು ಲೋಕಾಯುಕ್ತ ಅಧಿಕಾರಿಗಳು ಲಾಕ್ ಮಾಡಿದ್ದರು. ಬಳಿಕ ಪ್ರಕರಣ ಸಂಬಂಧ ಅವರನ್ನು ಅಮಾನತು ಕೂಡ ಮಾಡಲಾಗಿತ್ತು. ಇದೇ ಕಾರಣಕ್ಕೆ ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆ ಸಿಬ್ಬಂದಿ ಹಿಂಸೆ ನೀಡುತ್ತಿದ್ದಾರೆ. ಲೋಕಾಯುಕ್ತದಲ್ಲಿ ಕೇಸ್ ನಡೆಯುತ್ತಿದೆ. ಹೀಗಾಗಿ ನೀವು ಮನೆ ಕಟ್ಟುವಂತಿಲ್ಲವೆಂದು ಧಮ್ಕಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಲೋಕಾಯುಕ್ತ ಕೇಸ್​​ಗೂ ಮನೆ ಕಟ್ಟೋಕು ಏನು ಸಂಬಂಧ ಎಂಬ ಪ್ರಶ್ನೆ ಇಲ್ಲಿಯವರದ್ದು.

ಇದನ್ನೂ ಓದಿ: ಮೂರ್ನಾಲ್ಕು ತಿಂಗಳಿನಿಂದ 400ಕ್ಕೂ ಹೆಚ್ಚು ಮಂದಿಗೆ ಸಿಗ್ತಿಲ್ಲ ವೃದ್ಧಾಪ್ಯ ವೇತನ

ಸಂಸದರ ಸೂಚನೆಗೂ ಇಲ್ಲ ಕಿಮ್ಮತ್ತು!

ಹಾಡಿ ಜನತೆಗೆ ತೊಂದರೆ ಕೊಡದಂತೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಸಂಸದ ಸುನೀಲ್ ಬೋಸ್ ಸೂಚಿಸಿದ್ದು, ಮನೆ ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ತಿಳಿಸಿದ್ದರು. ಹೀಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಯ ಕಿರುಕುಳ ಮಾತ್ರ ತಪ್ಪಿಲ್ಲ. ಹಕ್ಕು ಪತ್ರ ಹೊಂದಿದ್ದರೂ ಮನೆ ಕಟ್ಟಲು ಬಿಡದೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ದೂರಲಾಗಿದೆ. ಫಾರೆಸ್ಟ್ ಗಾರ್ಡ್ ಚಂದ್ರು ನಿರಂತರ ಕಾಟ ಕೊಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಕಾಡಿನ ಮಕ್ಕಳು ಗಾಳಿ, ಮಳೆ, ಚಳಿಗೆ ತತ್ತರಿಸಿ ಹೋಗಿದ್ದು, ಸುಭದ್ರ ಸೂರು ನಿರ್ಮಿಸಿಕೊಳ್ಳಲು ಇನ್ನಾದರೂ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:13 am, Sun, 5 July 26

Follow Us
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಾನಿನ್ನೂ ಬದುಕಿದ್ದೇನೆ; ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ನಾನಿನ್ನೂ ಬದುಕಿದ್ದೇನೆ; ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
‘ಏನಾದ್ರು ಆಗ್ಲಿ, ನಾನು ಕ್ಷಮೆ ಕೇಳಲ್ಲ’: ಸೋನು ಗೌಡ ದಿಟ್ಟ ಮಾತು
‘ಏನಾದ್ರು ಆಗ್ಲಿ, ನಾನು ಕ್ಷಮೆ ಕೇಳಲ್ಲ’: ಸೋನು ಗೌಡ ದಿಟ್ಟ ಮಾತು
‘ಪ್ಯಾಟೆ ಮಂದಿ..’ ರಿಯಾಲಿಟಿ ಶೋ ಸ್ಪರ್ಧಿ ಪದ್ದು ನಿಧನ: ನಡೆದಿದ್ದೇನು?
‘ಪ್ಯಾಟೆ ಮಂದಿ..’ ರಿಯಾಲಿಟಿ ಶೋ ಸ್ಪರ್ಧಿ ಪದ್ದು ನಿಧನ: ನಡೆದಿದ್ದೇನು?
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!