ಕುಡಿದ ಮತ್ತಲ್ಲಿ ಸಿಕ್ಕ ಸಿಕ್ಕವರಿಗೆ ಕಚ್ಚಿದ ಯುವಕ: ಮೂವರು ಪೊಲೀಸ್ ಸಿಬ್ಬಂದಿ ಸೇರಿ ಹಲವರಿಗೆ ಗಾಯ
ಚಿಕ್ಕಬಳ್ಳಾಫುರ ನಗರದ ಎಂ.ಜಿ ರಸ್ತೆಯಲ್ಲಿ ಕುಡಿದ ಮತ್ತಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಸಿಕ್ಕ ಸಿಕ್ಕವರಿಗೆ ಮನಬಂದಂತೆ ಯುವಕ ಕಚ್ಚಿರುವಂತಹ ಘಟನೆ ನಡೆದಿದೆ. ಗಾಯ ಮಾಡಿದ ವ್ಯಕ್ತಿಯನ್ನು ಹಿಡಿದು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರ ಮನವಿಗೂ ಸ್ಪಂದಿಸದೆ ಯುವಕ ರಂಪಾಟ ಮಾಡಿದ್ದಾನೆ. ಇತ್ತೀಚೆಗೆ ನಗರದಲ್ಲಿ ಓರ್ವ ಬೈಕ್ ಸವಾರ ಹೆಲ್ಮೆಟ್ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸ್ ಪೇದೆಯ ಕೈಕಚ್ಚಿದ್ದ.
ಚಿಕ್ಕಬಳ್ಳಾಫುರ, ಫೆಬ್ರವರಿ 28: ಕುಡಿದ (drunkard) ಮತ್ತಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಸಿಕ್ಕ ಸಿಕ್ಕವರಿಗೆ ಮನಬಂದಂತೆ ಯುವಕ ಕಚ್ಚಿರುವಂತಹ ಘಟನೆ ನಗರದ ಎಂ.ಜಿ ರಸ್ತೆಯಲ್ಲಿ ಘಟನೆ ನಡೆದಿದೆ. ಮಹೇಶ್ ಎನ್ನುವ ಯುವಕನಿಂದ ಕೃತ್ಯವೆಸಗಲಾಗಿದೆ. ಶೇಖರ್, ಪೆಂಚಲಯ್ಯ, ಅಶ್ವತ್ಥ್ ಎಂಬ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯ ಮಾಡಿದ ವ್ಯಕ್ತಿಯನ್ನು ಹಿಡಿದು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರ ಮನವಿಗೂ ಸ್ಪಂದಿಸದೆ ಯುವಕ ರಂಪಾಟ ಮಾಡಿದ್ದಾನೆ.
ಪೊಲೀಸ್ ಪೇದೆಯ ಕೈಕಚ್ಚಿದ್ದ ಬೈಕ್ ಸವಾರ
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಓರ್ವ ಬೈಕ್ ಸವಾರ ಹೆಲ್ಮೆಟ್ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸ್ ಪೇದೆಯ ಕೈಕಚ್ಚಿದ್ದ. ಬೆಂಗಳೂರಿನ ವಿಲ್ಸನ್ ಗಾರ್ಡನ್ 10ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿತ್ತು. ಬಳಿಕ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಕರೆಸಿ ಬೈಕ್ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಅಲ್ಲದೇ ಬೈಕ್ ಸವಾರನ ವಿರುದ್ಧ ಸಂಚಾರಿ ಪೊಲೀಸರು ದೂರು ದಾಖಲಿಸಲಾಗಿತ್ತು.
ಇದನ್ನೂ ಓದಿ: ಹಳೆಯದಾದ ಮೊಬೈಲ್ಗಳು; ಗ್ಯಾರಂಟಿ ಯೋಜನೆಗಳ ಸರ್ವೆಗೆ ಅಂಗನವಾಡಿ ಕಾರ್ಯಕರ್ತೆಯರ ಪರದಾಟ
ಹೆಲ್ಮೆಟ್ ಹಾಕದಿರುವ ಬೈಕ್ ಸವಾರನನ್ನು ಸಂಚಾರಿ ಪೊಲೀಸ್ ಪೇದೆ ಅಡ್ಡಹಾಕಿದ್ದರು. ಬಳಿಕ ಹೆಲ್ಮೆಟ್ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿ ಕೀ ಕಿತ್ತುಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ದಾದ ನಡೆದಿದ್ದು, ಕೊನೆಗೆ ಬೈಕ್ ಸವಾರ ಸಿಟ್ಟಿನಿಂದ ಕೀ ಕೊಡುವಂತೆ ಪೊಲೀಸ್ ಕಾನ್ಸ್ಟೇಬಲ್ ಕೈ ಕಚ್ಚಿದ್ದ. ಕೂಡಲೇ ಕಾನ್ಸ್ಟೇಬಲ್ ಹೊಯ್ಸಳಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು.
