AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂತ್ರೂ ನಿಂತ್ರೂ ಯಾರೋ ಎದುರುಗಡೆ ಬಂದ ಅನುಭವ: ವಿಚಿತ್ರವಾಗಿ ವರ್ತಿಸಿ ಮಹಿಳೆ ಸಾವು

ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಕುಂತ್ರೂ ನಿಂತ್ರೂ ಯಾರೋ ಎದುರುಗಡೆ ಬಂದ ಅನುಭವದಿಂದ ಹೆದರಿ ವಿಚಿತ್ರವಾಗಿ ವರ್ತಿಸಿ ಕೊನೆಗೆ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ತೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸದ್ಯ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂತ್ರೂ ನಿಂತ್ರೂ ಯಾರೋ ಎದುರುಗಡೆ ಬಂದ ಅನುಭವ: ವಿಚಿತ್ರವಾಗಿ ವರ್ತಿಸಿ ಮಹಿಳೆ ಸಾವು
Lady DeathImage Credit source: tv9 kannada
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Mar 26, 2026 | 7:40 PM

Share

ಚಿಕ್ಕಬಳ್ಳಾಪುರ, ಮಾರ್ಚ್​ 26: ಗಂಡು ದೆವ್ವವೊಂದು ಕೊಡಬಾರದ ಕಾಟ ಕೊಡುತ್ತಿದೆ ಅಂತ ಭಯಗೊಂಡಿದ್ದ ಓರ್ವ ಮಹಿಳೆ ಕೊನೆಗೂ ವಿಚಿತ್ರವಾಗಿ ವರ್ತಿಸಿ ಮೃತಪಟ್ಟಿರುವಂತಹ (death) ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುಳಾ(36) ಮೃತ ಮಹಿಳೆ. ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಮಂಜುಳಾರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು? 

ಮಂಜುಳಾ ಅವರು ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿ ಗ್ರಾಮದವರು. ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿ ಗ್ರಾಮದ ರಮೇಶ್​ ಎನ್ನುವವರನ್ನು ಮದುವೆಯಾಗಿ 16 ವರ್ಷವಾಗಿದೆ. ದಂಪತಿ ಮಧ್ಯೆ ಯಾವುದೇ ಸಮಸ್ಯೆ ಇರಲಿಲ್ಲವಂತೆ. ಆದರೆ ಇತ್ತೀಚೆಗೆ ತವರು ಮನೆಗೆ ಹೋಗಿದ್ದು, ಮಾವನ ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದರಂತೆ.

ಇದನ್ನೂ ಓದಿ: ದೆವ್ವ ಹಿಡಿದಿದೆ ಎಂದು ಕಟ್ಟಿಗೆಯಿಂದ ಹೊಡೆದು ಕೊಲೆ: ಕಲಬುರಗಿ ಮೂಲದ ಮಹಿಳೆ ಮಹಾರಾಷ್ಟ್ರದಲ್ಲಿ ಸಾವು

ವಾಪಸ್ ಗಂಡನ ಮನೆಗೆ ಬರುತ್ತಿದ್ದಂತೆ ವಿಚಿತ್ರವಾಗಿ ವರ್ತಿಸುವುದು, ಕುಂತ್ರು ನಿಂತ್ರು ಯಾರೋ ಎದುರುಗಡೆ ಬಂದು ಕಾಟ ಕೊಡುತ್ತಿರುವ ಅನುಭವ ಆಗುತ್ತಿತ್ತಂತೆ. ಹೀಗಾಗಿ ಪತಿ ರಮೇಶ್​ ಕೆಲಸ ಕಾರ್ಯ ಬಿಟ್ಟು ಒಂದು ವಾರದಿಂದ ದೇವರು ದಿಂಡಿರು, ಮಂತ್ರವಾದಿ ಎಂದು ಅಲೆದಾಡಿದ್ದಾರೆ. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಮಂತ್ರವಾದಿ ಬಳಿ ಹೋಗಿ ತಾಯತ ಕಟ್ಟಿಸಿದ್ದರು. ಆದರೂ ವಾಸಿಯಾಗಿರಲಿಲ್ಲ. ಬಳಿಕ ವೈದ್ಯರ ಬಳಿ ತೋರಿಸಿದರೂ ಏನೂ ಪ್ರಯೋಜನವಾಗಿಲ್ಲ. ವಿಚಿತ್ರವಾಗಿ ವರ್ತಿಸಿ ಕೊನೆಗೆ ಪ್ರಾಣವನ್ನೇ ಬಿಟ್ಟಿದ್ದಾರೆ.

ಮೃತಳ ತಾಯಿ ಆಕ್ರೋಶ

ಯಾರೋ ದೊಡ್ಡಬಳ್ಳಾಪುರದ ಸುನಿಲ್ ಎನ್ನುವವರ ದೃಶ್ಯ ಕಣ್ಮುಂದೆ ಬರುತ್ತೆ. ತಾಳುವುದಕ್ಕೆ ಆಗುತ್ತಿಲ್ಲ ಅಂತ ಚಡಪಡಿಸುತ್ತಿದ್ದರೆಂದು ರಮೇಶ್ ಹೇಳಿದ್ದಾರೆ. ಇತ್ತ ಮಂಜಳಾ ತವರು ಮನೆಯವರು ಏಕೆ ನಮಗೆ ಮೊದಲೇ ಹೇಳಲಿಲ್ಲ. ಸತ್ತ ಮೇಲೆ ಹೇಳಿದ್ದಾರೆ ಅಂತ ಮೃತಳ ತಾಯಿ ಗಂಗಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಾಟ-ಮಂತ್ರ ಮಾಡುತ್ತಿದ್ದ ಪೂಜಾರಿಯ ಬರ್ಬರ ಹತ್ಯೆ: ಅಮಾವಾಸ್ಯೆಯಂದೇ ಕೃತ್ಯವೆಸಗಿದ ದುಷ್ಕರ್ಮಿಗಳು

ಮಂಜುಳಾರಿಗೆ ದೆವ್ವ, ಭೂತದ ಕಾಟನೋ ಇಲ್ಲಾ ಯಾರದ್ದಾದರೂ ಭಯನೋ ಗೊತ್ತಿಲ್ಲ. ಮನೋರೋಗ ತಜ್ಞರ ಬಳಿ ಚಿಕಿತ್ಸೆ ಕೊಡಿಸಿದ್ದರೆ ಮಂಜುಳಾ ಬದುಕುಳಿಯುತ್ತಿದ್ದರೋ ಏನೋ, ಮಂತ್ರವಾದಿಗಳ ಮಾತು ಕೇಳಿ, ದೆವ್ವದ ಭೀತಿಯಿಂದ ಆಚೆ ಬರದೆ ಮೃತಪಟ್ಟಿರುವುದು ಮಾತ್ರ ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
ಹವಾಮಾನ ಇಲಾಖೆಯ ಯಾವ ಅಲರ್ಟ್ ಏನನ್ನು ಸೂಚಿಸುತ್ತೆ?
ಹವಾಮಾನ ಇಲಾಖೆಯ ಯಾವ ಅಲರ್ಟ್ ಏನನ್ನು ಸೂಚಿಸುತ್ತೆ?
ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ
ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