ಹಾವು ಕಡಿದು ಒಂಭತ್ತು ವರ್ಷದ ಬಾಲಕನೊಬ್ಬ ಸಾವು
ಕೊಡಗು: ಹಾವು ಕಡಿದು ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಕೊಡಗು-ಮೈಸೂರು ಗಡಿ ಗ್ರಾಮ ಕೊಪ್ಪದಲ್ಲಿ ಸಂಭವಿಸಿತ್ತು. ಮೂಲತಃ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದ ಪೊನ್ನಪ್ಪ-ಪವಿತ್ರ ದಂಪತಿಯ ಪುತ್ರ ಒಂಭತ್ತು ವರ್ಷದ ದೇವಯ್ಯ ಸಾವನ್ನಪ್ಪಿದ ಬಾಲಕ ಪವಿತ್ರ ತನ್ನಿಬ್ಬರು ಮಕ್ಕಳ ಜೊತೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ಹಳೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಪವಿತ್ರ ಅವರ ಮೊದಲ ಪುತ್ರ 9 ವರ್ಷದ ಬಾಲಕ ದೇವಯ್ಯ ನಿನ್ನೆ ಮಧ್ಯ ರಾತ್ರಿ ಸುಮಾರು 1 ಗಂಟೆ ವೇಳೆಗೆ ತಾಯಿಯನ್ನ ಕರೆದು ಅಳುತ್ತಾ ಕೈ ತುಂಬಾ ಉರಿಯುತ್ತಿದೆ ಅಮ್ಮಾ ಅಂತದಿದ್ದಾನೆ.
ಇದನ್ನೂ ಓದಿ: ಹಾದಿ ತಪ್ಪಿದ ಹೆದ್ದಾರಿ ಪ್ರಾಧಿಕಾರ, ಸಾವಿನ ದಾರಿಯಾದ ಬೆಂಗಳೂರು-ಹೈದರಾಬಾದ್ ರಾಷ್ಟ್ರಿಯ ಹೆದ್ದಾರಿ… ಸ್ಥಳೀಯರ ಹೆಣಗಾಟ!
ತಾಯಿ ಮೊಬೈಲ್ ಟಾರ್ಚ್ ಬಿಟ್ಟು ನೋಡಿದಾಗ ಬೆಡ್ ಮೇಲಿನಿಂದ ಒಂದು ಹಾವು ಇಳಿದು ಓಡಿದೆ. ತಕ್ಷಣವೇ ಕೈ ಪರಿಶೀಲಿಸಿದಾಗ ಮಣಿಗಂಟಿನಲ್ಲಿ ಹಾವು ಕಚ್ಚದ ಗುರುತು ಕಂಡಿತ್ತು. ತಕ್ಷಣವೇ ತಾಯಿ ಮನೆಯ ಮಾಲೀಕರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ದೌಡಾಯಿಸಿದ್ದರು. ಆದರೆ ಮಾರ್ಗ ಮಧ್ಯದಲ್ಲೇ ಬಾಲಕ ದೇವಯ್ಯ ಕೊನೆಯುಸಿರೆಳೆದಿದ್ದ.
ಬಹುಷಃ ಹಾವು ಕಚ್ಚಿ ಬಹಳ ಹೊತ್ತಾದ ಮೇಲೆ ಬಾಲಕನಿಗೆ ಅರಿವಾಗಿರಬೇಕೇನೋ. ವಿಷ ದೇಹಸೇರಿ ಬಾಲಕನ ಜೀವ ತೆಗೆದಿತ್ತು. ವಿಚಿತ್ರ ಅಂದರೆ ಈ ಮನೆಯ ಸುತ್ತ ಹಲವು ದಿನಗಳಿಂದ ಹಾವೊಂದು ಓಡಾಡುವುದನ್ನು ಸ್ಥಳೀಯರು ಮತ್ತು ಸ್ವತಃ ಈ ಮನೆಯವರೂ ಗಮನಿಸಿದ್ದರು. ಬಾಲಕನ ಸೋದರ ಮಾವ ಇಲ್ಲಿಗೆ ಆಗಮಿಸಿದ್ದಾಗ ಹಾವನ್ನು ನೋಡಿ ಅದನ್ನು ಕೊಲ್ಲುವುದು ಬೇಡ ಎಂದು ಬಿಟ್ಟಿದ್ದರಂತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.